Arunachal Pradeshದಲ್ಲಿ ಹಿಮಪಾತ ಏಳು ಮಂದಿ  ಹಿಮದಡಿ ಸಮಾಧಿ..!

ಅರುಣಾಚಲ ಪ್ರದೇಶದ (Arunachal Pradesh) ಅತ್ಯಂತ ಎತ್ತರವಾದ ಕಾಮೆಂಗ್‌ನಲ್ಲಿ (Kameng) ಹಿಮಕುಸಿತ ಉಂಟಾಗಿದೆ. ಏಳು ಜನ ಸೇನಾ ಸಿಬ್ಬಂದಿ ಅದರಡಿಯಲ್ಲಿ  ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನಾ ಯೋಧರು (Indian Army Warriors) ಗಸ್ತು ತಿರುಗುತ್ತಿದ್ದರು ಅವರ ಮೇಲೆ ಹಿಮಕುಸಿತ (Avalanche) ಉಂಟಾಗಿದ್ದು ಏಳು ಮಂದಿ  ಹಿಮದಡಿ ಸಮಾಧಿಯಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಳೆದ ಹಲವು ದಿನಗಳಿಂದಲೂ ಇಲ್ಲಿ ಹಿಮಪಾತ ಆಗುತ್ತಲೇ ಇತ್ತು. ಆದರೆ ಭಾನುವಾರ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. ಘಟನೆ ನಡೆಯುತ್ತಿದ್ದಂತೆ ಯೋಧರ ರಕ್ಷಣೆಗಾಗಿ ವಿಶೇಷ ತರಬೇತಿ (Special training for the defense of warriors) ಪಡೆದ ಸೈನಿಕರ ತಂಡಗಳನ್ನು ಅಲ್ಲಿಗೆ ಕಳಿಸಲಾಗಿದೆ. ನಾಪತ್ತೆಯಾದವರ ಹುಡುಕಾಟ, ರಕ್ಷಣಾ ಕಾರ್ಯಾಚರಣೆ ಇನ್ನೂ ಕೂಡ ನಡೆಯುತ್ತಲೇ ಇದೆ.

About The Author