Saturday, April 19, 2025

Latest Posts

ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್

- Advertisement -

Sports News:  ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್ ಕೊನೆಗೂ ಭಾರತಕ್ಕೆ ಬಂದು, ಅಯೋಧ್ಯೆಗೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಮಾಡಿದ್ದಾರೆ.

ಜನವರಿ 22ರಂದು ಭಾರತದ ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಪ್ರಾಣ ಪ್ರತಿಷ್ಠೆ ಮಾಡುತ್ತಾರೆಂಬ ವಿಷಯ ಕೇಳಿ ಬರೀ ಭಾರತದಲ್ಲಿರುವ ಹಿಂದೂಗಳಷ್ಟೇ ಅಲ್ಲದೇ, ಬೇರೆ ಬೇರೆ ದೇಶದ ಪ್ರಜೆಗಳಲ್ಲಿ ಕೆಲವರು ಸಂತಸ ವ್ಯಕ್ತಪಡಿಸಿದ್ದರು. ಅಂಥವರಲ್ಲಿ ಸೌತ್ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್ ಕೂಡ ಒಬ್ಬರು. ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದಾಗ, ನನಗೂ ಕೂಡ ರಾಮಲಲ್ಲಾನನ್ನು ನೋಡುವ ಆಸೆಯಾಗಿದೆ. ಸದ್ಯದಲ್ಲೇ ಭಾರತಕ್ಕೆ ಬಂದು, ಅಯೋಧ್ಯೆ ರಾಮನ ದರ್ಶನ ಮಾಡುತ್ತೇನೆ. ಅಭಿನಂದನೆಗಳು ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಶ್ ಮಾಡಿದ್ದರು.

ಇದೀ ಹೇಳಿದಂತೆ ಭಾರತಕ್ಕೆ ಬಂದಾಗ, ಕೇಶವ್ ಮಹಾರಾಜ್ ರಾಮನ ದರ್ಶನ ಮಾಡಿದ್ದಾರೆ. ಕೇಶವ್ ಭಾರತಕ್ಕೆ ಬಂದಾಗಲೆಲ್ಲ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿಕೊಂಡು ಹೋಗುತ್ತಾರೆ. ಕೇಶವ್ ಐಪಿಎಲ್ ಪಂದ್ಯದಲ್ಲಿ ಭಾಗವಹಿಸುತ್ತಿದ್ದು, ಲಕ್ನೋ ಸೂಪರ್ ಜಾಯಿಂಟ್ಸ್ ತಂಡದಲ್ಲಿ ಆಡಲಿದ್ದಾರೆ.

ರಾಮನಗರ MLA ಇಕ್ಬಾಲ್ ಹುಸೇನ್ ಮತ್ತು ಸಂಸದ DK ಸುರೇಶ್ ವಿರುದ್ದ ಸಿಡಿದೆದ್ದ ರಾಮನಗರದ ದಲಿತ ಮುಖಂಡರು.

ತಾಳಿ ಕಟ್ಟುವ ವೇಳೆ ಸಿನಿಮೀಯ ರೀತಿಯಲ್ಲಿ ಮುರಿದು ಬಿದ್ದ ಮದುವೆ..

ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..

- Advertisement -

Latest Posts

Don't Miss