ಏಕದಿನ, ಟೆಸ್ಟ್ ಆವೃತ್ತಿಗಳನ್ನು ಐಸಿಸಿ ರಕ್ಷಿಸಲಿ: ಕಪಿಲ್ ದೇವ್

ಹೊಸದಿಲ್ಲಿ:ಭಾರತ ಕ್ರಿಕೆಟ್ ದಂತಕತೆ ಕಪಿಲ್ ದೇವ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದು ಐಸಿಸಿಗೆ ಮನವಿ ಮಾಡಿದ್ದಾರೆ.

ಜಾಗತಿಕ ಕ್ರೀಡೆಯನ್ನು ಫ್ರಾಂಚೈಸಿ ಮಾದರಿಯ ಟೂರ್ನಿಗಳು ಕ್ರೀಡೆಯನ್ನು ನುಂಗಿ ಹಾಕುತ್ತಿವೆ.ದಿನ ಕಳೆದಂತೆ ಯೂರೋಪ್ ನಲ್ಲಿ ಕ್ರಿಕೆಟ್  ಫುಟ್ಬಾಲ್ನಂತೆ ಸಾಗುತ್ತಿದೆ. ಉಭಯ ಸರಣಿಗೆ ಮಹತ್ವ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.

ಉಭಯ ಸರಣಿಯ ಭವಿಷ್ಯ ಅದರಲ್ಲೂ ಏಕದಿನ ಆವೃತ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬೆನ್ ಸ್ಟೋಕ್ಸ್ ನಂತಹ ಆಟಗಾರರು ಬೇಗೆನೆ ನಿವೃತ್ತಿಯಾಗುತ್ತಿದ್ದಾರೆ. ನ್ಯೂಜಿಲೆಂಡ್ ತಂಡದ ವೇಗಿ ಟ್ರೆಂಟ್ ಬೌಲ್ಟ್ ಒಪ್ಪಂದಗಳನ್ನು ಮುಂದೂಡಿದರು.

ವಿಶ್ವ ಕ್ರಿಕೆಟ್ ನಲ್ಲಿ ಕ್ರಿಕೆಟ್ ವೇಳಾಪಟ್ಟಿ ಹೆಚ್ಚಾಗುತ್ತಿದೆ. ಮುಂದಿನ ವರ್ಷದಿಂದ ಯುಎಇ ಮತ್ತು ದ.ಆಫ್ರಿಕಾ ಟಿ20 ಲೀಗ್ ಗಳು ಆರಂಭ ವಾಗಲಿದ್ದು ಕ್ರಿಕೆಟ್ ಬಿಡುವಿಲ್ಲದ ಕ್ರೀಡೆಯಾಗಲಿದೆ.

About The Author