ಮುಂಬೈ: ಮೊನ್ನೆ ತಾನೇ ರಿಲೀಸ್ ಆಗಿದ್ದ ಪಠಾಣ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೀಗ ಡಂಕಿ ಸಿನಿಮಾ ಶೂಟಿಂಗ್ಗಾಗಿ ಶಾರುಖ್ ಕಾಶ್ಮೀರಕ್ಕೆ ತೆರಳಿ ಶೂಟಿಂಗ್ ಮುಗಿಸಿ ವಾಪಸ್ ಆಗಿದ್ದಾರೆ. ಮುಂಬೈ ಏರ್ಪೋರ್ಟ್ಗೆ ಬಂದಿಳಿದಿದ್ದಾರೆ. ಈ ವೇಳೆ ಏರ್ಪೋರ್ಟ್ನ ಓರ್ವ ಸಿಬ್ಬಂದಿ ಶಾರುಖ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಶಾರೂಖ್ ಅವರ ಕೈಯನ್ನ ತಳ್ಳಿಕೊಂಡು ಹೋಗಿದ್ದಾರೆ. ಮತ್ತು ಹಿಂದಿರುಗಿ ಗುರಾಯಿಸಿದ್ದಾರೆ.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಪಠಾಣ್ ಸಿನಿಮಾ ಹಿಟ್ ಆದ ಮೇಲೆ ಶಾರೂಖ್ಗೆ ಸೊಕ್ಕು ಬಂದಿದೆ. ಸೋ ಕಾಲ್ಡ್ ಸೆಲೆಬ್ರಿಟಿಗಳ ಆ್ಯಟಿಟ್ಯೂಡ್ ನೋಡಿ ಅಂತಾ ಕೆಲವರು ಹೇಳಿದ್ರೆ, ಇನ್ನೂ ಕೆಲವರು ಸೆಲ್ಫಿ ಕೊಡುವುದು ಬಿಡುವುದು ಅವರ ಇಷ್ಟ ಎಂದಿದ್ದಾರೆ. ಇನ್ನು ಕೆಲವರು, ಶಾರೂಖ್ನನ್ನು ಸೊಕ್ಕಿನವ ಎನ್ನುವವರು ಒಮ್ಮೆ ಅವರ ಜಾಗದಲ್ಲಿ ನಿಂತು ನೋಡಿ, ಅವರಿಗೆ ಶೂಟಿಂಗ್ನಲ್ಲಿ ಕೆಲಸ ಮಾಡಿ ಸುಸ್ತಾಗಿರುವುದಿಲ್ಲವೇ, ಬರೀ ಅಭಿಮಾನಿಗಳಿಗೆ ಸೆಲ್ಫಿ ಕೊಡುವುದೇ ಅವರ ಕೆಲಸ ವಾಗಿರುತ್ತದೆಯೇ,.? ಎಂದು ಶಾರೂಖ್ ಪರ ಬ್ಯಾಟ್ ಬೀಸಿದ್ದಾರೆ.
ಶಾರುಖ್ ಸೆಲ್ಫಿ ಕೊಡಲು ನಿರಾಕರಿಸಿದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ..
‘ನಾನು ಮಂಡ್ಯ ಗೌಡ್ತಿ. ಅದನ್ನ ನನ್ನಿಂದ ಯಾರೂ ಕಿತ್ತುಕೊಳ್ಳೋಕ್ಕೆ ಆಗಲ್ಲ’
Met Gala 2023: ಅಂಬಾನಿ ಪುತ್ರಿಯ ಕೋಟಿ ಬೆಲೆಬಾಳುವ ಡ್ರೆಸ್ ವಿಶೇಷತೆಗಳೇನು ಗೊತ್ತಾ..?
ಅನುಷ್ಕಾ ಪ್ರಭಾಸ್ಗೆ ಇಟ್ಟಿರುವ ನಿಕ್ನೇಮ್ ಎಷ್ಟು ಕ್ಯೂಟ್ ಆಗಿದೆ ನೋಡಿ..