Wednesday, September 17, 2025

Latest Posts

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

- Advertisement -

Movie News: ಅಜಯ್ ದೇವಗನ್, ಮಾಧವನ್ ನಟನೆಯ ಶೈತಾನ್ ಸಿನಿಮಾ 10 ದಿನದಲ್ಲೇ ನೂರು ಕೋಟಿ ಗಳಿಕೆ ದಾಟಿದೆ. ಈ ಮೂಲಕ ಹಲವು ದಿನಗಳ ಬಳಿಕ, ಬಾಲಿವುಡ್‌ನಲ್ಲಿ ಒಂದೊಳ್ಳೆ ಸಿನಿಮಾ ರಿಲೀಸ್ ಆಗಿದೆ ಅಂತಿದ್ದಾರೆ ಪ್ರೇಕ್ಷಕರು.

ತಾನು ಕಲಿತ ತಾಂತ್ರಿಕ ವಿದ್ಯೆಗಳ ಮೂಲಕ, ಓರ್ವ ಹೆಣ್ಣನ್ನು ವಶೀಕರಣ ಮಾಡಿಕೊಂಡು, ಮೊಬೈಲ್ ಚಾರ್ಜಿಂಗ್ ನೆಪ ಹೇಳಿ, ಮನೆಯೊಳಗೆ ನುಗ್ಗುವ ಮಾಟಗಾರ, ಆ ಮನೆಯ ಮಗಳನ್ನು ಹೇಗೆ ವಶೀಕರಣ ಮಾಡುತ್ತಾನೆ..? ಬಳಿಕ ಅವಳ ಅಪ್ಪ ಅಮ್ಮನನ್ನು ಹೇಗೆ ಹಿಂಸಿಸುತ್ತಾನೆ ಅನ್ನೋದು ಕಥೆ. ಹಾಗಾದ್ರೆ ಹೇಗೆ ಮಾಟಗಾರ, ಆ ಯುವತಿಯನ್ನು ಮಾಟ ಮಾಡುತ್ತಾನೆ..? ಅಪರಿಚಿತರು ಹೇಗೆ ನಮ್ಮನ್ನು ವಶೀಕರಣ ಮಾಡುತ್ತಾರೆ..? ಅಂತಾ ತಿಳಿಯಬೇಕು ಅಂದ್ರೆ, ನೀವು ಶೈತಾನ್ ಸಿನಿಮಾ ನೋಡಬೇಕು.

ಇನ್ನು ಸಿನಿಮಾ ಟ್ರೇಲರ್ ಸಖತ್ ಇಂಟ್ರೆಸ್ಟಿಂಗ್ ಇದ್ದು, ಇದನ್ನು ನೋಡಿಯೇ ಹಲವರು ಸಿನಿಮಾ ನೋಡಲು ಥಿಯೇಟರ್‌ಗೆ ಬಂದಿದ್ದಾರೆ. ಸೌತ್ ನಟಿ ಜ್ಯೋತಿಕಾ, ಅಜಯ್ ದೇವಗನ್ ಪತ್ನಿಯಾಗಿ ನಟಿಸಿದ್ದು, ಹಲವು ವರ್ಷಗಳ ಬಳಿಕ ಇವರನ್ನು ನೋಡೋವುದೇ ಇವರ ಫ್ಯಾನ್ಸ್‌ಗೆ ಒಂದು ಖುಷಿ.

ಗುಜರಾತಿ ಭಾಷೆಯ ವಶ್ ಎಂಬ ಸಿನಿಮಾ ರಿಮೇಕ್ ಇದಾಗಿದ್ದು, ಅದರಲ್ಲಿ ಮಾಟಕ್ಕೆ ಒಳಗಾಗುವ ಪಾತ್ರದಲ್ಲಿ ನಟಿಸಿದ್ದ, ಜಾನಕಿ ಬೋಡಿವಾಲಾನೇ, ರಿಮೇಕ್ ಸಿನಿಮಾ ಶೈತಾನ್‌ನಲ್ಲಿಯೂ ಅದೇ ಪಾತ್ರದಲ್ಲಿ ಮುಂದುವರೆದಿದ್ದಾರೆ.

ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

- Advertisement -

Latest Posts

Don't Miss