BIGBOSS Kannada News: ಬಿಗ್ಬಾಸ್ ಕನ್ನಡ 10 ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಈಗಾಗಲೇ ಹುಲಿ ಉಗುರು ಧರಿಸಿ ಸುದ್ದಿಯಾಗಿದ್ದ ವರ್ತೂರು ಸಂತೋಷ್ ಬಗ್ಗೆ ಇನ್ನೊಂದು ಗುಟ್ಟು ರಟ್ಟಾಗಿದೆ. ಅದೇನಂದ್ರೆ ವರ್ತೂರು ಸಂತೋಷ್ ತನಗೆ ಮದುವೆಯಾಗಿಲ್ಲ. ತಾನು ಸಿಂಗಲ್ ಅಂತಾ ಹೇಳ್ತಿದ್ರು, ಆದರೆ ಅವರ ಮದುವೆಯ ವೀಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದುವೆಯಾಗಿದ್ದು ನಿಜ ಎಂಬುದು ಸಾಬೀತಾಗಿದೆ.
ಇಷ್ಟೇ ಅಲ್ಲದೇ, ವರ್ತೂರು ಸಂತೋಷ್ ಮದುವೆಗೆ 10ರಿಂದ 12 ಸಾವಿರ ಜನ ಬಂದು, ವಧುವರರಿಗೆ ಆಶೀರ್ವಾದ ಮಾಡಿದ್ದರು. ಅಷ್ಟು ಗ್ರ್ಯಾಂಡ್ ಆಗಿ ನಡೆದಿತ್ತು. ಇಷ್ಟೇ ಅಲ್ಲದೇ, ಸಂತೋಷ್‌ಗೆ ಒಂದು ಮಗು ಕೂಡ ಇದೆಯಂತೆ. ಆದರೆ ಸಂತೋಷ್ ಮತ್ತು ಅವರ ಪತ್ನಿಯ ನಡುವೆ ಜಗಳವಾಗಿದ್ದು, ಇದೀಗ ಅವರಿಬ್ಬರೂ ದೂರವಾಗಿದ್ದಾರೆ.
ಯಾಕೆ ಜಗಳವಾಯ್ತು ಅಂತಾ ಕಾರಣ ಹುಡುಕಿದಾಗ, ಸಂತೋಷ್ ಡ್ರಿಂಕ್ಸ್ ಮಾಡಿ, ಪತ್ನಿಗೆ ಹಿಂಸೆ ನೀಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಹಾಗಾಗಿ ಪತ್ನಿ ತನ್ನ ತವರು ಮನೆಗೆ ಪದೇ ಪದೇ ಹೋಗುತ್ತಿದ್ದರು. ಆದರೂ ವರ್ತೂರು ಮಾವ ಸೋಮನಾಥ್ ಅವರು ಪತಿ-ಪತ್ನಿಗೆ ತಿದ್ದಿ ಬುದ್ಧಿ ಹೇಳಿ, ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಇಷ್ಟಾದರೂ ಸಂತೋಷ್ ಸುಧಾರಿಸದ ಕಾರಣ, ಅವರ ಪತ್ನಿ ಅವರನ್ನು ಬಿಟ್ಟು, ತವರು ಮನೆ ಸೇರಿದ್ದಾರೆ ಎಂಬ ಆರೋಪವಿದೆ.
ಪತ್ನಿ ಅದಾಗಲೇ ಗರ್ಭಿಣಿಯಾಗಿದ್ದು, ಅವಳಿಗೆ ಮಗು ಹುಟ್ಟಿದಾಗಲೂ, ಅದನ್ನು ನೋಡಲು ಕೂಡ ಸಂತೋಷ್ ಬಂದಿರಲಿಲ್ಲವಂತೆ. ಮಗುವಿಗೆ ಸದ್ಯ 2 ವರ್ಷವಾಗಿದ್ದು, ಮಗುವನ್ನು ನೋಡಲು ಸಂತೋಷ್ ಒಂದು ದಿನವೂ ಬರಲೇ ಇಲ್ಲ ಎಂದು ಸಂತೋಷ್ ಮಾವ ಆರೋಪಿಸಿದ್ದಾರೆ. ವರ್ತೂರು ಸಂತೋಷ್ ಕುಟುಂಬದಲ್ಲಿ 50ರಿಂದ 60 ಜನರಿದ್ದಾರೆ. ಅವರ್ಯಾರೂ ಮಗುವನ್ನು ನೋಡಲು ಬಂದಿಲ್ಲ. ನಾವೆಲ್ಲ ಬುದ್ಧಿ ಹೇಳಿದರೂ, ಸಂತೋಷ್ ಅದನ್ನು ಕೇಳಲಿಲ್ಲ. ಈಗ ಬಿಗ್ಬಾಸ್ ಮನೆಗೆ ಹೋಗಿ, ನಾನು ಅನ್‌ಮ್ಯಾರಿಡ್ ಎಂದು ಸುಳ್ಳು ಹೇಳುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆಯಾಗಿ, ಕೃಷಿಕನಾಗಿದ್ದಕ್ಕೆ, ಜನ ವರ್ತೂರು ಸಂತೋಷ್‌ರನ್ನು ಮೆಚ್ಚಿಕೊಂಡಿದ್ದರು. ಹುಲಿ ಉಗುರು ಧರಿಸಿದ ಆರೋಪ ಬಂದಾಗಲೂ, ಜನ ಅವರನ್ನು ಬಿಟ್ಟುಕೊಡಲಿಲ್ಲ. ಪುನಃ ಬಿಗ್ಬಾಸ್ ಬಂದ ಮೇಲೂ, ಜನ ವೋಟ್ ಮಾಡಿ, ಸಂತೋಷ್ ಅವರನ್ನು ಬಿಗ್‌ಬಾಸ್ ಮನೆಯಲ್ಲೇ ಉಳಿಸಿದ್ದಾರೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ ತನೀಶಾ ಮತ್ತು ವರ್ತೂರು ಲವ್ ಮಾಡ್ತಾ ಇದ್ದಾರೆ ಅನ್ನೋ ಗಾಸಿಪ್ ಬೇರೆ ಕೇಳಿ ಬರ್ತಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ, ವರ್ತೂರು ಮದುವೆ ವೀಡಿಯೋ ಹರಿದಾಡುತ್ತಿದ್ದು, ಜನ ಸಂತೋಷ್ ಮೇಲಿನ ಅಭಿಮಾನವನ್ನು ಕಳೆದುಕೊಳ್ಳುತ್ತಿದ್ದಾರೆ.
ಮೇಲೆ ಸರಳರಾಮಯ್ಯ, ಒಳಗೆ ಐಶಾರಾಮಯ್ಯ: ಸಿಎಂ ವಿರುದ್ಧ ಮಾಜಿ ಸಿಎಂ ವ್ಯಂಗ್ಯ ..!
‘ಬಿಜೆಪಿಯವರು ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಅಪ್ಪಿತಪ್ಪಿಯೂ ಹೋರಾಡಿದವರಲ್ಲ’
‘ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬರಲಿ, ಯಾವುದೇ ಕ್ರಮ ಕೈಗೊಳ್ಳಲಿ, ನಾನು ರೆಡಿ’