Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀ ರಾಜ್ಯ ರಾಜಕಾರಣ ಸೇರಿ ಹಲವು ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಮಳೆ ಸಾಕಷ್ಟು ಬರುತ್ತದೆ ಜಲ ಪ್ರಳಯವಾಗುತ್ತದೆ ಪ್ರಕೃತಿ ಮುನಿದು ಸರಿಯಾಗುತ್ತದೆ. ವಿಪರೀತವಾಗಿ ಜಲಪ್ರಳಯದಿಂದ ಜಾಗತಿಕ ಮಟ್ಟದ ಒಂದೆರಡು ರಾಷ್ಟ್ರಗಳು ಮುಚ್ಚುತ್ತವೆ. ಎಲ್ಲಿಯೋ ಆದ ಘಟನೆ ವಾಯುವ್ಯ ಮಾಲಿನ್ಯವಾಗಿ ಜನರು ಅಕಾಲಿಕ ಮರಣ ಹೊಂದುತ್ತಾರೆ. ಎಲ್ಲೋ ಹಾಕಿ ಬಾಂಬ್ ನಮ್ಮ ರಾಷ್ಟ್ರದ ಜನರ ಮೇಲೆ ಪರಿಣಾಮ ಬಿರುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ವಿಜಯ ದಶಮಿಯಿಂದ ಸಂಕ್ರಾಂತಿ ವರಿಗೆ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳತ್ತಾರೆ. ಆಳುವವರು ಅರಿತುಕೊಳ್ಳಬೇಕು ಇಲ್ಲದಿದ್ದರೆ ಅಪಾಯ ಕಟ್ಟಿದ ಬುತ್ತಿ. ಇದು ಬಹು ದೊಡ್ಡ ದುರ್ಘಟನೆ . ಕರುನಾಡಿಗೆ ಕೆಲವೊಂದು ಆಪ್ತು ಇದೆ ಕೆಲವು ಸಾವು ನೋವು ಸಂಭವಿಸುತ್ತವೆ. ಗೌರಿ ಶಂಕರ ಶಿವ ಶಿವ ಎಂದಿತು. ಭೂಮಿ ನಡುಗಿತು. ಮಳೆ ಬೆಳೆ ತಲ್ಲಣಗೊಂಡಿತು.ಜನರು ಆಪತ್ತುಗೊಂಡಾರು ಎನ್ನುವ ಮೂಲಕ ಶ್ರೀಗಳು ಎಚ್ಚರಿಕೆಯ ಭವಿಷ್ಯ ನುಡಿದಿದ್ದಾರೆ.
ನಾನು ಹೇಳಿದಾಗ ಒಂದು ಘಟನೆ ಆಗೇ ಆಗುತ್ತದೆ ಅದನ್ನು ತಪ್ಪಿಸಿಕೊಳ್ಳುವುದು ಆಳುವವರ ಕೈಯಲ್ಲಿದೆ. ಕಾಂಗ್ರೆಸ್ ಸರ್ಕಾರ ಸ್ಥಿರವಾಗಿರುತ್ತದೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ಒಳಿತಾಗುತ್ತದೆ. ಯಾವ ಮಹಿಳೆಗೆ ಸ್ವಾತಂತ್ರ್ಯ ಇರಲಿಲ್ಲ ಇವತ್ತು ಆಕೆ ಸ್ವಂತದಿಂದ ಓಡಾಡುತ್ತಿದ್ದಾಳೆ ಎಂದು ಕಾಂಗ್ರೆಸ್ ಆಡಳಿತದ ಬಗ್ಗೆ ಉತ್ತಮ ಭವಿಷ್ಯ ನುಡಿದಿದ್ದಾರೆ.
ಇನ್ನು ಲೋಕಸಭಾ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ. ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ. ಕಾದು ನೋಡಿ ಏನಾಗುತ್ತದೆ ಸಮಯ ಬಂದಾಗ ಹೇಳುವೆ. ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಪೂರೈಕೆ ಬಗ್ಗೆ ಮಾರ್ಮಿಕವಾಗಿ ನುಡಿದ ಶ್ರೀಗಳು, ಮೂಗು ಎಲ್ಲಾ ವಾಸನೆ ಗ್ರಹಿಸುತ್ತದೆ ಆದರೆ ಬಾಯಿಯಲ್ಲಿರುವ ಹೊಲಸನ್ನು ತೊರಿಸುವುದಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ: ಬಿಜೆಪಿಗೆ ಮತ್ತೊಂದು ಸವಾಲು…!
ಕೈಯಲ್ಲಿ ಗರುಡವಿದೆ ಎಂದು ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋದವನಿಗೆ 4 ಬಾರಿ ಹಾವು ಕಡಿತ
ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ