Political News: ಮಾಜಿ ಸಚಿವ ಶ್ರೀರಾಮುಲು ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದು, ಸಾರ್ವಜನಿಕ ವೇದಿಕೆಗಳಲ್ಲಿ ಆಗಾಗ್ಗೆ ದಮ್ಮು , ತಾಕತ್ತಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಶ್ರೀಯುತ ಸಿದ್ದರಾಮಯ್ಯನವರೇ FSL ವರದಿ ಪೊಲೀಸರ ಕೈಗೆ 24 ಗಂಟೆಯಾಗಿದೆ. ಇದನ್ನು ಬಿಡುಗಡೆ ಮಾಡುವ ದಮ್ಮು ತಾಕತ್ತು ನಿಮ್ಮ ಸರ್ಕಾರಕ್ಕೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದ ಆವರಣದಲ್ಲೇ ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿರುವುದು FSL ವರದಿಯಲ್ಲಿ ಸಾಬೀತಾಗಿದೆ. ವರದಿ ಬಿಡುಗಡೆ ಆದರೆ, ನಿಮ್ಮ ಓಟ್ ಬ್ಯಾಂಕ್ ಕೈ ತಪ್ಪುವ ಭೀತಿ ಸರ್ಕಾರಕ್ಕೆ ಕಾಡುತ್ತಿರಬೇಕಲ್ಲವೇ? ಪಾಕಿಸ್ತಾನ ಜಿಂದಬಾದ್ ಎಂದು ಘೋಷಣೆ ಕೂಗಿರುವವರು ನಿಮ್ಮದೇ ಪಕ್ಷದ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗರು. ಅಂಗೈ ಹುಣ್ಣಿಗೆ ಯಾವ ಕನ್ನಡಿ ಬೇಕು..? ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವದ ನಿಜವಾದ ದೇಗುಲ ಎಂದರೆ ಶಾಸನಸಭೆ. ಅಂತಹ ಆವರಣದಲ್ಲೇ ದೇಶದ್ರೋಹಿ ಘೋಷಣೆ ಕೂಗಲು ಕುಮ್ಮಕ್ಕು ನೀಡಿರುವ ನಾಸಿರ್ ಹುಸೇನ್ ಅವರನ್ನು ಮೊದಲು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡುವ ತಾಕತ್ತು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಇದೆಯೇ.? ಎಂದು ಮಾಜಿ ಸಚಿವರು ಪ್ರಶ್ನಿಸಿದ್ದಾರೆ.
ದೇಶಕ್ಕೆ ಕಾಂಗ್ರೆಸ್ ಪಕ್ಷದಿಂದಲೇ ಸ್ವಾತಂತ್ರ್ಯ ಬಂದಿದೆ ಎಂದು ಹಸಿಸುಳ್ಳು ಹೇಳುವ ಸಿದ್ದರಾಮಯ್ಯನವರೇ ನಿಮಗೆ ಸಂವಿಧಾನದ ಮೇಲೆ ಕಿಂಚಿತ್ತಾದರೂ ಗೌರವ ಇದ್ದರೆ, ಮೊದಲು ಪಾಕಿಸ್ತಾನ ಬೆಂಬಲಿಗರ ಪರ ನಿಂತಿರುವ ನಾಸಿರ್ ಹುಸೇನ್ ಅವರನ್ನು ಪಕ್ಷದಿಂದ ಕಿತ್ತು ಹಾಕುವ ಧೈರ್ಯ ತೋರಿ. ಇಲ್ಲದಿದ್ದರೆ, ನಾವೇ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ವೇದಿಕೆಗಳಲ್ಲಿ
ಹಾಗಾಗ್ಗೆ ದಮ್ಮು , ತಾಕತ್ತಿನ ಬಗ್ಗೆ
ಮಾತನಾಡುವ ಮುಖ್ಯಮಂತ್ರಿ
ಶ್ರೀಯುತ @siddaramaiah ನವರೇ FSL ವರದಿ ಪೊಲೀಸರ ಕೈಗೆ 24 ಗಂಟೆಯಾಗಿದೆ. ಇದನ್ನು ಬಿಡುಗಡೆ ಮಾಡುವ ದಮ್ಮು ತಾಕತ್ತು ನಿಮ್ಮ ಸರ್ಕಾರಕ್ಕೆ ಇಲ್ಲವೇ? 1/5— B Sriramulu (@sriramulubjp) March 3, 2024
ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..
ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು