Spiritual: ಏಕಾದಶಿ ಎಂದರೆ ಆ ದಿನ ಶ್ರೀವಿಷ್ಣುವಿನ ಭಕ್ತರು ಉಪವಾಸ ಮಾಡುತ್ತಾರೆ. ಆ ದಿನ ಉಪವಾಸ ಮಾಡಿದರೆ ವಿಷ್ಣು ಸನ್ನಿಧಾನ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಶ್ರೀಕೃಷ್ಣನ ದೇವಸ್ಥಾನವಾದ ಪುರಿ ಜಗನ್ನಾಥದಲ್ಲಿ ಏಕಾದಶಿ ಉಪವಾಸ ಮಾಡುವ ಕ್ರಮವಿಲ್ಲ. ಬದಲಾಗಿ ಅಂದು ಅಲ್ಲಿ ಪ್ರತಿದಿನಕ್ಕಿಂತ ಹೆಚ್ಚು ಉಣ್ಣಬೇಕು ಅನ್ನೋ ವಾಡಿಕೆ ಇದೆ. ಯಾಕೆ ಅಂತಾ ತಿಳಿಯೋಣ ಬನ್ನಿ..
ಏಕಾದಶಿ ಎಂದರೆ ಆ ದಿನ ನಿರ್ಜಲ ಉಪವಾಸ ಮಾಡುವವರಿದ್ದಾರೆ. ಕೆಲವರು ಬರೀ ನೀರು ಕುಡಿದು ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಅನ್ನ ಉಣ್ಣುವುದಿಲ್ಲ. ಏಕೆಂದರೆ ಏಕಾದಶಿ ದಿನ ಅನ್ನ ಉಣ್ಣಬಾರದು. ಅದು ಮಾನವನಿಂದ ತಯಾರಿಸಲ್ಪಡುವ ಆಹಾರ. ಹಾಗಾಗಿ ತರಕಾರಿ, ಹಣ್ಣುಗಳ ಸೇವನೆ ಮಾತ್ರ ಮಾಡಬಹುದು ಅನ್ನೋ ಪದ್ಧತಿ ಕೆಲವೆಡೆ ಇದೆ.
ಇನ್ನು ಕೆಲ ದೇವಸ್ಥಾನದಲ್ಲಿ ಏಕಾದಶಿಯ ದಿನ ಫಲಾರ ನೀಡುತ್ತಾರೆ. ಅವಲಕ್ಕಿ, ಉಪ್ಪಿಟ್ಟು ಈ ರೀತಿಯ ಆಹಾರ ತಿನ್ನಲು ನೀಡುತ್ತಾರೆ. ಆದರೆ ಪುರಿ ಜಗನ್ನಾಥದಲ್ಲಿ ನೀವು ಅನ್ನ ಪ್ರಸಾದವನ್ನೇ ಉಣ್ಣಬೇಕು. ಅಲ್ಲದೇ, ಪ್ರತಿದಿನಕ್ಕಿಂತ ಹೆಚ್ಚೇ ಅನ್ನ ಉಣ್ಣಬೇಕು. ಏಕೆಂದರೆ ಇಲ್ಲಿ ಅನ್ನವನ್ನು ಮಾನವ ತಯಾರಿಸುವುದಿಲ್ಲ,. ಬದಲಾಗಿ ಲಕ್ಷ್ಮೀ ದೇವಿ ತಯಾರಿಸುತ್ತಾಳೆ ಅನ್ನೋ ನಂಬಿಕೆ ಇದೆ.
ಇಲ್ಲಿ ಪ್ರಸಾದ ತಯಾರಿಸಲು ಇರುವ ಮಾನವ ನಿಮಿತ್ತ ಮಾತ್ರ. ಆದರೆ ಪ್ರಸಾದವನ್ನು ಲಕ್ಷ್ಮೀ ದೇವಿಯೇ ತಯಾರಿಸುತ್ತಾಳೆ. ಹಾಗಾಗಿ ದೇವರು ತಯಾರಿಸಿದ ಅನ್ನ ಪ್ರಸಾದವಾಗುತ್ತದೆ. ಮತ್ತು ಏಕಾದಶಿಯ ದಿನ ಇಲ್ಲಿ ಮಾತ್ರ ಅನ್ನ ಪ್ರಸಾದ ಊಟ ಮಾಡಬಹುದು ಎನ್ನಲಾಗುತ್ತದೆ.
ಇನ್ನು ಈ ನಂಬಿತೆ ಇರಲು ಕಾರಣವೇನು ಎಂದರೆ, ಇಲ್ಲಿ ಒಲೆ ಉರಿಸಿ, ಮಡಿಕೆಯ ಮೇಲೆ ಮಡಿಕೆ ಇರಿಸಿ, ಅನ್ನ ಬೇಯಿಸಲು ಇಡುತ್ತಾರೆ. ಬೇರೆಡೆಯಾದರೆ, ಪ್ರಥಮವಾಗಿ ಒಲೆಯ ಮೇಲೆ ಇರುವ ಮಡಿಕೆಯಲ್ಲಿರುವ ಅನ್ನ ಬೇಯುತ್ತಿತ್ತು. ಆದರೆ ಪುರಿ ಜಗನ್ನಾಥದಲ್ಲಿ ಹಾಗಲ್ಲ. ಎಲ್ಲಕ್ಕಿಂತ ಮೇಲಿರುವ ಮಡಿಕೆಯಲ್ಲಿರುವ ಅನ್ನ ಪ್ರಥಮವಾಗಿ ಬೇಯುತ್ತದೆ. ಅಗ್ನಿ ಮೇಲಿರುವ ಅನ್ನ ಮತ್ತೆ ಬೇಯುತ್ತದೆ. ಇದು ಪವಾಡವೇ ಸರಿ. ಹಾಗಾಗಿ ಪುರಿ ಜಗನ್ನಾಥದಲ್ಲಿ ಬೇಯುವ ಅನ್ನ ಬರೀ ಅನ್ನವಲ್ಲ. ಅದು ಲಕ್ಷ್ಮೀ ದೇವಿ ತಯಾರಿಸುವ ಪ್ರಸಾದ ಎಂಬ ನಂಬಿಕೆ ಇದೆ.




