Sunday, December 22, 2024

Latest Posts

Book My Showನಲ್ಲಿ ಟ್ರೆಂಡಿಂಗ್‌ನಲ್ಲಿರುವ HHB ಸಿನಿಮಾ: 24 ಗಂಟೆಗಳಲ್ಲಿ 50 ಸಾವಿಕ್ಕೂ ಹೆಚ್ಚು ಬುಕಿಂಗ್ಸ್‌

- Advertisement -

Movie News: ಕರಾವಳಿ ಹುಡುಗರ ನಿರ್ದೇಶನ, ನಟನೆ, ನಿರ್ಮಾಣದ ಸಿನಿಮಾದಲ್ಲಿ ಎಂಟರ್‌ಟೇನ್‌ಮೆಂಟ್ ಮತ್ತು ಉತ್ತಮ ಸಂದೇಶ ಇದ್ದೇ ಇರುತ್ತದೆ ಅನ್ನೋ ನಂಬಿಕೆ ಕನ್ನಡಿಗರಿಗೆ ಬಂದಿದೆ. ಇದಕ್ಕೆ ಕಾರಣ, ಉಳಿದವರು ಕಂಡಂತೆಯಿಂದ, ಕಾಂತಾರದವರೆಗೂ ನಟನೆ ನಿರ್ದೇಶನ, ನಿರ್ಮಾಣದಲ್ಲಿ ಸಕ್ಸಸ್‌ ಕಂಡಿರುವ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ. ಇವರ ಜೊತೆ ಪ್ರಮೋದ್ ಶೆಟ್ಟಿ ನಟನೆ ಕೂಡ ಚೆರ್ರಿ ಆನ್ ದಿ ಕೇಕ್ ಇದ್ದಂತೆ.

ಹೀಗಾಗಿ ಕರಾವಳಿ ಹುಡುಗರು ಮಾಡುವ ಸಿನಿಮಾ ಅಂದ್ರೆ ಜನ ಇಷ್ಟಪಡಲು ಶುರು ಮಾಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ, ನಿನ್ನೆ ರಿಲೀಸ್ ಆಗಿರುವ ಹಾಸ್ಟೇಲ್ ಹುಡುಗರು ಸಿನಿಮಾ, ಅತ್ಯುತ್ತಮ ಓಪೆನಿಂಗ್ ಪಡೆದುಕೊಂಡಿದೆ. ಜನ ಇದನ್ನು ಕಿರಿಕ್ ಪಾರ್ಟಿ 2 ಅಂತಾನೇ ಹೇಳಿದ್ದಾರೆ. ಅಷ್ಟು ಸಖತ್ ಆಗಿದೆಯಂತೆ ಈ ಸಿನಿಮಾ.

Book My Show ನಲ್ಲಿ 24 ಗಂಟೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಬುಕಿಂಗ್ಸ್‌ ಆಗಿದ್ದು, Book My Show ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಹೊಸಬರ ಸಿನಿಮಾ ಆಗಿದ್ದರೂ, ಥಿಯೇಟರ್‌ನಲ್ಲಿ ಈ ರೀತಿ ರನ್ ಆಗಿದ್ದು ಕಂಡು , ಹಲವರು ಆಶ್ಚರ್ಯದ ಜೊತೆಗೆ, ಖುಷಿಯೂ ಪಟ್ಟಿದ್ದಾರೆ. ಈ ಸಿನಿಮಾಗೆ ರಕ್ಷಿತ್ ಶೆಟ್ಟಿ ಸಪೋರ್ಟ್ ಇದ್ದು, ರಿಷಬ್ ಕೂಡ ನಟಿಸಿದ್ದಾರೆ.

ಇನ್ನು ತಾನು ನಟಿಸಿದ್ದ ಸೀನ್‌ ತನ್ನ ಪರ್ಮಿಷನ್ ಕೇಳದೇ, ಬಳಸಲಾಗಿದೆ. ಹೀಗಾಗಿ 1 ಕೋಟಿ ರೂಪಾಯಿ ನೀಡಬೇಕು ಎಂದು ಕೇಳಿ, ರಮ್ಯಾ ಇಶ್ಯೂ ಕ್ರಿಯೇಟ್ ಮಾಡಿದ್ದರೂ ಕೂಡ, ಅದರಿಂದ ಸಿನಿಮಾಗೆ ಏನೂ ನಷ್ಟವಾಗಲಿಲ್ಲ. ಯಾಕಂದ್ರೆ ಸಿನಿಮಾ ಕಂಟೆಂಟ್ ಅಷ್ಟು ಚೆನ್ನಾಗಿದೆ ಎಂದಿದ್ದಾರೆ. ಪ್ರೇಕ್ಷಕ ಪ್ರಭುಗಳು.

ಇನ್ನು ಈ ಸಿನಿಮಾವನ್ನು ನಿತೀನ್ ಕೃಷ್ಣಮೂರ್ತಿ ನಿರ್ದೇಶಿಸಿದ್ದು, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಶೈನ್ ಶೆಟ್ಟಿ, ಅರ್ಚನಾ ಕೊಟ್ಟಿಗೆ, ಅಭಿದಾಸ್, ಪ್ರಜ್ವಲ್, ಮಂಜುನಾಥ್ ನಾಯಕ್, ಚೇತನ್ ದುರ್ಗಾ, ರಾಕೇಶ್, ಪವನ್ ಕುಮಾರ್, ಸೋಶಿಯಲ್ ಮೀಡಿಯಾ ಸ್ಟಾರ್ ಜಿ.ಜೆ.ಕೃಷ್ಣ ಸೇರಿ ಹಲವರು ನಟಿಸಿದ್ದಾರೆ.

Abhishek Bacchan : ಅಭಿಷೇಕ್ ಬಚ್ಚನ್ ರಾಜಕೀಯಕ್ಕೆ ಎಂಟ್ರಿ..?!

Hostel Hudugaru : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್…! ಅಪ್ಪುಗೆ ವಿಶೇಷ ನಮನ ಸಲ್ಲಿಸಿದ ಚಿತ್ರತಂಡ

Jailer-ತಮನ್ನಾಗೆ ಧಾರ್ಮಿಕ ಪುಸ್ತಕ ಉಡುಗೊರೆ ನೀಡಿದ ರಜನಿಕಾಂತ್

- Advertisement -

Latest Posts

Don't Miss