ಕೇದಾರನಾಥ: ಕೇದಾರನಾಥ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಸತತ 17 ಗಂಟೆಗಳ ಕಾಲ ಗುಹೆಯೊಂದರಲ್ಲಿ ಧ್ಯಾನಕ್ಕೆ ಕುಳಿತಿದ್ದರು. ನರೇಂದ್ರ ಮೋದಿ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿ ಕೇದಾರನಾಥಕ್ಕೆ ಭೇಟಿ ನೀಡಿದ್ರು ಅನ್ನೋ ಲೆಕ್ಕಾಚಾರ ಎಲ್ಲರದ್ದಾಗಿತ್ತು. ಆದ್ರೆ ಸತತ 17 ಗಂಟೆಗಳ ತಪಸ್ಸು ಮುಗಿಸಿ ಮಾಧ್ಯಮದೊಂದಿಗೆ ಮಾತನಾಡಿದ ಮೋದಿ ಹೇಳಿದ್ದೇ ಬೇರೆ.
ನಾನು ಏಕಾಂತದಲ್ಲಿ ಸಮಯ ಕಳೆಯಲು ಅವಕಾಶ ಲಭಿಸಿ ಮುಂದಿನ ನನ್ನ ಕೆಲಸ ಕಾರ್ಯಗಳಲ್ಲಿ ನನ್ನ ಆಸಕ್ತಿ ಕೇಂದ್ರೀಕರಿಸಲು ಅನುಕೂಲವಾಯಿತು. ಇದಕ್ಕೆ ಅನುವು ಮಾಡಿಕೊಟ್ಟ ಚುನಾವಣಾ ಆಯೋಗಕ್ಕೆ ನಾನು ಚಿರಋಣಿ ಅಂತ ಮೋದಿ ಹೇಳಿದ್ರು.
ಲೋಕಸಭಾ ಚುನಾವಣೆಯ ಗೆಲುವಿಗಾಗಿ ನೀವು ತಪಸ್ಸಿಗೆ ಕುಳಿತಿದ್ರಾ ಅಂತ ಕೇಳಿದ ಪ್ರಶ್ನೆಗೆ ಮೋದಿ, ಇಲ್ಲ ನಾನು ದೇವರ ಬಳಿ ಏನನ್ನೂ ಕೇಳಿಕೊಂಡಿಲ್ಲ. ಚುನಾವಣೆಯಲ್ಲಿ ನನ್ನ ಗೆಲುವಿಗಾಗಿಯೂ ನಾನು ಪ್ರರ್ಥಿಸಿಲ್ಲ. ಹಾಗೆಯೇ ನಾನು ಈ ವರೆಗೂ ದೇವರನ್ನು ಪೂಜೆ ಮಾಡುತ್ತೇನೆಯೇ ಹೊರತು ನನಗಾಗಿ ಏನನ್ನೂ ಬೇಡಿಕೊಂಡಿಲ್ಲ. ಆದ್ರೆ ಭಗವಂತ ನಮ್ಮೆಲ್ಲರನ್ನೂ ಶಕ್ತರನ್ನಾಗಿ ಮಾಡಿದ್ದಾನೆ. ಜನರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸಿದೆ ಅಂತ ಪ್ರತಿಕ್ರಿಯೆ ನೀಡಿದ್ರು.
ಪೂಜೆ ಬಳಿಕ ಧ್ಯಾನಕ್ಕೆಂದು ತೆರಳಿದ ಗುಹೆ ಮಂದಾಕಿನಿ ನದಿಯಿಂದ ಸುಮಾರು 11,755 ಅಡಿ ಎತ್ತರದಲ್ಲಿದ್ದು, ಅಲ್ಲಿ ಸಣ್ಣದೊಂದು ಲೈಟ್, ಟೆಲಿಫೋನ್ ಮತ್ತು ಶೌಚಾಲಯ ಹೊರತುಪಡಿಸಿ ಬೇರೆ ಯಾವ ವ್ಯವಸ್ಥೆಯೂ ಇರಲಿಲ್ಲ.