ಶಿವಮೊಗ್ಗ : ಶಿವಮೊಗ್ಗದಲ್ಲಿ ಇತ್ತೀಚಿಗೆ ಡಬಲ್ ಮರ್ಡರ್ (Double Murder) ಮರೆಯುವ ಮುನ್ನವೇ ಮತ್ತೊಂದು ಮರ್ಡರ್ ನಡೆದಿದೆ. ನಗರದ ಕಾಮತ್ ಪೆಟ್ರೋಲ್ ಬಂಕ್ (kamath Patrol Bunk) ಬಳಿ ಹರ್ಷ (Harsha) ಎಂಬಾತನ ಕೊಲೆಯಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲಾಗುತ್ತಿದ್ದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ (Doddapete Police Station) ಪ್ರಕರಣ ದಾಖಲಾಗಿದೆ. ಶಿವಮೊಗ್ಗ ನಗರದ (Shivamogga City) ಸೀಗೆಹಟ್ಟಿಯಲ್ಲಿ 26 ದ ಹರ್ಷ ಎಂಬ ಯುವಕನನ್ನು ನಿನ್ನೆ ರಾತ್ರಿ9 ಗಂಟೆ ಸಮಯದಲ್ಲಿ ಬರ್ಬರವಾಗಿ ಹತ್ಯ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹತ್ಯೆ ಆದ ಹರ್ಷ ಎಂಬ ಯುವಕ ಹಲವು ಹಿಂದೂ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಶಿವಮೊಗ್ಗ ನಗರದ ದೊಡ್ಟಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೊಡ್ಡ ಪೇಟೆ ಪೊಲೀಸ್ ಅಧಿಕಾರಿಗಳು ಯುವಕನನ್ನು ಮರ್ಡರ್ ಮಾಡಿದ ದುಷ್ಕರ್ಮಿಗಳನ್ನು ಬಂದಿಸಲು ತನಿಖೆ ನಡೆಸುತ್ತಿದ್ದಾರೆ.

