Wednesday, December 11, 2024

Latest Posts

ಪೂರಿ, ಚಪಾತಿ ಜೊತೆ ಬೆಸ್ಟ್ ಕಾಂಬಿನೇಷನ್ ಈ ಗ್ರೇವಿ.. ನೀವೂ ಟ್ರೈ ಮಾಡಿ..

- Advertisement -

ನೀವು ಮನೆಯಲ್ಲಿ ಪುರಿ, ಚಪಾತಿ ತಯಾರಿಸಿದಾಗ, ಅದರ ಜೊತೆ ಯಾವ ಗ್ರೇವಿ ತಯಾರಿಸಬೇಕು ಅಂತಾ ಕನ್ಫ್ಯೂಷನ್‌ನಲ್ಲಿ ಇದ್ರೆ, ಒಮ್ಮೆ ಆಲೂ ಗ್ರೇವಿ ಟ್ರೈ ಮಾಡಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಹಾಗಾದ್ರೆ ಆಲೂ ಗ್ರೇವಿ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: 5 ರಿಂದ 6 ಆಲೂ, ಒಂದು ಕಪ್ ಬಟಾಣಿ, ಮೂರು ಈರುಳ್ಳಿ, ಎರಡು ಟೋಮೆಟೋ, ಅರ್ಧ ಸ್ಪೂನ್ ಕಸೂರಿ ಮೇಥಿ, ಪಲಾವ್ ಎಲೆ- ಚಕ್ಕೆ-ಲವಂಗ-ಏಲಕ್ಕಿ-ಜೀರಿಗೆ ಮಿಶ್ರಣ, 2 ಹಸಿ ಮೆಣಸಿನಕಾಯಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1 ಸ್ಪೂನ್ ಖಾರದಪುಡಿ, ಚಿಟಿಕೆ ಅರಿಶಿನ, ಚಿಟಿಕೆ ಇಂಗು, ಕಾಲು ಸ್ಪೂನ್ ಗರಂ ಮಸಾಲೆ, ಅರ್ಧ ಸ್ಪೂನ್ ಧನಿಯಾ ಪುಡಿ, 1 ಸ್ಪೂನ್ ಚಾಟ್ ಮಸಾಲೆ, 2 ಸ್ಪೂನ್ ಎಣ್ಣೆ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಕುಕ್ಕರ್‌ನಲ್ಲಿ ಆಲೂ ಮತ್ತು ಬಟಾಣಿಯನ್ನು ಚಿಟಿಕೆ ಉಪ್ಪು ಹಾಕಿ ಬೇಯಿಸಿ. ಬೇಯಿಸಿದ ಆಲೂವನ್ನು ಸ್ಮಾಶ್ ಮಾಡಿಟ್ಟುಕೊಳ್ಳಿ. ನಂತರ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ ಹಾಕಿ, ಪಲಾವ್ ಎಲೆ- ಚಕ್ಕೆ-ಲವಂಗ-ಏಲಕ್ಕಿ-ಜೀರಿಗೆ ಮಿಶ್ರಣ ಹಾಕಿ ಹುರಿಯಿರಿ. ಇದರೊಟ್ಟಿಗೆ ಕೊಂಚ ಇಂಗು, ಹಸಿ ಮೆಣಸು ಸೇರಿಸಿಕೊಳ್ಳಿ.

ಇದಾದ ಬಳಿಕ ಸಣ್ಣಗೆ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಹುರಿಯಿರಿ. ಇದು ಚೆನ್ನಾಗಿ ಹುರಿದ ಬಳಿಕ, ಅರಿಶಿನ ಪುಡಿ, ಖಾರದಪುಡಿ, ಗರಂ ಮಸಾಲೆ, ಧನಿಯಾ ಪುಡಿ, ಚಾಟ್‌ ಮಸಾಲೆ, ಉಪ್ಪು ಸೇರಿಸಿ ಹುರಿಯಿರಿ. ನಂತರ ಟೊಮೆಟೋ ಮಿಕ್ಸ್ ಮಾಡಿ, ಹುರಿಯಿರಿ. ಇದು ಕೊಂಚ ಬೆಂದ ಮೇಲೆ, ಇದಕ್ಕೆ ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಬಟಾಣಿ, ಕಸೂರಿ ಮೇಥಿ ಸೇರಿಸಿ, ಮಿಕ್ಸ್ ಮಾಡಿ.

ಈಗ ಇದಕ್ಕೆ ಒಂದುವರೆ ಕಪ್ ನೀರು ಹಾಕಿ, ಮಿಕ್ಸ್ ಮಾಡಿ, ಪ್ಲೇಟ್ ಮುಚ್ಚಿ, 10 ನಿಮಿಷ ಬೇಯಿಸಿ. ಇದಾದ ಬಳಿಕ, ಇದಕ್ಕೆ ಕೊತ್ತೊಂಬರಿ ಸೊಪ್ಪನ್ನ ಹಾಕಿ, ಮಿಕ್ಸ್ ಮಾಡಿದ್ರೆ, ಆಲೂ ಗ್ರೇವಿ ರೆಡಿ. ಇದನ್ನ ಚಪಾತಿ, ರೊಟ್ಟಿ, ನಾನ್ ಜೊತೆ ಸವಿಯಬಹುದು.

- Advertisement -

Latest Posts

Don't Miss