Tuesday, April 29, 2025

Latest Posts

GURU RAYARA ಗುರುವೈಭವೋತ್ಸವಕ್ಕೆ ಕಿಚ್ಚ ಸುದೀಪ್ ಭೇಟಿ..!

- Advertisement -

ರಾಯಚೂರು : ಮಂತ್ರಾಲಯದ (Mantralaya) ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸ್ವಾಮಿಗಳ (Guru Raghavendra Swamy)401 ನೇ ಪಟ್ಟಾಭಿಷೇಕ ಹಾಗೂ 427 ನೇ ವರ್ಧಂತಿ ಉತ್ಸವ ಅಂಗವಾಗಿ ಗುರುವೈಭವೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಭಕ್ತ ಸಾಗರ ಹರಿದು ಬರುತ್ತಿದ್ದು, ಮಂತ್ರಾಲಯದಲ್ಲಿ ಸಂಭ್ರಮ ಮನೆಮಾಡಿದೆ. ಮಾರ್ಚ್ 04 ರಿಂದ 09 ರ ವರೆಗೆ ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಗುರುವೈಭವೋತ್ಸವ ಹಿನ್ನೆಲೆ ಸಂಭ್ರಮ ಮನೆಮಾಡಿದೆ. ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಗುರು ವೈಭವೋತ್ಸವ ಹಿನ್ನೆಲೆ ಮಂತ್ರಾಲಯ ಮಠದಲ್ಲಿ ವಿಶೇಷ ಸ್ವರ್ಣ ರಥೋತ್ಸವ ನಡೆಯಿತು. ರಾಯರ ಪಾದುಕೆಗಳನ್ನ ರಥೋತ್ಸವದಲ್ಲಿಟ್ಟು ಪ್ರಾಂಗಣದಲ್ಲಿ ರಥೋತ್ಸವ ನಡೆದಿ ದೆ., ಇನ್ನೂ ಈ ವರ್ಷದ ಗುರು ವೈಭವೋತ್ಸವದ ರಾಯರ  ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಮಂತ್ರಾಲಯಕ್ಕೆ ಭಾಗವಹಿಸಿದ್ದು ವಿಶೇಷವಾಗಿತ್ತು. ಮಂತ್ರಾಲಯದ ಗುರು ವೈಭವೋತ್ಸವದ ಎರಡನೇ ದಿನ ನಡೆದ ರಾಯರ ಮಹೋತ್ಸವದಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಅವರು ರಾಯರ ಸನ್ನಿಧಾನಕ್ಕೆ ಸೆಲೆಬ್ರಿಟಿಯಾಗಿ ನಾನು ಬಂದಿಲ್ಲ, ಒಬ್ಬ ಭಕ್ತನಾಗಿ ರಾಯರ ದರ್ಶನ ಪಡೆಯಲು ಬಂದಿದ್ದೇನೆ ಎಂದು ಹೇಳಿದರು. ಇನ್ನು ಗುರು ರಾಯರ ದರ್ಶನ ಪಡೆದ ನಂತರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ನಟ ಸುದೀಪ್ (Actor Kiccha Sudeep) ರವರಿಗೆ ಆಶೀರ್ವಚನ ನೀಡಿದ್ದಾರೆ. ಮಂತ್ರಾಲಯದಲ್ಲಿ ಮಾತ್ರವಲ್ಲದೆ ದೇಶ ವಿದೇಶದಲ್ಲಿರುವ ರಾಯರ ಶಾಖಾ ಮಠಗಳಲ್ಲೂ 6 ದಿನಗಳ ಕಾಲ ಗುರುವೈಭವೋತ್ಸವ ಹಿನ್ನೆಲೆ ವಿಶೇಷ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

                                                                   ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.

- Advertisement -

Latest Posts

Don't Miss