Spiritual: ಕರ್ನಾಟಕದಲ್ಲಿ ಹಲವು ಶಕ್ತಿ ದೇವತೆಗಳ ದೇವಸ್ಥಾನವಿದೆ. ಕಟೀಲು, ಪೊಳಲಿ, ಬೊಪ್ಪನಾಡು, ನಿಮಿಷಾಂಬಾ, ಚಾಮುಂಡೇಶ್ವರಿ, ಕೊಲ್ಲೂರು, ಮಾರಿಕಾಂಬಾ ಹೀಗೆ ಹಲವು ದೇವಸ್ಥಾನಗಳಿದೆ. ಅದೇ ರೀತಿ ಅಷ್ಟು ಪ್ರಸಿದ್ಧವಾಗದಿದ್ದರೂ, ಶಕ್ತಿಶಾಲಿ ಎನ್ನಿಸಿಕೊಂಡಿರುವ ದೇವಿ ದೇವಸ್ಥಾನಗಳೂ ಸಾಕಷ್ಟಿದೆ. ಅಂಥ ದೇವಸ್ಥಾನದಲ್ಲಿ ನಾವಿಂದು ಕಾಟೇರಮ್ಮನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಲೂರಿನ ಹೊಸಕೋಟೆಯ ಕಂಬಳಿಪುರದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಆಲದ ಮರದಲ್ಲಿ ದೇವಿ ನೆಲೆ ನಿಂತಿದ್ದಾಳೆಂಬ ನಂಬಿಕೆ ಇದ್ದು, ಹರಕೆ ಹೊತ್ತ 9 ವಾರಗಳಲ್ಲಿ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಎಂದು ಹಲವು ಭಕ್ತರು ತಮ್ಮ ಜೀವನದ ಅನುಭವ ಹೇಳಿದ್ದಾರೆ.
ಇಲ್ಲಿ ಜೋಡಿ ಆಲದ ಮರವಿದ್ದು, ಒಂದು ಮರದಲ್ಲಿ ಕಾಟೇರಮ್ಮ ನೆಲೆಸಿದ್ದು, ಇನ್ನೊಂದು ಮರದಲ್ಲಿ ಮುನೇಶ್ವರ ನೆಲೆಸಿದ್ದಾನೆಂಬ ನಂಬಿಕೆ ಇದೆ. ಈ ಮರಕ್ಕೆ ಪ್ರದಕ್ಷಿಣೆ ಹಾಕಿ, ಕೆಂಪು ಬಟ್ಟೆಯೊಂದರಲ್ಲಿ ತೆಂಗಿನಕಾಯಿ ಕಟ್ಟಿ, ಹರಕೆ ಹೊತ್ತುಕೊಳ್ಳುತ್ತಾರೆ. ಆರೋಗ್ಯ ಸಮಸ್ಯೆ, ಸಂತಾನ ಸಮಸ್ಯೆ, ವಿವಾಹ ವಿಳಂಬ, ವೈವಾಹಿಕ ಜೀವನದಲ್ಲಿ ಸಮಸ್ಯೆ ಸೇರಿ, ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸಿಕ್ಕ ಉದಾಹರಣೆಗಳಿದೆ.
ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.
ಹೆಚ್ಚಿನ ಮಾಹಿತಿಗಾಾಗಿ ಸಂಪರ್ಕಿಸಿ: 8867841758, 6360562826