Sunday, May 26, 2024

Latest Posts

ರಾಜ್ಯದ ಮಹಿಳೆಯರಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕೊಡುತ್ತಿರುವುದು ಲವ್ ಜಿಹಾದ್ ಭಾಗ್ಯ: ಅರವಿಂದ್‌ ಬೆಲ್ಲದ್

- Advertisement -

Dharwad News: ಧಾರವಾಡ: ಹುಬ್ಬಳ್ಳಿಯಲ್ಲಿ ಯುವತಿ ಗರ್ಭಿಣಿ ಪ್ರಕರಣದ ಬಗ್ಗೆ ಬಿಜೆಪಿ ಸಮಾವೇಶದಲ್ಲಿ ಮಾತನಾಡಲಾಯಿತು. ಧಾರವಾಡದಲ್ಲಿ ಬಿಜೆಪಿ ಮಹಿಳಾ ಮತ್ತು ಯುವ ಮೋರ್ಚಾ ಸಮಾವೇಶ ನಡೆಯುತ್ತಿದ್ದು, ಈ ವೇಳೆ ವಿಷಯ ಪ್ರಸ್ತಾಪಿಸಿದ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್, ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಆಗಿದೆ ಎಂದಿದ್ದಾರೆ.

17 ವರ್ಷದ ಹುಡುಗಿಯನ್ನು ಮುಸ್ಲಿಂ ಸಮಾಜದ ಹುಡುಗ ಪ್ರೆಗ್ನೆಂಟ್ ಮಾಡಿದ್ದಾನೆ. ಎಂಎಲ್‌ಸಿ ಆದರೂ ಕೇಸ್ ಆಗಿಲ್ಲ. ಪೊಲೀಸರು ಆತನನ್ನು ಹಿಡಿದಿಲ್ಲ. ಇದು ಸಿದ್ದರಾಮಯ್ಯ ಕೊಡುತ್ತಿರೋ ಲವ್ ಜಿಹಾದ್ ಭಾಗ್ಯ. ರಾಜ್ಯದ ಮಹಿಳೆಯರಿಗೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕೊಡುತ್ತಿರುವುದು ಲವ್ ಜಿಹಾದ್ ಭಾಗ್ಯ. ನಾವು ನಾವಾಗಿ ಉಳಿಯಬೇಕು. ಭಾರತೀಯತೆ ಉಳಿಯಬೇಕಾದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಸುಳ್ಳು ಭರವಸೆ ಮೂಲಕ ಮುಗ್ಧ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. 17 ವರ್ಷದ ಎಸ್ಸಿಎಸ್ಟಿ ಹುಡುಗಿ ಪ್ರೆಗ್ನೆಂಟ್ ಆಗಿದಾಳೆ. ಆದರೂ ಆರೋಪಿ ಅರೆಸ್ಟ್ ಮಾಡಿಲ್ಲ. ಅತ್ಯಾಚಾರ ಮಾಡಿದರೂ ಅರೆಸ್ಟ್ ಮಾಡಿಲ್ಲ. ಕಾಂಗ್ರೆಸ ಮಾಡುತ್ತಿರುವ ರಾಜ್ಯ ಇದು. ದಲಿತರು, ಹಿಂದುಳಿದವರ ಹೆಸರಿನಲ್ಲಿ ಮತ ಪಡೆಯುತ್ತಾರೆ. ಆದರೆ ಸಾಬರ ಕೆಲಸ ಮಾಡುತ್ತಾರೆ ಎಂದು ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.

ಇದು ಮೋದಿ-ಪ್ರಹ್ಲಾದ ಜೋಶಿ ಚುನಾವಣೆಯಲ್ಲಿ, ಮೋದಿ ಮೂರನೇ ಸಲ ಪ್ರಧಾನಿಯಾಗದಿದ್ದರೆ ಹಿಮಾಲಯಕ್ಕೆ ಹೋಗಿ ಕುಳಿತುಕೊಳ್ಳುತ್ತಾರೆ. ಅವರಿಗೆ ಹೆಂಡತಿ-ಮಕ್ಕಳಿಲ್ಲ. ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ ಹಿಮಾಲಯಕ್ಕೆ ಹೋಗಬಹುದು. ಆದರೆ ಅವರು ದೇಶಕ್ಕಾಗಿ ಮತ್ತೊಮ್ಮೆ ಪ್ರಧಾನಿಯಾಗಬೇಕಿದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಸದ್ದಾಂ ಎಂಬುವವನಿಂದ ಅಪ್ರಾಪ್ತೆ ಗರ್ಭಿಣಿ ಕೇಸ್ – ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು

ಲವ್ ಜಿಹಾದ್ ಜಾಲ ವ್ಯಾಪಕವಾಗಿದೆ, ದೊಡ್ಡಮಟ್ಟದ ತನಿಖೆಯಾಗಬೇಕು: ಸಿ.ಟಿ.ರವಿ..!

ಕಾಂಗ್ರೆಸ್ ತುಷ್ಟಿಕರಣ ರಾಜಕಾರಣದಿಂದ ಎಲ್ಲೆಡೆಯೂ ಕೊ*ಲೆ, ಲವ್ ಜಿಹಾದ್ ನಡೆಯುತ್ತಿದೆ: ವಿಜಯೇಂದ್ರ..!

- Advertisement -

Latest Posts

Don't Miss