Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶ್ರೀಕಾಂತ್ ಪೂಜಾರ್ ರನ್ನ ಅನಗತ್ಯ ಬಂಧನ ವಿಚಾರವಾಗಿ ನಾನು ವಿವರಣೆ ಕೊಟ್ಟಿದ್ದೆ. ಆರ್ ಅಶೋಕ್ ನನ್ನ ಕ್ಷೇತ್ರದಲ್ಲಿ ಪ್ರತಿಭಟನೆಗೆ ಬರ್ತಾ ಇದ್ದಾರೆ. ಹೀಗಾಗಿ ಶ್ರೀಕಾಂತ್ ಯಾರು, ಆತನ ಹಿನ್ನೆಲೆ ಬಗ್ಗೆ ಪ್ರಸ್ತಾಪ ಮಾಡ್ತೇನೆ. ಕಾನೂನನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಹಿಂದೆ ಇದ್ದ ಎಲ್ಪಿಸಿ ಕೇಸ್ ಗಳನ್ನು ಅಂತ್ಯ ಮಾಡೋಕೆ ಆದೇಶ ಇತ್ತು. ಶಹರ ಪೊಲೀಸ್ ಠಾಣೆಯಲ್ಲಿ 61 ಎಲ್ಪಿಸಿ ಕೇಸ್ ಇವೆ. ಅದರಲ್ಲಿ 5 ಎಲ್ಪಿಸಿ ಕೇಸ್ ಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅದರಲ್ಲಿ ಇತನದ್ದು ಒಂದು ಕೇಸ್ ಇದೆ. ಈತನ ಪ್ರಕರಣದಲ್ಲಿ 13 ಜನ ಆರೋಪಿಗಳಿದ್ರು. ಅದರಲ್ಲಿ 8 ಜನ ಕೋರ್ಟ್ ಗೆ ಹಾಜರು ಆಗಿ ಕೇಸ್ ಕ್ಲಿಯರ್ ಮಾಡಿಕೊಂಡಿದ್ದಾರೆ. ಉಳಿದ 5 ಜನರಲ್ಲಿ ಒಬ್ಬ ಬೇಲ್ ತಗೊಂಡಿದ್ದಾನೆ.ಈತನು ಬೇಲ್ ತೆಗೆದುಕೊಳ್ಳಲು ರಜೆ ಇದ್ದ ಕಾರಣ ತಡವಾಗಿರಬಹುದು ಎಂದಿದ್ದಾರೆ.
ಡಿಸೆಂಬರ್ ಎಂಡ್ ಗೆ ಎಲ್ಲಾ ಕೇಸ್ ಗಳನ್ನು ಕ್ಲಿಯರ್ ಮಾಡೋದು ಪೋಲೀಸರ ಕಾರ್ಯ. ಒಬ್ಬ ರೌಡಿ ಶೀಟರ್ ಬಗ್ಗೆ ರಾಜ್ಯದ ವಿಪಕ್ಷ ನಾಯಕ ಬಂದು ಪ್ರತಿಭಟನೆ ಮಾಡೋದು. ಆತನನ್ನು ಕರ ಸೇವಕ ಅಂತಾ ಬಿಂಬಿಸುವುದು. ದೇವರನ್ನ ನಂಬೊರ ಮೇಲೆ ಕೇಸ್ ಮಾಫಿ ಮಾಡೋಕೆ ಆಗಲ್ಲ. ಕಾನೂನು ಅಡಿಯಲ್ಲಿ ಶಿಕ್ಷೆ ಕೊಡೋದು ನಿಯಮ. ಈತನ ಮೇಲೆ 9 ಸಾರಾಯಿ ಮಾರಾಟದ ಕೇಸ್ ಇದೆ. ಹುಬ್ಬಳ್ಳಿಯ ಅನೇಕ ಕಡೆಗಳಲ್ಲಿ ದೊಂಬಿ, ಮಟಕಾ ಕೇಸ್ ಗಳಿವೆ. ಆತನನ್ನು ಕರೆಯಿಸಿ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗಿದೆ. ಇಷ್ಟೆಲ್ಲಾ ಇದ್ರೂ ಆತನನ್ನು ಹೀರೊ ರೀತಿ ಬಿಂಬಿಸೋದು ಎಷ್ಟೋ ಸರಿ? ಎಂದು ಅಬ್ಬಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ಅವರ ಅಜೆಂಡಾನೆ ಜನರನ್ನು ಒಡೆಯೋದು. ಅದರಲ್ಲೂ ಒಬ್ಬ ಕ್ರಿಮಿನಲ್ ಪರವಾಗಿ ಹೀಗೆ ಮಾಡೋದು ಎಷ್ಟು ಸರಿ? ಇತನೊಬ್ಬನ್ನೇ ಬಂಧನ ಮಾಡಿಲ್ಲ, ಇತನೊಂದಿಗೆ ಇನ್ನೊಬ್ಬನನ್ನು ಬಂಧನ ಮಾಡಲಾಗಿದೆ. ಇದನ್ನ ದೊಡ್ಡದಾಗಿ ರಾಜಕೀಯ ಮಾಡೋದು ನಾಚಿಕೆ ಗೇಡು. ಅಧಿವೇಶನದಲ್ಲಿ ಉತ್ತರ ಪಡೆಯೋ ಬದಲು ಹಾಳು ಮಾಡಿದ್ರು. ಇವರಿಗೆ ಉತ್ತರ ಕರ್ನಾಟಕದ ಕಾಳಜಿ ಎಲ್ಲಿದೆ? ಕ್ರಿಮಿನಲ್ ಕೇಸ್ ಇದ್ದವನ ಪರವಾಗಿ ಗಲಾಟೆ ಮಾಡೋದು. ಜಾತಿಯ ಹೆಸರಲ್ಲಿ ವಿಷ ಬೀಜ ಬಿತ್ತಿ ಒಡೆಯುತ್ತಿದ್ದಾರೆ. ಜಿಲ್ಲೆಯಲ್ಲಿನ ಕೇಸ್ಗಳಲ್ಲಿ 36 ಜನರಲ್ಲಿ 10 ಜನ ಮುಸ್ಲಿಂ ಇದ್ದಾರೆ. ನಾವು ರಾಜಕೀಯ ಮಾಡ್ತಿಲ್ಲ. ಆ ಸಮಯದಲ್ಲಿ ಸಾಕಷ್ಟು ಹಾನಿಯಾಗಿತ್ತು, ಇಂತಹ ಕೇಸ್ ನಲ್ಲಿ ಬಂಧಿಸಿದ್ದು. ರಾಮ ಭಕ್ತರಿದ್ದೇವೆ ಅಂದ್ರೆ ಕ್ರಿಮಿನಲ್ ಕೇಸ್ ಹಾಕಬಾರದಾ? ಎಂದು ಅಬ್ಬಯ್ಯ ಪ್ರಶ್ನಿಸಿದ್ದಾರೆ.
ಬಿಜೆಪಿ ಅವರಿಗೆ ಅಷ್ಟು ಕಾಳಜಿ ಇದ್ದಿದ್ರೆ ಅವರ ಸರ್ಕಾರ ಇದ್ದಾಗ ಕೇಸ್ ಕ್ಲೋಸ್ ಮಾಡಬಹುದಿತ್ತಲ್ಲ? ಜೋಶಿ ಸಾಹೇಬ್ರು ರಾಜಕೀಯವಾಗಿ ಮಾತಾಡ್ತಾರೆ ಅವರೊಬ್ರೇನಾ ರಾಮ ಭಕ್ತರು? ನಾನು ಯಾವತ್ತು ಕ್ರಿಮಿನಲ್ಸ್‌ಗೆ ಸಪೋರ್ಟ್ ಮಾಡಲ್ಲ. ಹುಬ್ಬಳ್ಳಿ ಗಲಭೆಯಲ್ಲಿನ ಅಮಾಯಕರನ್ನು ಬಿಡಲು ಹೇಳಿದ್ದು. ಆತ ತನ್ನ ಎಲ್ಲಾ ತಪ್ಪನ್ನು ಒಪ್ಪಿಕೊಂಡಿದ್ದಾನೆ, ಎಲ್ಲಾ ಕೇಸ್ ಗಳು ಪ್ರೂ ಆಗಿದೆ ಆತ ಅಮಾಯಕನಲ್ಲ. ಆರ್ ಅಶೋಕ್ ಅವರೇ ಈ ಹಿಂದೆ ನೀವು ಮಾಡಿದ ಗಲಾಟೆಯಿಂದ ಹುಬ್ಬಳ್ಳಿ ಮಾರುಕಟ್ಟೆ ಚೇತರಿಸಿಕೊಳೋದಕ್ಕೆ 10 ವರ್ಷ ಬೇಕಾಯ್ತು. ಇಂತಹ ಘಟನೆ ಮತ್ತೆ ಮಾರುಕಳಿಸಬಾರದು ಎಂದ ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.
ಅಯೋಧ್ಯೆಗೆ ಹೋಗಲು ನಿರಾಕರಿಸುತ್ತಿದ್ದವರೂ ಈಗ ಆಹ್ವಾನ ಬಯಸುತ್ತಿದ್ದಾರೆ: ಯೋಗಿ ಆದಿತ್ಯವಾಥ್
ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್
ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದ ಮಂಗಳಮುಖಿ..