ಮಂಡ್ಯ: ವಾಹನಗಳಿಗೆ ಬಾಡಿಗೆ ಹಣ ನೀಡಿಲ್ಲ ಅಂತ ಸುಮಲತಾ ಅಂಬರೀಶ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರಕ್ಕೆ ತಂದಿದ್ದ ವಾಹನಗಳಿಗೆ ಬಾಡಿಗೆ ಹಣ ಕೊಟ್ಟಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿರೋ ಸುಮಲತಾ ಬೆಂಬಲಿಗರು, ರಾಕ್ ಲೈನ್ ವೆಂಕಟೇಶ್ ವಿರುದ್ಧ ಕಿಡಿ ಕಾರಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರದ ಖರ್ಚುವೆಚ್ಚ ಜವಾಬ್ದಾರಿ ಹೊತ್ತುಕೊಂಡಿದ್ದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಈವರೆಗೂ ತಾವು ಪಡೆದಿದ್ದ ವಾಹನಗಳ ಬಾಡಿಗೆ ಪಾವತಿಸದಿರೋ ವಿಷಯ ವಾಟ್ಸಾಪ್ ಗ್ರುಪ್ ಗಳಲ್ಲಿ ಚರ್ಚೆಯಾಗುತ್ತಿದೆ.
ಸ್ವಾಭಿಮಾನಕ್ಕಾಗಿ ಸತ್ಯಾಗ್ರಹ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದ್ದು, ಇನ್ನೂ ಕೆಲ ಕಾರ್ಯಕರ್ತರು ರಾಕ್ ಲೈನ್ ವೆಂಕಟೇಶ್ ಗೆ ಚುನಾವಣೆ ವಿಷಯವೆಲ್ಲಾ ಹೊಸದು ಹಾಗಾಗಿ ಈ ಸಮಸ್ಯೆಯಾಗಿದೆ ಅಂತ ಇನ್ನೂ ಕೆಲ ಬೆಂಬಲಿಗರು ಸಮಾಧಾನಪಡಿಸುತ್ತಿದ್ದಾರೆ. ಈ ಬಗ್ಗೆ ವಾಕ್ಸಾಪ್ ಆಡಿಯೋ ಕ್ಲಿಪ್ ವೈರಲ್ ಆಗುತ್ತಿದೆ.