Monday, December 11, 2023

Latest Posts

‘ಬಿಜೆಪಿ ಬಲೆಗೆ ಬಿದ್ದಿರೋ ಶಾಸಕರು ತಕ್ಕ ಪಾಠ ಕಲೀತಾರೆ’- ಮಾಜಿ ಸಿಎಂ ಸಿದ್ದರಾಮಯ್ಯ

- Advertisement -

ಬೆಂಗಳೂರು: ಆಪರೇಷನ್ ಕಮಲಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದಾರೆನ್ನಲಾಗುತ್ತಿರೋ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರು ತಕ್ಕ ಪಾಠ ಕಲೀತಾರೆ ಅಂತ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರೋ ಸಿದ್ದರಾಮಯ್ಯ, ಬಿಜೆಪಿ ಗೋವಾದಲ್ಲಿ ಹುಟ್ಟಿಹಾಕಿರೋ ಸನ್ನಿವೇಶವೇ ರಾಜ್ಯದಲ್ಲೂ ಸೃಷ್ಟಿ ಮಾಡಿದೆ.ಇದು ಬಿಜೆಪಿಯ ಅವಕಾಶವಾದಿ ರಾಜಕಾರಣಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಅಂತ ಕುಟುಕಿರೋ ಸಿದ್ದರಾಮಯ್ಯ, ದೇಶಾದ್ಯಂತ ಬಿಜೆಪಿ ತನ್ನ ಕುತಂತ್ರ ಮುಂದುವರಿಸಿದೆ ಅಂತ ಕಿಡಿ ಕಾರಿದ್ದಾರೆ.

ಅಲ್ಲದೆ ಬಿಜೆಪಿ ಹೆಣೆದಿರೋ ಬಲೆಯಲ್ಲಿ ಬಿದ್ದಿರುವ ನಮ್ಮ ರೆಬೆಲ್ ಶಾಸಕರೂ ಕೂಡ ಗೋವಾದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಶಾಸಕರಂತಯೇ ಕೊನೆಗೆ ನಿರಾಶರಾಗಲಿದ್ದಾರೆ. ಅತೃಪ್ತರು ಶೀಘ್ರವೇ ತಕ್ಕ ಪಾಠ ಕಲಿಯಲಿದ್ದಾರೆ ಅಂತ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.

ಇನ್ನು ಗೋವಾದಲ್ಲಿ ಆಡಳಿದಲ್ಲಿರೋ ಬಿಜೆಪಿ ಸರ್ಕಾರದಲ್ಲೂ ಕೂಡ ಪಕ್ಷಾಂತರ ಪರ್ವದಿಂದ ಬಿಕ್ಕಟ್ಟು ಎದುರಾಗಿದ್ದು ಸಿಎಂ ಪ್ರಮೋದ್ ಸಾವಂತ್, ಸಚಿವ ಸ್ಥಾನದ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಇದೀಗ ಅವರನ್ನು ಸಂಪುಟದಿಂದ ಹೊರಹೋಗುವಂತೆ ಹೇಳಿ ಇತರೆ ಪಕ್ಷದ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಘಟನಾವಳಿಯನ್ನು ಉಲ್ಲೇಖಿಸಿರೋ ಸಿದ್ದರಾಮಯ್ಯ, ಅತೃಪ್ತರಿಗೂ ಇದೇ ಪರಿಸ್ಥಿತಿ ಬರುತ್ತೆ ಅಂತ ಎಚ್ಚರಿಸಿದ್ದಾರೆ.

- Advertisement -

Latest Posts

Don't Miss