ಚುನಾವಣಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ : ವೋಟರ್ ಕಾರ್ಡಗೆ ಆಧಾರ್ ಸಂಖ್ಯೆ ಜೋಡಣೆ

ಮತದಾರರು ಹಲವು ಕ್ಷೇತ್ರದಲ್ಲಿ ತಮ್ಮ ಹೆಸರನ್ನು ನೊಂದಾಯಿಸುವುದನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆ ತರಲು ಹೊರಟಿದೆ . ಆಧಾರ್ ಸಂಖ್ಯೆಯನ್ನು ಚುನಾವಣಾ ಗುರುತಿನ ಚೀಟಿಗೆ ಸಂಯೋಜಿಸುವ ಕೆಲಸಕ್ಕೆ ಹೊರಟಿದೆ.
ಆಧಾರ್ ಸಂಯೋಜನೆ ಕಡ್ಡಾಯವಲ್ಲ ಮತದಾರರು ಸ್ವಯಂ ಪ್ರೇರಣೆಯಿಂದ ಮಾತ್ರವೇ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈ ಹಿಂದೆ ಪ್ಯಾನ್ ಕಾರ್ಡ್ಗೆ ಆಧಾರ್ ಸಂಯೋಜನೆಯನ್ನು ಕಡ್ಡಾಯಗೊಳಿಸಲಾಗಿತ್ತು.
ಆದರೆ ಗುರುತಿನ ಚೀಟಿಗೆ ಆಧಾರ್ ಸಂಯೋಜನಕ್ಕೆ ಸಂಬಂಧಿಸಿದಂತೆ ಬಾರೀ ವಿರೋಧವಿರುವ ಹಿನ್ನಲೆಯಲ್ಲಿ. ಮತ್ತು ಈ ನಿಯಮ ಖಾಸಗೀತನಕ್ಕೆ ದಕ್ಕೆ ತರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು ಆಗಾಗಿ ಇದನ್ನು ಐಚ್ಚಿಕ ಮಾಡಲಾಗಿದೆ.
ಈಗಾಗಲೇ ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಯೋಜನೆಗೆ ಪ್ರಾಯೋಗಿಕವಾಗಿಹಲವುಕಡೆ ಜಾರಿ ಮಾಡಿತ್ತು. ಅದರಲ್ಲಿ ಹಲವು ಕಡೆ ಧನಾತ್ಮಕ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಅದನ್ನು ದೇಶವ್ಯಾಪಿ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಪರ ವಿರೊಧಗಳು ಚರ್ಚೆ ಮಾಡಿ ಈ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.
ಇನ್ನು ಚುನಾವನಾ ಕ್ಷೇತ್ರದಲ್ಲಿ ಬದಲಾವಣೆಗಳೆಂದರೆ

೧. ೧೮ ವರ್ಷ ತುಂಬಿದ ಹೊಸ ಮತದಾರರಿಗೆ ತಮ್ಮ ಹೆಸರನ್ನು ನೊಂದಾಯಿಸಲು ವರ್ಷಕ್ಕೆ ೧ ಭಾರಿ ಮಾತ್ರ ಅವಕಾಶ ನೀಡಲಾಗಿತ್ತು, ಇನ್ನು ಮುಂದೆ ವರ್ಷಕ್ಕೆ ನಾಲ್ಕು ಬಾರಿ ನೀಡುವ ಸಾಧ್ಯತೆಯಿದೆ.

೨. ಇದುವರೆಗೆ ಶಾಲಾ ಕಾಲೇಜುಗಳನ್ನು ಚುನಾವಣಾ ಕೆಲಸಗಳಿಗೆ ಬಳಸುವ ಅವಕಾಶವಿತ್ತು, ಇನ್ಮುಂದೆ ಯಾವುದೇ ಕಟ್ಟಡಗಳನ್ನು ಚುನಾವಣಾ ಕೆಲಸಗಳಿಗೆ ಬಳಸುವ
ಅಧಿಕಾರವನ್ನು ಚುನಾವಣಾ ಆಯೊಗಕ್ಕೆ ನೀಡುವ ತಿದ್ದುಪಡಿಯು ಸಹ ಪ್ರಸ್ತಾವದಲ್ಲಿದೆ.

About The Author