Spiritual: ನಾವು ಶ್ರೀಮಂತರಾಗಬೇಕು. ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ನಮ್ಮ ಬಳಿಯೂ ರಾಶಿ ರಾಶಿ ಹಣವಿರಬೇಕು ಅಂತಾ ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ..? ಅದರಲ್ಲೂ ಈಗಿನ ಕಾಲದಲ್ಲಿ ಹಣ ಎಂದರೆ ಎಲ್ಲದಕ್ಕಿಂತ ಮೇಲು ಅನ್ನುವಂತಾಗಿದೆ. ಮೊದಲೆಲ್ಲ ಸಂಬಂಧ ಅಂದ್ರೆ ಮೇಲು ಅಂತಿದ್ರು. ಆದರೆ ಈಗ ಸಂಬಂಧವನ್ನು ಮೀರಿ ಹಣ ಬೆಳೆದುಬಿಟ್ಟಿದೆ. ಈಗ ಹಣ ಇದ್ದರಷ್ಟೇ ಸಂಬಂಧ ಅನ್ನುವಂತಾಗಿದೆ. ಹಾಗಾಗಿಯೇ ಜನ ಹಣ ಮಾಡುವ ಹಲವು ಟ್ರಿಕ್ಸ್ ಹುಡುಕುತ್ತಿದ್ದಾರೆ.
ಹಣ ಸಂಪಾದಿಸಲು ನಾವು ಕೆಲಸ ಮಾಡಬೇಕು ಅನ್ನೋದು ಎಷ್ಟು ಸತ್ಯವೋ, ಅದೇ ರೀತಿ ನಾವು ದೇವರಲ್ಲಿ ಭಕ್ತಿ ಮಾಡಬೇಕು. ಕೆಲ ವಸ್ತುಗಳ ಉಪಯೋಗ ಮಾಡಬೇಕು ಅನ್ನೋದು ಅಷ್ಟೇ ಸತ್ಯ. ಹಾಗಾಗಿ ನಾವಿಂದು ಯಾವ ವಸ್ತುಗಳನ್ನು ನಾವು ಮನೆಯಲ್ಲಿ ಇರಿಸಿದರೆ, ಅದರಿಂದ ಹಣ ಅಟ್ರ್ಯಾಕ್ಟ್ ಆಗುತ್ತದೆ ಅಂತಾ ಹೇಳಲಿದ್ದೇವೆ.
ಲಕ್ಷ್ಮೀ ಮತ್ತು ಕಬೇರನ ಪ್ರತಿಮೆ ಅಥವಾ ಫೋಟೋ. ನೀವು ಮನೆಯಲ್ಲಿ ಈ ಲಕ್ಷ್ಮೀ ಕುಬೇರನ ಪ್ರತಿಮೆ ಅಥವಾ ಫೋಟೋ ಇಟ್ಟಲ್ಲಿ, ನೀವು ಅದನ್ನು ಪ್ರತಿದಿನ ಕ್ಲೀನ್ ಮಾಡಿ, ಅದರ ಪೂಜೆ ಮಾಡಬೇಕು. ಪೂಜೆ ಮಾಡುವಾಗ, ಮಡಿಯಿಂದ, ಭಕ್ತಿಯಿಂದ ಪೂಜೆ ಮಾಡಬೇಕಾಗುತ್ತದೆ. ಆಗ ಮಾತ್ರ ಲಕ್ಷ್ಮೀ ದೇವಿಯ ಕೃಪೆ ನಿಮ್ಮ ಮೇಲಾಗುತ್ತದೆ.
ಶಂಖ. ಶಂಖ ವಿಷ್ಣುವಿಗೆ ಸೇರಿದ ವಸ್ತು. ಇದು ಪಂಂಚಭೂತಗಳಿಂದ ಕೂಡಿದೆ. ಹಾಗಾಗಿ ಮನೆಯಲ್ಲಿ ಶಂಖವನ್ನು ಇಟ್ಟು ಪೂಜಿಸಿ, ಪ್ರತಿದಿನ ದೀಪ ಹಚ್ಚುವ ಸಮಯದಲ್ಲಿ ಶಂಖ ಊದಿದರೆ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಮನೆಯ ಈಶಾನ್ಯ ಮೂಲೆಯಲ್ಲಿ ಗಣೇಶನ ಪ್ರತಿಮೆ ಇರಿಸಿದರೆ, ವಾಾಸ್ತು ದೋಷ ನಿವಾರಣೆಯಾಗುತ್ತದೆ ಅಂತಾ ಹೇಳುತ್ತಾರೆ. ಆದರೆ ಆ ಗಣೇಶನನ್ನು ಇತರರು ಯಾರೂ ಮುಟ್ಟದಂತೆ ನೀವು ನೋಡಿಕೊಳ್ಳಬೇಕು. ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ.
ಇನ್ನು ನಾಲ್ಕನೇಯದಾಗಿ ತೆಂಗಿನಕಾಯಿ. ನೀವು ಕೆಲವರು ಕೆಂಪು ಬಟ್ಟೆಯಲ್ಲಿ ತೆಂಗಿನಕಾಯಿಯನ್ನು ಕಟ್ಟಿ ಇಟ್ಟುವುದನ್ನು ನೋಡಿರುತ್ತೀರಿ. ಇದು ಸಾಮಾನ್ಯ ತೆಂಗಿನಕಾಯಿ ಆಗಿರುವುದಿಲ್ಲ. ಏಕಾಕ್ಷಿ ತೆಂಗಿನಕಾಯಿ. ಇದು ತುಂಬಾ ಅಪರೂಪಕ್ಕೆ ಸಿಗುವ ತೆಂಗಿನ ಕಾಯಿ. ಏಕಾಕ್ಷಿ ತೆಂಗಿನಕಾಯಿ ಅಂದ್ರೆ ಸ್ವತಃ ಲಕ್ಷ್ಮೀ ದೇವಿಯ ಸ್ವರೂಪ ಅಂತ ಹೇಳಲಾಗುತ್ತದೆ. ಇಂಥ ಏಕಾಕ್ಷಿ ತೆಂಗಿನಕಾಯಿ ಸಿಕ್ಕರೆ, ಅದನ್ನು ತಂದು ಮನೆಯಲ್ಲಿಟ್ಟು ಪೂಜಿಸಿ. ನಿಮ್ಮ ಆರ್ಥಿಕ ಬಿಕ್ಕಟ್ಟು ಶಮನಗೊಳ್ಳುತ್ತದೆ.
ಐದನೇಯದಾಗಿ ಮನೆಯ ಬಾಗಿಲಿಗೆ ಸದಾ ಮಾವಿನ ತೋರಣ ಕಟ್ಟಿರಬೇಕು. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುವುದಿಲ್ಲ. ಮತ್ತು ಸಕಾರಾತ್ಮಕ ಶಕ್ತಿಗಳು ಸದಾ ಕಾಲ ಇರುತ್ತದೆ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.
ಆರನೇಯದಾಗಿ ಮನೆಯಲ್ಲಿ ಎಂದಿಗೂ ಅಕ್ಕಿ ಮತ್ತು ಅರಿಶಿನ ಕುಂಕುಮ ಖಾಲಿಯಾಗದಂತೆ ನೋಡಿಕೊಳ್ಳಿ. ಯಾವ ಮನೆಯಲ್ಲಿ ಅಕ್ಕಿ, ಅರಿಶಿನ, ಕುಂಕುಮ ಪೂರ್ತಿ ಖಾಲಿಯಾಗುತ್ತದೆಯೋ, ಆ ಮನೆಯಲ್ಲಿ ದರಿದ್ರ ಶುರುವಾಗುತ್ತದೆ. ಹಾಗಾಗಿ ಇವೆಲ್ಲ ಪೂರ್ತಿಯಾಗಿ ಖಾಲಿಯಾಗುವ ಮುನ್ನವೇ, ತಂದಿಡಿ.
ಕೊನೆಯ ಎಚ್ಚರಿಕೆ ಎಂದರೆ, ನೀವು ಇದೀಗ ನಾವು ಹೇಳಿದ ವಸ್ತುವನ್ನು ಮುಟ್ಟುವ ಮುನ್ನ ಹಲವು ನಿಯಮಗಳನ್ನು ಪಾಾಲಿಸಿಲೇಬೇಕು. ಕುಡಿದು ಬಂದು, ಮಾಂಸಾಹಾರ ಸೇವಿಸಿ, ಇದನ್ನೆಲ್ಲ ಮುಟ್ಟಬಾರದು. ಮುಟ್ಟಾದ ಸಮಯದಲ್ಲಿ, ಸಾವಿನ ಮನೆಗೆ ಹೋಗಿ ಬಂದು, ಈ ವಸ್ತುಗಳನ್ನು ಮುಟ್ಬಾರದು. ಸ್ನಾನ ಮಾಡಿ ಬಂಂದ ಬಳಿಕ, ಇದನ್ನು ಬಳಸಿ, ಯಾರ ಕೈಗೂ ಅದು ಸಿಗದಂತೆ, ಅದನ್ನು ಹೊರಗಿನಿಂದ ಬಂದವರ್ಯಾರೂ ಮುಟ್ಟದಂತೆ ನೋಡಿಕೊಳ್ಳಬೇಕು.