Friday, December 13, 2024

Latest Posts

8 ಶಾಸಕರ ರಾಜೀನಾಮೆ ಕ್ರಮಬದ್ಧವಲ್ಲ- ಸ್ಪೀಕರ್ ರಮೇಶ್ ಕುಮಾರ್

- Advertisement -

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಇಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಪರಿಶೀಲನೆ ನಡೆಸಿದ್ರು. 13 ಶಾಸಕರುಗಳ ರಾಜೀನಾಮೆ ಪತ್ರಗಳ ಪೈಕಿ 5 ಮಂದಿಯ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದ್ದು ಉಳಿದ 8 ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದು ತಿಳಿಸಿದ್ದಾರೆ.

ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಪರಿಶೀಲನೆ ನಡೆಸಿದ ಸ್ಪೀಕರ್ ರಮೇಶ್ ಕುಮಾರ್ 13 ಶಾಸಕರ ಪೈಕಿ ಕೇವಲ 5 ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿದ್ದು ಇನ್ನುಳಿದ 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಅಂತ ಹೇಳಿದ್ರು. ಶಾಸಕರಾದ ಆನಂದ್ ಸಿಂಗ್, ನಾರಾಯಣಗೌಡ, ಪ್ರತಾಪಗೌಡ ಪಾಟೀಲ, ರಾಮಲಿಂಗಾ ರೆಡ್ಡಿ ಮತ್ತು ಕೆ.ಗೋಪಾಲಯ್ಯ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದೆ. ಜು 12ರಂದು ಆನಂದ್ ಸಿಂಗ್, ಪ್ರತಾಪಗೌಡ ಪಾಟೀಲ ಹಾಗೂ ನಾರಾಯಣಗೌಡರನ್ನು ವೈಯಕ್ತಿಕ ವಿಚಾರಣೆಗೆ ಕರೆಯಲಾಗುವುದು. ಇನ್ನು ಜು 15ರಂದು ರಾಮಲಿಂಗಾರೆಡ್ಡಿ ಮತ್ತು ಗೋಪಾಲಯ್ಯರನ್ನು ವಿಚಾರಣೆಗೆ ಕರೆಯಲಾಗುವುದು ಅಂತ ಹೇಳಿದ್ರು.

ಇನ್ನು ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್, ಬಿ.ಸಿ ಪಾಟೀಲ್, ಮಹೇಶ್ ಕುಮಟಳ್ಳಿ, ಎಸ್.ಟಿ ಸೋಮಶೇಖರ್,ಮುನಿರತ್ನ, ಶಿವರಾಮ್ ಹೆಬ್ಬಾರ್ ಹಾಗೂ ಬೈರತಿ ಬಸವರಾಜ್ ರವರ ರಾಜೀನಾಮೆ ಕ್ರಮಬದ್ಧವಾಗಿಲ್ಲ. ಈ ಕುರಿತಂತೆ 8 ಶಾಸಕರಿಗೂ ಸೂಚನಾ ಪತ್ರ ರವಾನಿಸಲಾಗಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ರು. ಇನ್ನು ರಾಜೀನಾಮೆ ಪತ್ರಗಳ ಪರಿಶೀಲನೆ ವಿಚಾರವಾಗಿ ನಾನು ಸಂವಿಧಾನದ ಆಶಯ ಎತ್ತಿಹಿಡಿಯಲಿದ್ದು, ಯಾವುದೇ ಮುಚ್ಚುಮರೆ ಇಲ್ಲದೆ ನನ್ನ ಕೆಲಸಗಳನ್ನು ಪಾರದರ್ಶಕವಾಗಿ ಮಾಡುತ್ತೇನೆ ಅಂತ ರಮೇಶ್ ಕುಮಾರ್ ಇದೇ ವೇಳೆ ಹೇಳಿದ್ರು.

ಈ ಜೋಡೆತ್ತಿನ ಸರ್ಕಾರ ಉಳಿಯುತ್ತೋ, ಉರುಳುತ್ತೋ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=uFofHtw9Qq8
- Advertisement -

Latest Posts

Don't Miss