Friday, October 18, 2024

Latest Posts

Smriti Mandhana : ICCಯ ವರ್ಷದ ಮಹಿಳಾ ಆಟಗಾರ್ತಿ..!

- Advertisement -

ಸ್ಮೃತಿ ಮಂದಾನ(Smriti Mandhana) ಅವರನ್ನು ವರ್ಷದ ಮಹಿಳಾ ಕ್ರಿಕೆಟರ್(Women cricketer) ಎಂದು ಐಸಿಸಿ ಘೋಷಿಸಿದೆ. 2021ರಲ್ಲಿ ಮಹಿಳಾ ಕ್ರಿಕೆಟ್ ನಲ್ಲಿ ಸ್ಮೃತಿ ಸಾಧನೆ ಗುರುತಿಸಿ ಐಸಿಸಿ ಈ ಗೌರವ ನೀಡಿದೆ. 2021ನೇ ವರ್ಷ ಸ್ಮೃತಿ ಮಂದಾನ ಕ್ರೀಡಾ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅವರ ಉತ್ತಮ ಆಟ ಅವರನ್ನು ವಾರ್ಷಿಕ ಪ್ರಶಸ್ತಿಯ ಪೈಪೋಟಿಯಲ್ಲಿ ಗೆಲ್ಲಿಸಿದೆ ಎಂದು ಐಸಿಸಿ ಶ್ಲಾಘಿಸಿದೆ. 2013ರಲ್ಲಿ ಏಕದಿನ ಹಾಗೂ ಟ್ವೆಂಟಿ-209(T-20) ಮತ್ತು 2014ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಕಾಲಿರಿಸಿದರು. ಅಲ್ಲದೆ ಕೆಲವೇ ವರ್ಷಗಳಲ್ಲಿ ಮೈದಾನದ ಒಳಗೂ ಹೊರಗೂ ಅತಿ ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. 2018ರ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 178 ರನ್ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಪ್ರಸ್ತುತ ಕಾಲಘಟ್ಟದ ಅತ್ಯುತ್ತಮ ಎಡಗೈ ಬ್ಯಾಟ್ಸ್ವುಮೆನ್ ಎನಿಸಿಕೊಂಡಿರುವ ಮಂಧಾನ, ಫೆಬ್ರವರಿ 2019ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗೆ ಮಂಧಾನ ನಾಯಕಿಯಾಗಿ ಆಯ್ಕೆಯಾದರು. ಈ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ಸಾಧನೆ ಮಾಡಿದ್ದಾರೆ. 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು 2 ಅರ್ಧಶತಕ ಸಹಿತ 167 ರನ್ ಬಾರಿಸಿದ್ದಾರೆ.ಹಾಗೆಯೇ 81 ಟ್ವೆಂಟಿ-20 ಪಂದ್ಯಗಳಲ್ಲಿ 13 ಅರ್ಧಶತಕಗಳು ಸೇರಿದಂತೆ 1901 ರನ್ ಗಳಿಸಿದ್ದಾರೆ. 59 ಏಕದಿನ ಪಂದ್ಯಗಳನ್ನಾಡಿರುವ ಮಂದಾನಾ 41.72ರ ಸರಾಸರಿಯಲ್ಲಿ 2253 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕ ಹಾಗೂ 18 ಅರ್ಧಶತಕಗಳು ಸೇರಿವೆ. ಸ್ಮೃತಿ ಮಂದಾನ 2021ರಲ್ಲಿ ತಮ್ಮ ಉತ್ತಮ ಆಟದಿಂದ ಕ್ರಿಕೆಟ್ ಅಂಗಳದಲ್ಲಿ ಮಿಂಚು ಹರಿಸಿದ್ದರು. ಆಫ್ರಿಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಭಾರತ 2 ಪಂದ್ಯ ಗೆಲ್ಲುವಲ್ಲಿ ಸ್ಮೃತಿ ಪಾತ್ರ ಮಹತ್ವದ್ದಾಗಿತ್ತು. ಭಾರತ ಎರಡನೇ ODIನಲ್ಲಿ 158 ರನ್ಗಳನ್ನು ಬೆನ್ನಟ್ಟಿದ ಕಾರಣ ಅವರು ಔಟಾಗದೆ 80 ರನ್ ಗಳಿಸಿದ್ದರು, ಇದೀಗ ಸ್ಮೃತಿ ಸಾಧನೆಗೆ ಐಸಿಸಿ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆ ಸಿಕ್ಕಿದೆ.

- Advertisement -

Latest Posts

Don't Miss