Thursday, May 30, 2024

Latest Posts

ಹುಬ್ಬಳ್ಳಿಯಲ್ಲಿ ಮತ್ತೋರ್ವ ಪಾಗಲ್ ಪ್ರೇಮಿಯಿಂದ ಹರಿದ ನೆತ್ತರು.! – ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಯುವತಿ

- Advertisement -

Hubli News: ಹುಬ್ಬಳ್ಳಿ: ನೇಹಾ ಕೊಲೆಯಿಂದ ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿ ಈಗ ಮತ್ತೆ ಅಂತಹದ್ದೇ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಹೌದು. ಪಾಗಲ್ ಪ್ರೇಮಿಯೋರ್ವ ತಾನು ಪ್ರೀತಿಸಿದ ಯುವತಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಬುಧವಾರ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ನಡೆದಿದೆ.

ವೀರಾಪುರ ಓಣಿಯ 22 ವರ್ಷದ ಅಂಜಲಿ ಅಂಬಿಗೇರ ಎಂಬ ಯುವತಿಯೇ ಕೊಲೆಯಾದ ಯುವತಿಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿ ಈಕೆಯ ಪ್ರಿಯತಮ ವಿಶ್ವನಾಥ ಅಂತ ತಿಳಿದು ಬಂದಿದೆ. ಕಳೆದ 1 ವರ್ಷದಿಂದ ಇಬ್ಬರು ಕೂಡ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕಳೆದ ಒಂದು ವಾರದಿಂದ ಇಬ್ಬರ ನಡುವೆ ಕೆಲವು ವೈಯಕ್ತಿಕ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದಿತ್ತು ಎನ್ನಲಾಗುತ್ತಿದೆ.

ಹೀಗಾಗಿ ಇಂದು ಬೆಳಗಿನ ಜಾವ ವಿಶ್ವನಾಥ ಅಂಜಲಿ ವಾಸವಿದ್ದ ಮನೆಗೆ ಬಂದವನ್ನೇ ಮಲಗಿದ್ದ ಅಂಜಲಿ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಕೈಂ ರೇಟ್ ಹೆಚ್ಚಳವಾಗುತ್ತಿದ್ದು ಅದರಲ್ಲೂ ಪ್ರೀತಿಯ ವಿಚಾರಕ್ಕೆ ಯುವತಿಯರ ಕೊಲೆ ಆಗುತ್ತಿರೋದು ಹುಬ್ಬಳ್ಳಿಯ ಜನತೆಯನ್ನು ಆತಂಕಕ್ಕೆ ಎಡೆ ಮಾಡಿದ್ದಂತೂ ಸುಳ್ಳಲ್ಲ.

Divorce case: ಕುರ್‌ಕುರೆ ತಂದುಕೊಟ್ಟಿಲ್ಲವೆಂದು ಪತಿಗೆ ಡಿವೋರ್ಸ್ ಕೊಡಲು ರೆಡಿಯಾದ ಪತ್ನಿ

ನಟಿ ಛಾಯಾಸಿಂಗ್ ಮನೆಯಲ್ಲಿ ಕಳ್ಳತನ: ಮನೆಕೆಲಸದಾಕೆಯೇ ಮಾಡಿದ್ದಾ ಕಿತಾಪತಿ..?

ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ರಾಜಕೀಯ ಪ್ರೇರಿತವಾದುದ್ದು: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss