Sunday, September 8, 2024

Latest Posts

‘ಈಗ್ಲೂ ನಾವು ಗರ್ಲ್‌ ಫ್ರೆಂಡ್‌- ಬಾಯ್ ಫ್ರೆಂಡ್ ಥರಾನೇ ‘

- Advertisement -

ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಇದರ ಜೊತೆ ಅವರಿಗೆ ಲೈಫ್ ಪಾರ್ಟ್ನರ್‌ ಸಿಕ್ಕಿದ್ದು ಹೇಗೆ..? ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಅನ್ನೋ ಬಗ್ಗೆಯೂ ಗೌತಮಿ ಮಾತನಾಡಿದ್ದಾರೆ.

ಫಸ್ಟ್ ಪಿಯುಸಿನಲ್ಲಿದ್ದಾಗ ಸತ್ಯ ನಾಗಪಂಚಮಿ ಅನ್ನೋ ಸಿರಿಯಲ್‌ನಲ್ಲಿ ನಟಿಸಲು ಶುರು ಮಾಡಿದ್ದರು. ಸೆಕೆಂಡ್ ಪಿಯುಸಿ ಕಂಪ್ಲೀಟ್ ಆಗುವ ಹೊತ್ತಿಗೆ ಸಿರಿಯಲ್ ಶೂಟಿಂಗ್ ಕೂಡ ಮುಗಿದಿತ್ತು. ನಂತರ ಡಿಗ್ರಿ ಫಸ್ಟ್ ಇಯರ್ ಮುಗಿದಾಗ, ಲೂಟಿ ಅನ್ನುವ ಸಿನಿಮಾದ ಆಫರ್ ಸತ್ಯ ಅವರನ್ನ ಹುಡುಕಿಕೊಂಡು ಬಂದಿತ್ತು. ಇದಾದ ಬಳಿಕ ಆದ್ಯಾ, ಕಿನಾರೆ ಅನ್ನುವ ಸಿನಿಮಾದಲ್ಲಿ ಸತ್ಯ ನಟಿಸಿದ್ರು. ಇದಾದ ಬಳಿಕ ಸತ್ಯ ಅನ್ನೋ ಪಾತ್ರದ ಮೂಲಕ ಗೌತಮಿ ಆಡಿಯನ್ಸ್ ಮುಂದೆ ಬಂದ್ರು.

ಇನ್ನು ಕಿನಾರೆ ಅನ್ನುವ ಸಿನಿಮಾದಲ್ಲಿ ಗೌತಮಿ ನಟಿಸುತ್ತಿರುವಾಗ, ಅಲ್ಲಿ ಸಿನಿಮಾಟೋಗ್ರಾಫರ್ ಆಗಿ ಬಂದವರು ಅಭಿಷೇಕ್ ಕಾಸರಗೋಡು. ಈ ಸಿನಿಮಾಗೆ 52 ಜನ ಹಿರೋಯಿನ್ಗಳು ಆಡಿಷನ್ ಕೊಟ್ಟಿದ್ದು, ಅದರಲ್ಲಿ ಗೌತಮಿಯವರೇ ಸೆಲೆಕ್ಟ್ ಆಗಿದ್ದು. ಹಾಗಾಗಿ ಅಭಿಷೇಕ್ ಗೌತಮಿಯವರನ್ನ ಕುರಿತು, 52 ಜನ ಹಿರೋಯಿನ್‌ನಲ್ಲಿ ಇವಳೇನಾ ನಿಮಗೆ ಸಿಕ್ಕಿದ್ದು ಅಂತಾ ತಮಾಷೆ ಮಾಡಿದ್ದರಂತೆ. ಆದ್ರೆ ಅದನ್ನ ಸತ್ಯ ಸಿರಿಯಸ್ ಆಗಿ ತೆಗೆದುಕೊಂಡು, ಅವರೊಂದಿಗೆ 2 ವರ್ಷ ಮಾತನಾಡಿರಲಿಲ್ಲವಂತೆ.

ಇದಾದ ಬಳಿಕ, ಅಭಿಷೇಕ್ ಮೊಬೈಲ್ ವಾಲ್‌ಪೇಪರ್‌ನಲ್ಲಿ ತಮ್ಮ ಫೋಟೋ ಇರುವುದನ್ನು ಗಮನಿಸಿದ್ದ ಗೌತಮಿಗೆ ಫುಲ್ ಖುಷಿಯಾಗಿತ್ತು. ಇದಾದ ಬಳಿಕ, ಫ್ರೆಂಡ್‌ಶಿಪ್ ಮುಂದುವರಿದು. ಆ ಗೆಳೆತನ ಪ್ರೀತಿಗೆ ತಿರುಗಿ, ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಸತ್ಯ, ನಾವು ಈಗಲೂ ಗರ್ಲ್‌ಫ್ರೆಂಡ್ ಬಾಯ್‌ಫ್ರೆಂಡ್ ಇರೋ ರೀತಿಯೇ ಇದ್ದೇವೆ ಅಂತಾ ಹೇಳಿದ್ದಾರೆ.

- Advertisement -

Latest Posts

Don't Miss