Thursday, December 26, 2024

Latest Posts

‘ಸ್ವತಃ ಸಿದ್ದರಾಮಯ್ಯನೇ ರಾಮ, ಅವರು ಆ ರಾಮನಿಗೆ ಹೋಗಿ ಯಾಕೆ ಪೂಜೆ ಮಾಡಬೇಕು..?’

- Advertisement -

Political News: ಸಿಎಂ ಸಿದ್ದರಾಮಯ್ಯನವರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಹೆಚ್.ಆಂಜನೇಯ, ಸ್ವತಃ ಸಿದ್ದರಾಮಯ್ಯನವರೇ ರಾಮ. ಅವರೇಕೆ ಆ ರಾಮನಿಗೆ ಪೂಜೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿ ಮಾಜಿ ಸಚಿವರು, ನಮ್ಮ ಸಿದ್ದರಾಮಯ್ಯನವರೇ ರಾಮ. ಅವರೇಕೆ ರಾಮನಿಗೆ ಪೂಜೆ ಮಾಡಬೇಕು. ಸಿದ್ದರಾಮಯ್ಯವರನ್ನು, ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಕರೆಯದಿದ್ದದ್ದೇ ಒಳ್ಳೆದಾಯ್ತು. ಅವರ ಊರಲ್ಲೂ ರಾಮಮಂದಿರವಿದೆ. ಸಿದ್ದರಾಮಯ್ಯನಹುಂಡಿಯಲ್ಲೇ ರಾಮ ಮಂದಿರವಿದೆ. ಅವರು ಅಲ್ಲೇ ಪೂಜೆ ಮಾಡುತ್ತಾರೆ. ಅಯೋಧ್ಯೆಗೆ ಯಾಕೆ ಹೋಗಬೇಕು..? ಅದು ಬಿಜೆಪಿಯ ರಾಮ. ಬಿಜೆಪಿಯವರು ಅವರನ್ನು, ಇವರನ್ನು ಕರೆಸಿಕೊಂಡು ಭಜನೆ ಮಾಡುತ್ತಾರೆ. ಮಾಡಿಕೊಳ್ಳಲಿ. ನಮಗೇನಾಗಬೇಕು..? ನಮ್ಮ ರಾಮ ಎಲ್ಲೆಡೆಯೂ ಇದ್ದಾನೆ ಎಂದು ಹೇಳಿದ್ದಾರೆ.

ಅಲ್ಲದೇ ನಮ್ಮ ರಾಮ ಎದೆಯಲ್ಲೇ ಇದ್ದಾನೆ. ನಾನು ಆಂಜನೇಯ. ಆಂಜನೇಯ ಏನು ಮಾಡಿದ್ದಾನೆಂದು ಗೊತ್ತಲ್ವಾ..? ನಮ್ಮ ಸಮುದಾಯದಲ್ಲಿ ಹಲವರ ಹೆಸರೆಲ್ಲ ಹೀಗೆ ಇದೆ. ರಾಮ, ಹನುಮ, ಆಂಜನೇಯ ಈ ರೀತಿಯಾಗಿಯೇ ಹೆಸರಿದೆ. ಧರ್ಮ ಧರ್ಮಗಳ ನಡುವೆ ಒಡಕು ತರುತ್ತಿದ್ದಾರೆ. 14 ವರ್ಷ ನೋಡಿದ್ದಾರೆ. ಇನ್ನೂ ಒಂದು ಧರ್ಮದವರನ್ನು ಒಲೈಸಿದರೆ, ಅವರು ವೋಟ್ ಹಾಕುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಆಂಜನೇಯ ಹೇಳಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

- Advertisement -

Latest Posts

Don't Miss