Tuesday, April 15, 2025

Latest Posts

ನಾಮಪತ್ರ ಸಲ್ಲಿಸಿದ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್

- Advertisement -

Political News: ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಇಂದು ನಾಮಪತ್ರ ಸಲ್ಲಿಸಿದ್ದು, ಗೀತಾ ಶಿವರಾಜ್‌ಕುಮಾರ್‌ಗೆ ಪತಿ ನಟ ಶಿವರಾಜ್‌ಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಾಥ್ ನೀಡಿದರು. ಸಹೋದರ ಮಧು ಬಂಗಾರಪ್ಪ ಸೇರಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಯಡಿಯೂರಪ್ಪ ಮಗ ಬಿ.ವೈ.ರಾಘವೇಂದ್ರ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಎಲೆಕ್ಷನ್‌ಗೆ ಅಭ್ಯರ್ಥಿಯಾಗಿ ತಮ್ಮ ಮಗನನ್ನು ಕಣಕ್ಕಿಳಿಸಬೇಕು ಎಂದು ಈಶ್ವರಪ್ಪ ಎಷ್ಟೇ ಪ್ರಯತ್ನಿಸಿದರೂ ಕೂಡ, ಈಶ್ವರಪ್ಪ ಮಗನಿಗೆ ಟಿಕೇಟ್ ಕೈ ತಪ್ಪಿ ಹೋಗಿತ್ತು.

ಹಾಗಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದ ಈಶ್ವರಪ್ಪ ಪಕ್ಷೇತರವಾಗಿ ನಾನು ಕಣಕ್ಕಿಳಿಯುತ್ತೇನೆ. ನನ್ನ ಸ್ಪರ್ಧೆ ಮೋದಿ ವಿರುದ್ಧವಲ್ಲ, ಅಪ್ಪ ಮಗನ ವಿರುದ್ಧ. ನಾನು ಗೆದ್ದರೆ, ಮೋದಿಗೆ ನನ್ನ ಬೆಂಬಲವಿರುತ್ತದೆ ಎಂದು ಈಶ್ವರಪ್ಪ ಹೇಳಿದರು.

ಒಳ್ಳೆ ಮಾರ್ಕ್ಸ್ ಕೊಡದಿದ್ದಲ್ಲಿ, ಶಿಕ್ಷಕರ ಮೇಲೆ ವಾಮಾಚಾರ ಮಾಡಿಸುವುದಾಗಿ ಬೆದರಿಕೆ

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ನಾನು 9 ತಿಂಗಳು ಜೈಲಿನಲ್ಲಿದ್ದಾಗ, ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ: ಜೋಶಿ ವಿರುದ್ಧ ವಿನಯ್ ಆರೋಪ

- Advertisement -

Latest Posts

Don't Miss