Thursday, April 17, 2025

Latest Posts

ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮ: ದರ್ಶನ್ ಸಹಾಯ ನೆನೆದು ಭಾವುಕರಾದ ಸಂಸದೆ ಸುಮಲತಾ ಅಂಬರೀಷ್

- Advertisement -

Movie News: ಸ್ಯಾಂಡಲ್‌ವುಡ್ ನಟ ಡಿಬಾಸ್ ದರ್ಶನ್‌ ನಿನ್ನೆ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದು, ಇಂದಿಗೆ ದರ್ಶನ್‌ ಚಿತ್ರರಂಕ್ಕೆ ಕಾಲಿಟ್ಟು, 25 ವರ್ಷವಾಯಿತು.

ಹೀಗಾಗಿ ಇಂದು ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ಕಲಾವಿದರು, ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್, ದರ್ಶನ್‌ ತಮ್ಮ ಹಿರಿಯ ಮಗ ಎಂದೇ ಸಂಭೋಧಿಸಿದ್ದಾರೆ.

ಕಳೆದ ಬಾರಿ ಲೋಕಸಭೆ ಚುನಾವಣೆ ವೇಳೆ ದರ್ಶನ್ ಮತ್ತು ಯಶ್ ಇಬ್ಬರೂ ಮಂಡ್ಯದಲ್ಲಿ ಚುನಾವಣೆ ಪ್ರಚಾರ ಮಾಡಿದ್ದರು. ಈ ವೇಳೆ ಕೂಡ ಸುಮಲತಾ ದರ್ಶನ್‌ ಅವರನ್ನು ಹಿರಿಯ ಮಗ ಎಂದಿದ್ದರು. ಇಂದು ಕೂಡ ಸುಮಲತಾ ಹೀಗೆ ಹೇಳಿದ್ದಲ್ಲದೇ, ಎಲೆಕ್ಷನ್ ಪ್ರಚಾರದ ಸಹಾಯವನ್ನು ನೆನೆದಿದ್ದಾರೆ.

25 ವರ್ಷ ಸುಮ್ಮನೆ ಬಂದ ಜರ್ನಿ ಅಲ್ಲಾ. ದರ್ಶನ್ ಮೊದಲ ಸಿನಿಮಾ ಮುಹೂರ್ತಕ್ಕೆ ನಾನು ಅಂಬರೀಷ್ ಹೋಗಿದ್ದೆವು. ದರ್ಶನ್ ಬದುಕಿನಲ್ಲಿ ಹಲವು ಸವಾಲು ಎದುರಿಸಿದ್ದಾರೆ. ಸಾಕಷ್ಟು ಶ್ರಮಪಟ್ಟು ಅವರು ಈ ಸ್ಥಾನಕ್ಕೆ ಬಂದಿದ್ದಾರೆ. ನನಗೆ ಅವರು ಮಾಡಿದ ಸಹಾಯ, ಎಲೆಕ್ಷನ್ ವೇಳೆ ಜೊತೆಗೆ ನಿಂತು ಕೊಟ್ಟ ಧೈರ್ಯವನ್ನು ನಾನೆಂದೂ ಮರೆಯುವುದಿಲ್ಲವೆಂದು ಸುಮಲತಾ ಹೇಳಿದ್ದಾರೆ.

ದಂಗಲ್ ಸಿನಿಮಾ ನಟಿ ಸುಹಾನಿ ನಿಧನ: ಆರೋಗ್ಯ ಸುಧಾರಿಸಬೇಕಿದ್ದ ಔಷಧಿಯೇ ಪ್ರಾಣ ತೆಗಿಯಿತಾ..?

ಪುಟ್ಟ ಅಂಗಡಿಗೆ ಹೋಗಿ ಚಾಕೋಲೇಟ್, ಐಸ್‌ಕ್ರೀಮ್ ಖರೀದಿಸಿದ ರಾಕಿಂಗ್ ಸ್ಟಾರ್ ಯಶ್..

ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ದಿಗ್ಗಜರು

- Advertisement -

Latest Posts

Don't Miss