Friday, April 18, 2025

Latest Posts

ತೂಕ ಇಳಿಸೋಕ್ಕೆ ಸಹಾಯ ಮಾಡತ್ತೆ ಈ ಮೂರು ಸ್ಮೂದೀಸ್- Part-1

- Advertisement -

ಇವತ್ತು ನಾವು ತೂಕ ಇಳಿಸೋಕ್ಕೆ ಸಹಾಯ ಮಾಡುವ ಮೂರು ಸ್ಮೂದೀಸ್ ರೆಸಿಪಿ ಹೇಳಿ ಕೊಡಲಿದ್ದೇವೆ. ಈ ರೆಸಿಪಿಯನ್ನ ಸಕ್ಕರೆ ಹಾಕದೇ ಮಾಡಿದ್ರೆ, ಇದು ನಿಮ್ಮ ತೂಕ ಇಳಿಸೋಕ್ಕೆ ಸಹಾಯ ಮಾಡತ್ತೆ. ಹಾಗಾದ್ರೆ ಯಾವುದು ಆ ಮೂರು ಸ್ಮೂದೀ ರೆಸಿಪಿ, ಅದನ್ನ ಮಾಡೋದು ಹೇಗೆ..? ಅದಕ್ಕೆ ಬೇಕಾದ ಸಾಮಗ್ರಿಗಳೇನು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯದು ಬನಾನಾ ಸ್ಮೂದಿ- (ಬೇಕಾಗುವ ಸಾಮಗ್ರಿ)- ಒಂದು ಚಿಕ್ಕ ಬಾಳೆಹಣ್ಣು, ಅರ್ಧ ಕಪ್ ಆರೆಂಜ್ ಜ್ಯೂಸ್, ಕಾಲು ಕಪ್ ಗ್ರೀಕ್ ಯೋಗರ್ಟ್, ಒಂದು ಟೇಬಲ್ ಸ್ಪೂನ್ ಜೇನು ತುಪ್ಪ, 5 ರಾಸ್‌ಬೇರಿಸ್, ಅಗತ್ಯವಿದ್ದರೆ ಐಸ್ ಕ್ಯೂಬ್ಸ್. ಇವಿಷ್ಟನ್ನ ಮಿಕ್ಸಿಗೆ ಹಾಕಿ, ಸ್ಮೂದಿ ತಯಾರಿಸಿ ಕುಡಿಯಿರಿ.

ಎರಡನೇಯದಾಗಿ ಪಾಲಕ್‌ ಸ್ಮೂದಿ- ಒಂದು ಜ್ಯೂಸರ್ ಜಾರ್‌ಗೆ ಸ್ವಚ್ಛವಾಗಿ ತೊಳೆದ ಪಾಲಕ್ ಸೊಪ್ಪು, ಬಾಳೆಹಣ್ಣು, ಒಂದು ಸ್ಪೂನ್ ಅಗಸೆ ಪುಡಿ, ಅರ್ಧ ಕಪ್ ಬಾದಾಮಿ ಹಾಲು, ಒಂದು ಟೇಬಲ್ ಸ್ಪೂನ್ ಪೀನಟ್ ಬಟರ್, ನಿಮಗಿಷ್ಟವಾದ ಬೇರ್ರಿಸ್, ಅಂದ್ರೆ ಸ್ಟ್ರಾಬೇರಿ, ರಾಸ್‌ಬೇರಿ, ಬ್ಲ್ಯೂಬೇರಿ ಯಾವುದಾದರೂ ಒಂದು ಹಣನ್ನ ಹಾಕಿ, ಸ್ಮೂದಿ ತಯಾರಿಸಿ, ಕುಡಿಯಿರಿ.

ಮೂರನೇಯದಾಗಿ ಮ್ಯಾಂಗೋ ಸ್ಮೂದಿ- ಅರ್ಧ ಕಪ್ ಮಾವಿನ ಹಣ್ಣಿನ ಹೋಳುಗಳು, ಅರ್ಧ ಕಪ್ ಹಾಲು, ಒಂದು ಸ್ಪೂನ್ ಅಗಸೆ ಪುಡಿ, ನಾಲ್ಕು ಸ್ಪೂನ್ ವೆನಿಲ್ಲಾ ಯೋಗರ್ಟ್, ಹಾಕಿದರೆ ಸ್ಮೂದಿ ರೆಡಿ. ಇಲ್ಲಿ ಬಳಸಲಾದ, ಅಗಸೆ ಪುಡಿ, ಯೋಗರ್ಟ್ ಮತ್ತು ಹಣ್ಣುಗಳೆಲ್ಲ, ನಮ್ಮ ಆರೋಗ್ಯ ಮತ್ತು ಸೌಂದರ್ಯದ ಅಭಿವೃದ್ಧಿಗೆ ಸಹಾಯಕವಾಗಿದೆ.

- Advertisement -

Latest Posts

Don't Miss