- Advertisement -
ಬರ್ಮಿಂಗ್ ಹ್ಯಾಮ್: ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಸಿಂಧು ಮಲೇಷ್ಯಾದ ಗೋಹ್ ವ್ಹೀ ಜಿನ್ ವಿರುದ್ಧ ಮೊದಲ ಸೆಟ್ ನಲ್ಲಿ 19-21 ಅಂಕಗಳಿಂದ ಸೋತರು. ನಂತರ ಪುಟಿದೆದ್ದು 21-19, 21-17 ಅಂಕಗಳಿಂದ ಗೆದ್ದರು.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಶ್ರೀಕಾಂತ್, ಇಂಗ್ಲೆಂಡ್ ನ ಟೊಬಿ ಪೆಂಟಿ ವಿರುದ್ಧ 21-19,21-17 ಅಂಕಗಳಿಂದ ಗೆದ್ದು ಸೆಮಿ ತಲುಪಿದರು.
ಮತ್ತೋರ್ವ ಯುವ ಆಟಗಾರ ಲಕ್ಷ್ಯ ಸೇನ್ ಮಾರಿಷಸ್ ನ ಜೂಲಿಯನ್ ಜಾರ್ಜಸ್ ಪೌಲ್ ವಿರುದ್ಧ 21-12, 21-11 ಅಂಕಗಳಿಂದ ಗೆದ್ದರು.
- Advertisement -