Wednesday, July 2, 2025

Latest Posts

ದ್ರೋಣಾಚಾರ್ಯರನ್ನ ಮತ್ತು ಭೀಷ್ಮರನ್ನ ಪಾಂಡವರು ಕೊಲ್ಲಲು ಕಾರಣವೇನು..?

- Advertisement -

ಮಹಾಭಾರತ ಯುದ್ಧದಲ್ಲಿ ಅತೀ ಬಲಿಷ್ಠರಾದ ಕೌರವ ಮತ್ತು ಪಾಂಡವರ ಗುರುವರ್ಯರಾದ ದ್ರೋಣಾಚಾರ್ಯರನ್ನು ಮತ್ತು ಭೀಷ್ಮರನ್ನು ಪಾಂಡವರು ನೇರವಾಗಿ ಕೊಲ್ಲದಿದ್ದರೂ, ಪರೋಕ್ಷವಾಗಿ ಕೊಂದಿದ್ದಾರೆನ್ನಬಹುದು. ಯಾಕೆ ದ್ರೋಣರನ್ನು ಮತ್ತು ಭೀಷ್ಮರನ್ನು ಕೊಂದರು ಎಂಬ ಬಗ್ಗೆ ತಿಳಿಯೋಣ ಬನ್ನಿ…

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಮಹಾಭಾರತ ಕಾಲದಲ್ಲಿ ವಿಶ್ವದ ಅತೀ ಶ್ರೇಷ್ಠ ಬಿಲ್ಲುಗಾರರೆಂದರೆ, ದ್ರೋಣಾಚಾರ್ಯರು. ಮಹಾನ್ ಮುನಿಯಾಗಿದ್ದ ಭಾರದ್ವಾಜರ ಮಗನೇ ದ್ರೋಣಾಚಾರ್ಯ. ಬಿಲ್ವಿದ್ಯೆಯಲ್ಲಿ ಶ್ರೇಷ್ಠರೆನ್ನಿಸಿದ್ದ ದ್ರೋಣಾಚಾರ್ಯರು ಪಾಂಡವರು ಮತ್ತು ಕೌರವರಿಗೆ ಯುದ್ಧನೀತಿ ಕಲಿಸಿಕೊಟ್ಟ ಗುರುಗಳಾಗಿದ್ದರು. ದ್ರೋಣಾಚಾರ್ಯರಿಗೆ ಪಾಂಡವರೆಂದರೆ ಬಲು ಪ್ರೀತಿ. ಅದರಲ್ಲೂ ಅರ್ಜುನನೆಂದರೆ ನೆಚ್ಚಿನ ಶಿಷ್ಯ. ಆದ್ರೂ ಕೂಡ ದ್ರೋಣರೂ ಮಹಾಭಾರತ ಯುದ್ಧದಲ್ಲಿ ಕೌರವರ ಪರ ನಿಂತು ಹೋರಾಡಿದರು.

ಭೀಷ್ಮರಿಗೂ ಕೂಡ ಕೌರವರಿಗಿಂತ ಪಾಂಡವರೆಂದರೆ ಪ್ರೀತಿ. ಮಹಾರಾಭಾರತ ಯುದ್ಧದಲ್ಲಿ ಪಾಂಡವರೇ ಗೆಲ್ಲಲಿ ಎಂಬುದು ಭೀಷ್ಮರ ಆಸೆಯಾಗಿತ್ತು. ಆದ್ರೆ ಭೀಷ್ಮರೂ ಕೂಡ ಕೌರವರ ಪರ ಹೋರಾಡಿದರು. ಇದಕ್ಕೆ ಕಾರಣ ಭೀಷ್ಮರು ತಮ್ಮ ತಂದೆಗೆ ನೀಡಿದ ಮಾತು. ತಾನು ಕೊನೆವರೆಗೂ ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗಾಗಿ ಹೋರಾಡುವೆ ಎಂದು ಭೀಷ್ಮರು ತಮ್ಮ ತಂದೆ ಶಂತನು ಮಹಾರಾಜನಿಗೆ ಮಾತು ಕೊಟ್ಟಿದ್ದರು. ಅದೇ ರೀತಿ ದ್ರೋಣರು ಉಪ್ಪು ತಿಂದ ಆಸ್ಥಾನದ ಋಣ ತೀರಿಸಬೇಕೆಂಬ ಕಾರಣಕ್ಕೆ ಪಾಂಡವರ ವಿರುದ್ಧ ಹೋರಾಡಿದರು.

ಇನ್ನು ಭೀಷ್ಮರನ್ನು ಮತ್ತು ದ್ರೋಣರನ್ನು ಕೊಲ್ಲದಿದ್ದರೆ, ಪಾಂಡವರು ಯುದ್ಧ ಗೆಲ್ಲುತ್ತಿರಲಿಲ್ಲ. ಮತ್ತು ಕೌರವರ ಗೆಲುವಿನಿಂದ ಜಗತ್ತು ವಿನಾಶದಂಚಿಗೆ ತಲುಪುತ್ತಿತ್ತು. ಈ ಕಾರಣಕ್ಕೆ ಕೃಷ್ಣನ ಅಣತಿಯಂತೆ ಪಾಂಡವರು ದ್ರೋಣರನ್ನು ಮತ್ತು ಭೀಷ್ಮರನ್ನು ಕೊಲ್ಲಬೇಕಾಯಿತು. ಅಶ್ವತ್ಥಾಮ ಹತಃ ಕುಂಜರ ಎಂದು ಧರ್ಮರಾಯ ಹೇಳುವಾಗ, ದ್ರೋಣರಿಗೆ ಕುಂಜರ ಎಂಬ ಶಬ್ಧ ಕೇಳದಂತೆ ಕೃಷ್ಣ ಪಾಂಚಜನ್ಯ ಊದುತ್ತಾನೆ. ಆಗ ದ್ರೋಣರು ಮಗನ ಮರಣದ ಸುದ್ದಿ ಖಚಿತಪಡಿಸಿಕೊಳ್ಳುವುದಕ್ಕಾಗಿ, ತಮ್ಮ ಶರೀರವನ್ನು ಬಿಟ್ಟು, ಆತ್ಮದೊಂದಿಗೆ ಸ್ವರ್ಗಕ್ಕೆ ತೆರಳುತ್ತಾರೆ. ಅದೇ ಸಮಯಕ್ಕೆ ದ್ರುಪದನ ಮಗ ದೃಷ್ಟದ್ಯುಮ್ನ ದ್ರೋಣರ ಶಿರಚ್ಛೆದನ ಮಾಡುತ್ತಾನೆ.

ಇನ್ನು ಯುದ್ಧ ನಡೆಯುವಾಗ ಶಿಖಂಡಿನಿ ನನ್ನ ಎದುರಿಗೆ ಬಂದರೆ ನಾನು ಶಸ್ತ್ರತ್ಯಾಗ ಮಾಡುತ್ತೇನೆಂದು ಭೀಷ್ಣರು ಹೇಳಿರುತ್ತಾರೆ. ಆ ಕಾರಣಕ್ಕೆ ಪಾಂಡವರು ಶಿಖಂಡಿನಿಯನ್ನು ಭೀಷ್ಮರ ವಿರುದ್ಧ ನಿಲ್ಲಿಸಿ, ಭೀಷ್ಮರನ್ನು ಸೋಲಿಸುತ್ತಾರೆ. ಭೂಮಿಯ ಮೇಲೆ ಭೀಷ್ಮರು ಬೀಳದಂತೆ ಶರ ಶಯ್ಯ ರೂಪಿಸಿ, ಅದರ ಮೇಲೆ ಭೀಷ್ಮರನ್ನು ಮಲಗಿಸುತ್ತಾರೆ. ಉತ್ತರಾಯಣ ಬರುವವರೆಗೂ ಕಾದ ಇಚ್ಛಾಮರಣಿಯಾದ ಭೀಷ್ಮರು ನಂತರ ಪ್ರಾಣ ತ್ಯಾಗ ಮಾಡುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

- Advertisement -

Latest Posts

Don't Miss