Hubballi News: ಹುಬ್ಬಳ್ಳಿ: ವರ್ಗಾವಣೆಗೊಂಡ ಮುಖ್ಯ ಶಿಕ್ಷಕಿಗೆ ವಿದ್ಯಾರ್ಥಿಗಳು ಕಣ್ಣೀರ ವಿದಾಯ ಹೇಳಿದ್ದಾರೆ. ಹುಬ್ಬಳ್ಳಿ ತಾಲೂಕಿನ ಹೆಬಸೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಮುಖ್ಯ ಗುರು ರತ್ನಾ ಗ್ರಾಮಪುರೋಹಿತ ವರ್ಗಾವಣೆಯಾಗಿದ್ದಾರೆ.

ಇವರು ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದರು. ಆದರೆ ಈಗ ರತ್ನಾ ಪುರೋಹಿತ್ ಕುಂದಗೋಳಕ್ಕೆ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆ ಹೆಬಸೂರು ಶಾಲೆಯ ಮಕ್ಕಳು ಬೇಸರದಲ್ಲಿ, ಮುಖ್ಯ ಶಿಕ್ಷಕಿಗೆ ಕಣ್ಣೀರ ಬೀಳ್ಕೊಡುಗೆ ನೀಡಿದ್ದಾರೆ. ಅಲ್ಲದೇ, ನೀವು ನಮ್ಮ ಶಾಲೆಯಲ್ಲಿ ಇರಿ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದಾರೆ. ಮುಖ್ಯಶಿಕ್ಷಕಿ ರತ್ನಾ ಕೂಡ ಮನಸ್ಸಲ್ಲದ ಮನಸ್ಸಿನಿಂದ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋಗುತ್ತಿದ್ದಾರೆ.
ಸುಳ್ಳು ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೈಯಲ್ಲಿ ಗರುಡವಿದೆ ಎಂದು ಕುಡಿದ ಮತ್ತಿನಲ್ಲಿ ಹಾವು ಹಿಡಿಯಲು ಹೋದವನಿಗೆ 4 ಬಾರಿ ಹಾವು ಕಡಿತ
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟ: ಬಿಜೆಪಿಗೆ ಮತ್ತೊಂದು ಸವಾಲು…!




