Sunday, September 8, 2024

Latest Posts

ಸಿಂಗಾಪುರ ಓಪನ್:  ಕ್ವಾರ್ಟರ್‍ಗೆ ಸೈನಾ, ಸಿಂಧು, ಪ್ರಣಾಯ್ 

- Advertisement -

ಸಿಂಗಾಪುರ: ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಪಿ.ವಿ.ಸಿಂಧು ಮತ್ತು ಪ್ರಣಾಯ್ ಸಿಂಗಾಪುರ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

32 ವರ್ಷದ ಸೈನಾ ನೆಹ್ವಾಲ್ ಚೀನಾದ ವಿಶ್ವದ ನಂ.9ನೇ ಆಟಗಾರ್ತಿ ಹೀ ಬಿಂಗ್ ಜಿಯೊ ವಿರುದ್ಧ 21-19, 11-21, 21-17 ಅಂಕಗಳಿಂದ ಗೆದ್ದರು.ಇದರೊಂದಿಗೆ ಎರಡು ವರೆ ವರ್ಷಗಳ ನಂತರ ಸೈನಾ ಮೊದಲ ಬಾರಿ ಕ್ವಾರ್ಟರ್‍ಗೆ ಲಗ್ಗೆ ಹಾಕಿದ್ದಾರೆ.

ಮತ್ತೊರ್ವ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ವಿಯೆಟ್ನಾಂನ ನ್ಗುಯೇನ್ ಥೈ ಲಿನ್‍ಹ್ ವಿರುದ್ಧ 19-21,21-19,21-18 ಅಂಕಗಳಿಂದ ಗೆದ್ದರು.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಗ್ರ ಆಟಗಾರ ಪ್ರಣಾಯ್ ಮೂರನೆ ಸೀಡ್ ಆಟಗಾರ ಚೊ ಟೈನ್ ಚೆನ್ ವಿರುದ್ಧ 14-21, 22-20,21-18 ಅಂಕಗಳಿಂದ ಗೆದ್ದರು.

 

 

- Advertisement -

Latest Posts

Don't Miss