www.karnatakatv.net:ಕಬ್ಜ ಸಿನಿಮಾ ಸೆಟ್ಟೇರಿದಾಗಿನಿಂದ ಇಲ್ಲಿಯವರೆಗೆ ಸಾಕಷ್ಟು ಸುದ್ದಿ ಮಾಡುತ್ತಲೇ ಇದೆ. ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಬ್ಜ ಆರ್.ಚಂದ್ರು ಅವರ ಕನಸಿನ ಕೂಸು ಎಂದೇ ಹೇಳಬಹುದು. ಸದ್ಯ ಚಿತ್ರದ ಅರ್ಧದಷ್ಟು ಕೆಲಸಗಳು ಪೂರ್ಣಗೊಂಡಿದ್ದು ನಾಳೆ ಚಿತ್ರತಂಡವನ್ನು ಸೇರಲಿದ್ದಾರೆ ಕಿಚ್ಚ ಸುದೀಪ್.
ಆಸಕ್ತಿದಾಯಕ ಪಾತ್ರ ಮಾಡಲಿರುವ ಸುದೀಪ್, ಮಾಫಿಯಾ ದೊರೆ ಭಾರ್ಗವ್ ಭಕ್ಷಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಕಬ್ಜಾ ಚಿತ್ರದ ಮೂಲಕ ಮತ್ತೆ ಉಪೇಂದ್ರ ಮತ್ತು ಸುದೀಪ್ ಎರಡನೇ ಬಾರಿಗೆ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಮುಕುಂದ ಮುರಾರಿ ಸಿನಿಮಾದಲ್ಲಿ ಅವರಿಬ್ಬರೂ ಜೊತೆಯಾಗಿ ನಟಿಸಿದ್ದರು.
ಅಂಡರ್ ವರ್ಲ್ಡ್ ಕಥೆಯನ್ನು ಹೊಂದಿರುವ ಕಬ್ಜಾ ರೆಟ್ರೋ ಲುಕ್ಕನ್ನು ಹೊಂದಿದೆ. ಚಿತ್ರೀಕರಣದ ಕೆಲಸಗಳ ಮೇಲೆ ಸಂಪೂರ್ಣ ಗಮನವಹಿಸಿರುವ ನಿರ್ದೇಶಕ ಆರ್.ಚಂದ್ರು, ಯಾವುದೇ ವಿಷಯಗಳಿಗೂ ರಾಜಿಯಾಗದೆ ತಾವು ಅಂದು ಕೊಂಡoತೆ ದೃಷ್ಯವನ್ನು ಚಿತ್ರೀಕರಣ ಮಾಡುತ್ತಿದ್ದಾರೆ. ಇನ್ನೂ ರವಿ ಬಸ್ರೂರು ಸಂಗೀತ ಈ ಸಿನಿಮಾದ ಮತ್ತೊಂದು ಶಕ್ತಿ ಎಂದೇ ಹೇಳಬಹುದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ಗಳಲ್ಲಿ ರವಿ ಬಸ್ರೂರು ಮಾಡಿರುವ ಸಂಗೀತ ಕೇಳಬಹುದು.