- Advertisement -
ಬಾಗಲಕೋಟೆ: ಬಾದಾಮಿಗೆ ಭೇಟಿ ನೀಡಿದ್ದ ವೇಳೆ ಶೂ ಎತ್ತಿಕೊಡಲು ಪಕ್ಷದ ಮುಖಂಡ ಮುಂದಾದಾಗ ಮಾಧ್ಯಮದವರನ್ನು ನೋಡಿದ ಸಿದ್ದರಾಮಯ್ಯ ಆತನನ್ನು ತಡೆದು ತಾವೇ ಶೂ ಹಾಕಿಕೊಂಡ ಪ್ರಸಂಗ ನಡೆಯಿತು.
ಬಾದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿಯೇ ಬಿಚ್ಚಿಟ್ಟಿದ್ದ ತಮ್ಮ ಶೂವನ್ನು ಹಾಕಿಕೊಳ್ಳಲು ಮುಂದಾದರು. ಆ ವೇಳೆ ಏಕಾಏಕಿ ಅಲ್ಲಿಗೆ ಬಂದ ಪಕ್ಷದ ಮುಖಂಡ ಮಹಾಂತೇಶ ಹಟ್ಟಿ ಎಂಬಾತ ಸಿದ್ದರಾಮಯ್ಯರಿಗೆ ಶೂವನ್ನು ಹಾಕಲು ಮುಂದಾಗಿದ್ದ. ಈ ವೇಳೆ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, ಆತನನ್ನು ತಡೆದು ‘ಬಿಡಪ್ಪಾ.. ನಾನೇ ಹಾಕೋತೀನಿ, ಇಲ್ಲೇ ಟಿವಿಯವರು ಇದ್ದಾರೆ’ ಅಂತ ಎಚ್ಚರಿಸಿ ತಾವೇ ಶೂ ಹಾಕಿಕೊಂಡು ಅಲ್ಲಿಂದ ಹೊರಟರು.
ಕಾಂಗ್ರೆಸ್ ಸೋತಿದ್ದಕ್ಕೆ ಕೊನೆಗೂ ಬಯಲಾಯ್ತು ಕಾರಣ…!! ಕೈ ನಾಯಕರ ಮುಂದಿನ ನಡೆ ಏನು..? ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -