Sunday, September 8, 2024

Latest Posts

Shashikala Jolle ಖಾಸಗೀಕರಣವಲ್ಲ ದೇವಾಲಯಗಳ ಅಭಿವೃದ್ಧಿ..!

- Advertisement -

ದೇವಸ್ಥಾನಗಳನ್ನು ನಾವು ಖಾಸಗೀಕರಣ (Privatization) ಮಾಡುತ್ತಿಲ್ಲ, ದೈವ ಸಂಕಲ್ಪದ ಯೋಜನೆ(Plan of Divine Will)ಯಲ್ಲಿ ರಾಜ್ಯದ ದೇವಾಲಯಗಳನ್ನು ಅಭಿವೃದ್ಧಿ (Develop temples) ಮಾಡುತ್ತಿದ್ದೇವೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ (Minister of Muzarai Department Shashikala Jolle)ಇಂದು ವಿಕಾಸಸೌಧದಲ್ಲಿ ತಿಳಿಸಿದ್ದಾರೆ. ಈ ಮೂಲಕ ನಾವು ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುತ್ತಿದ್ದೇವೆ, ಈ ಸಂಬಂಧ ಸಮಗ್ರ ಮಾಹಿತಿಯನ್ನು ಸಂಗ್ರಹಣ ಮಾಡುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಸಿ ಗ್ರೇಡ್ ದೇವಸ್ಥಾನಗಳನ್ನು (C grade temples) ದಾನಿಗಳ ಸಹಾಯದಿಂದ ಅಭಿವೃದ್ಧಿ ಮಾಡಲು ನಿರ್ಧಾರ ಮಾಡಲಾಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅಭಿವೃದ್ಧಿಗೊಳಿಸುವುದು ನನ್ನ ಕನಸಾಗಿತ್ತು, ಯೋಜನೆಯ ಮೊದಲ ಹಂತದಲ್ಲಿ ಅಂದಾಜು ಮೊತ್ತ 1140 ಕೋಟಿ. ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ 25 ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ರೂಪಿಸುವ ಯೋಜನೆ ಇದಾಗಿದ್ದು 25 ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಭಕ್ತರು ಉಳಿದುಕೊಳ್ಳಲು ವಸತಿ ವ್ಯವಸ್ಥೆ, ರಸ್ತೆ, ಶೌಚಾಲಯ ಎಲ್ಲವನ್ನು ಅಭಿವೃದ್ಧಿ ಮಾಡುವುದು, ಪಾರಂಪರಿಕ ಶೈಲಿಯಲ್ಲಿ ಕಟ್ಟಡಗಳ ನಿರ್ಮಾಣ ಮಾಡುವುದು, ನನ್ನ ಮಾಡಲು ಪುಷ್ಕರಣಿ, ದಾಸೋಹ ಭವನ, ಭಕ್ತರಿಗೆ ಪಾರ್ಕಿಂಗ್ ವ್ಯವಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್ ಮಾಡಲು ನಿರ್ಧಾರ ಮಾಡಲಾಗಿದೆ. ಕಳೆದ ಬಜೆಟ್ ನಲ್ಲಿ ಇಲಾಖೆಗೆ 119 ಕೊಟ್ಟಿರುವ ಅನುದಾನ ಬಂದಿತ್ತು. ಈ ಬಾರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು 168 ಕೋಟಿ ನೀಡಿದ್ದಾರೆ. ಅನುದಾನ ನೀಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇನ್ನೂ ಯಾವುದೇ ತೀರ್ಮಾನ ಆಗಿಲ್ಲ, ಸ್ವಲ್ಪ ಸಮಯ ಹಿಡಿಯುತ್ತದೆ. ಬರುವ ಅಧಿವೇಶನದಲ್ಲಿ ಮಂಡನೆಯ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು. ಸಂಪುಟ ಪುನಾರಚನೆ ವಿಷಯ ಬಂದಾಗಲೆಲ್ಲ ಕೈ ಬಿಡುವವರ ಪಟ್ಟಿಯಲ್ಲಿ ನನ್ನ ಹೆಸರು ಮೊದಲು ಇರುತ್ತದೆ. ಆದರೆ, ನಮ್ಮ ಪಕ್ಷ ಹಾಗೂ ಹೈಕಮಾಂಡ್ ನನ್ನ ಕೈ ಬಿಟ್ಟಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿರುವ ನನ್ನನ್ನು ಈ ಮಟ್ಟಕ್ಕೆ ಪಕ್ಷ ಬೆಳೆಸಿದೆ, ಪಕ್ಷ ಹಾಗೂ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದಳಾಗಿದ್ದೇನೆ.

- Advertisement -

Latest Posts

Don't Miss