ಶೋಭಾ ಕರಂದ್ಲಾಜೆ ಬಹಿರಂಗ ಪ್ರಚಾರ, ಭಾಷಣ ನಿರ್ಬಂಧಿಸುವಂತೆ ಚುನಾವಣೆ ಆಯೋಗಕ್ಕೆ ದೂರು

Political News: ಸಂಸದೆ ಶೋಭಾ ಕರಂದ್ಲಾಜೆ ಅವರ ಬಹಿರಂಗ ಪ್ರಚಾರ ಮತ್ತು ಭಾಷಣಗಳನ್ನು ನಿರ್ಬಂಧಿಸುವಂತೆ, ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಪ್ರಚೋದನಕಾರಿ ಭಾಷಣಗಳಿಂದ ಕೋಮು ಗಲಭೆಗಳಿಗೆ ಕುಖ್ಯಾತರಾಗಿರುವ ಶೋಭಾ ಕರಾಂದ್ಲಾಜೆ ಅವರ ಭಾಷಣಗಳಿಗೆ ಅನುಮತಿ ನೀಡದಂತೆ ಜಿಲ್ಲಾ ಕಾರ್ಯದರ್ಶಿ ಕುಶಾಲ್ ಹರುವೆಗೌಡ ಮತ್ತು ಸಂಜಯ್ ಆಗ್ರಹಿಸಿದ್ದಾರೆ.

ಹಿಂದೂ-ಮುಸ್ಲಿಂ-ಕ್ರೈಸ್ತರು ಎಂಬ ಬೇಧ-ಭಾವವಿಲ್ಲದೆ , ಜಾತಿ-ಮತ-ಪಂಥಗಳನ್ನು ಮೀರಿ,
ಯಾವುದೇ ಪ್ರಚೋದನಕಾರಿ ಭಾಷಣಗಳಿಗೆ ಪ್ರೇರಿಪಿತರಾಗದೇ ಶಾಂತಿ-ಸೌಹರ್ದತೆಯಿಂದ ಭಾರತೀಯ ಸಹೋದರತ್ವವನ್ನು ಮೈಗೂಡಿಸಿಕೊಂಡು ಸಹಬಾಳ್ವೆಯಿಂದ ಬದುಕುತ್ತಿದ್ದೆವೆ ಎಂದು ಈ ದೂರಿನಲ್ಲಿ ಮನವಿ ಮಾಡಲಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಾದ್ಯಂತ ಇಂತಹ ದುರ್ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಜಿಲ್ಲಾ ಕಾರ್ಯದರ್ಶಿ ಕುಶಾಲ್ ಹರುವೆಗೌಡ ಮತ್ತು ಸಂಜಯ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಬಾಲಿವುಡ್‌ ಬೆಡಗಿ ಕಂಗನಾಗೆ ಬಿಜೆಪಿ ಟಿಕೇಟ್ ಘೋಷಣೆ: ಮಂಡಿ ಕ್ಷೇತ್ರದಿಂದ ಸ್ಪರ್ಧೆ..

ಗಾಲಿ ಜನಾರ್ಧನ ರೆಡ್ಡಿ ಮರಳಿ ಬಿಜೆಪಿಗೆ ಬಂದಿದ್ದು, ಬಾಹುಬಲಿ ರೀತಿಯಲ್ಲಿ ದೊಡ್ಡ ಶಕ್ತಿ ಬಂದಿದೆ: ಶ್ರೀರಾಮುಲು

ಉಜ್ಜಯನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ: ಹಲವರಿಗೆ ಗಾಯ

About The Author