Sunday, September 15, 2024

Latest Posts

ಸಿಗರೇಟ್ ಸೇವನೆಯಿಂದ ಕಣ್ಣಿಗೂ ಆಪತ್ತು..!

- Advertisement -

ಧೂಮಪಾನದಿಂದ ಶ್ವಾಸಕೋಶಗಳು ಹಾನಿಯಾಗೋದಲ್ಲದೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಕೂಡ ಬರುತ್ತೆ ಅಂತ ಎಲ್ಲರಿಗೂ ತಿಳಿದೆ. ಆದ್ರೆ ಧೂಮಪಾನದಿಂದ ಕಣ್ಣಿನ ದೃಷ್ಟಿ ಕೂಡ ಕಳೆದುಕೊಳ್ಳಬಹುದು. ಈ ಮಾಹಿತಿ ಐವರಲ್ಲಿ ಕೇವಲ ಒಬ್ಬರಿಗೆ ಮಾತ್ರ ತಿಳಿದಿದ್ದು ಈ ಬಗ್ಗೆ ಅರಿವು ಮೂಡಿಸೋದು ಅತ್ಯಗತ್ಯವಾಗಿದೆ.

ಸಿಗರೇಟು/ಬೀಡಿ ಸೇವನೆಯಿಂದ ತಮಗೂ ಅಲ್ಲದೆ ಆ ಹೊಗೆಯನ್ನು ಸೇವಿಸೋರಿಗೂ ತೊಂದರೆ ಫಿಕ್ಸ್ ಅನ್ನೋ ವಿಷಯ ಗೊತ್ತಿದ್ದೂ ಡೋಂಟ್ ಕೇರ್ ಅಂತ ತರಹೇವಾರಿ ರೀತಿಯಲ್ಲಿ ಹೊಗೆ ಬಿಟ್ಟು ಎಂಜಾಯ್ ಮಾಡೋರೇ ಹೆಚ್ಚು. ಆದ್ರೆ ಧೂಮಪಾನದಿಂದ ಎದುರಾಗೋ ಮತ್ತಷ್ಟು ವ್ಯತಿರಿಕ್ತ ಪರಿಣಾಮಗಳ ಬಗ್ಗೆ ವೈದ್ಯಕೀಯ ಕ್ಷೇತ್ರ ಇನ್ನೂ ಹಲವಾರು ರೀತಿಯ ಅಧ್ಯಯನ ನಡೆಸುತ್ತಲೇ ಇದೆ. ಆದ್ರೆ ಲಿಂಗ ಬೇಧವಿಲ್ಲದೆ ಧೂಮಪಾನ ಚಟಕ್ಕೆ ಬಿದ್ದಿರೋ ಕೋಟ್ಯಂತರ ಮಂದಿಗೆ ತಾವು ಶ್ವಾಸಕೋಶದೊಂದಿಗೆ ತಮ್ಮ ಕಣ್ಣಿನ ದೃಷ್ಟಿ ಕೂಡ ಕಳೆದುಕೊಳ್ತಾರೆ ಅನ್ನೋ ವಿಚಾರ ಗೊತ್ತೇ ಇಲ್ಲ.

ಧೂಮಪಾನದಿಂದ ಕುರುಡುತನ ಹೇಗೆ ಸಾಧ್ಯ?

ಸಿಗರೇಟು ಹೊಗೆಯಲ್ಲಿನ ಹಾನಿಕಾರಕ ರಾಸಾಯನಿಕ ಮಿಶ್ರಿತ ಹೊಗೆ ಕಣ್ಣುಗಳ ಸೂಕ್ಷ್ಮ ನರಗಳಿಗೆ ನವೆಯುಂಟು ಮಾಡಿ ಆದನ್ನು ಹಾನಿಗೊಳಿಸುತ್ತದೆ. ಹೊಗೆಯ ಕಣಗಳು ಕಣ್ಣುಗಳ ಪದರದೊಳಗೆ ಕೊಂಚ ಕೊಂಚವೇ ಸೇರಿಕೊಂಡು ಬಳಿಕ ಕಣ್ಣಿನಲ್ಲಿ ಪೊರೆ ಮೂಡಿಸುತ್ತದೆ. ಅಲ್ಲದೆ ಧೂಮಪಾನ ಚಟ ಹೊಂದಿರೋ ಮಧುಮೇಹ ರೋಗಿಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸೋದು ಪಕ್ಕಾ. ಧೂಮಪಾನ ಮಾಡದೇ ಇರುವವರಿಗೆ ಹೋಲಿಸಿದ್ರೆ 16 ಪಟ್ಟು ಹೆಚ್ಚಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳೋ ಸಾಧ್ಯತೆಯಿದೆ. ಹೀಗಾಗಿ ಧೂಮಪಾನ ವ್ಯಸನಿಗಳು ತಮ್ಮ ಆರೋಗ್ಯ ಮತ್ತು ತಮ್ಮ ಸುತ್ತಮುತ್ತಲಿನವರ ಆರೋಗ್ಯ ಕಾಪಾಡೋ ನಿಟ್ಟಿನಲ್ಲಿ ಚಟವನ್ನು ತ್ಯಜಿಸೋದೇ ಒಳ್ಳಯದು.

ಸಾಲ ವಸೂಲಿ ಮಾಡೋರಿಗೆ ಇಲ್ಲಿದೆ ಶಾಕ್..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=p3yEYBRLDgY
- Advertisement -

Latest Posts

Don't Miss