Bollywood News: ಬಾಲಿವುಡ್ನಲ್ಲಿ ಸಖತ್ ಸದ್ದು ಮಾಡಿದ, ಕೋಟಿ ಕೋಟಿ ಬಾಚಿಕೊಂಡಿದ್ದ ಶೈತಾನ್ ಸಿನಿಮಾ ಓಟಿಟಿಗೆ ಬರಲು ಸಿದ್ಧವಾಗಿದೆ.
ಗುಜರಾತಿ ಭಾಷೆಯ ವಶ ಸಿನಿಮಾದ ರಿಮೇಕ್ ಆಗಿರುವ ಶೈತಾನ್ ಸಿನಿಮಾದಲ್ಲಿ ದಕ್ಷಿಣಭಾರತದ ನಟ ಆರ್. ಮಾಧವನ ಮಾಟಗಾರನಾಗಿ ಕಾಣಿಸಿಕೊಂಡು, ಗಮನ ಸೆಳೆದಿದ್ದರು. ಸ್ಮಾರ್ಟ್ ಆಗಿ ಕಾಣುವ ವ್ಯಕ್ತಿಯ ಹಿಂದೆ, ಇಂಥದ್ದೊಂದು ಕರಾಳ ಮುಖವಿದೆ ಅಂತಾ ಯಾರೂ ಊಹಿಸದ ರೀತಿ ಅವರ ಆ್ಯಕ್ಟಿಂಗ್ ಇತ್ತು. ಇನ್ನು ನಟಿ ಜ್ಯೋತಿಕಾ ಕೂಡ, ನಟ ಅಜಯ್ ದೇವಗನ್ ಪತ್ನಿಯಾಗಿ ನಟಿಸಿದ್ದರು.
ಹೇಗೆ ಮಾಟ ಮಾಡುವ ಮೂಲಕ, ತಿಂಡಿ ತಿನ್ನಿಸಿ ಕೂಡ, ಓರ್ವ ವ್ಯಕ್ತಿಯನ್ನು ವಶೀಕರಣ ಮಾಡಬಹುದು ಅಂತಾ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಅಲ್ಲದೇ, ಈ ಸಿನಿಮಾ ನೋಡಿ ಹಲವರು, ನಾನು ಇನ್ನು ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ ಅಂತಾ ಹೇಳುವಷ್ಟು ಹಾರರ್ ಆಗಿದೆ ಈ ಸಿನಿಮಾ.
ಇನ್ನು ಶೈತಾನ್ ಸಿನಿಮಾ ಓಟಿಟಿಗೆ ಬರಲು ಸಿದ್ಧವಾಗಿದೆ. ನಾಳೆಯಿಂದಲೇ ಸಿನಿಮಾ ಓಟಿಟಿಗೆ ಬರಲಿದ್ದು, ಮೊಬೈಲ್ನಲ್ಲೂ ಕೂಡ ಸಿನಿಮಾವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.
ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ
ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ




