Political News: ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ರವರ ವಿರುದ್ಧ ಡಾ.ಎಚ್.ಎನ್. ರವೀಂದ್ರರವರು ಸುಳ್ಳು ಆರೋಪದ ಮೂಲಕ ಮಾನಹಾನಿ ವರ್ಚಸ್ಸಿನ ತೇಜೋವಧೆ,ಮಾನಸಿಕ ಹಿಂಸೆ ಮಾಡುತ್ತಿರುವ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರು ದೂರು ಸಲ್ಲಿಸಿದರು.
ಸಚಿವ ಎನ್.ಚೆಲುವರಾಯಸ್ವಾಮಿ ರವರು ರಾಜ್ಯ ಹಾಗೂ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಹಾಗೂ ಜನಪರ ಕೆಲಸಗಳನ್ನು ಮಾಡುತ್ತಿದ್ದು ಇದನ್ನು ಸಹಿಸದ ಡಾ.ಎಚ್.ಎನ್. ರವೀಂದ್ರರವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷದ ವತಿಯಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಮಾಡುವಂತೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರವರನ್ನು ಒತ್ತಾಯ ಮಾಡುತ್ತಿದ್ದು ಅವರಿಗೆ ಟಿಕೆಟ್ ಸಿಗದ ಕಾರಣ ಪೂರ್ವಗ್ರಹ ಪೀಡಿತರಾಗಿ ಚೆಲುವರಾಯಸ್ವಾಮಿ ರವರ ಕೀರ್ತಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ನೋಡಿ ಅಸೂಯೆ ಹಾಗೂ ದ್ವೇಷದಿಂದ ತೇಜೋವದೆ ಮಾಡುವ ದುರುದ್ದೇಶದಿಂದ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನೇಮಕಾತಿಯಲ್ಲಿ ಅವರ ಆಪ್ತ ರಘುವೀರ್ ಗೌಡ ಎಂಬುವವರ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ.ಮೊದಲೇ ಹುದ್ದೆ ಫಿಕ್ಸ್ ಆಗಿ ಇಂತಹವರಿಗೆ ಹುದ್ದೆ ನೀಡುತ್ತೇವೆಂದು 20 ರಿಂದ 30 ಲಕ್ಷ ಹಣ ವಸೂಲಿ ಮಾಡುತ್ತಿದ್ದಾರೆ.
ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಸಹಕಾರ ಸಚಿವ ರಾಜಣ್ಣ ರವರು ಜಾತಿವಾದಿ ಎಂದು ಹಾಗೂ ಚಲುವರಾಯ ಸ್ವಾಮಿರವರು ನೇಮಕಾತಿಯಲ್ಲಿ ಆಪ್ತನ ಮೂಲಕ ಅವ್ಯವಹಾರ ಮಾಡಿರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾರಪಗಳನ್ನು ಮಾಡಿರುತ್ತಾರೆ. ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ ಕಳೆದ ನಾಲ್ಕು ದಿವಸಗಳ ಹಿಂದೆ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿದ್ದು, ಲಿಖಿತ ಪರೀಕ್ಷೆಯು ಪಾರದರ್ಶಕವಾಗಿ ನಡೆದಿರುವುದನ್ನು ರುಜುವಾತು ಪಡಿಸಲು ಮರುದಿವಸವೇ ಲಿಖಿತ ಪರೀಕ್ಷೆಯ ಕೀ ಆನ್ಸರ್ ನ್ನು ವೆಬ್ಸೈಟ್ ಪ್ರಕಟ ಮಾಡಿರುತ್ತಾರೆ. ನೇಮಕಾತಿ ಪ್ರಕ್ರಿಯೆಯು ಈಗಷ್ಟೇ ಪ್ರಾರಂಭವಾಗಿದ್ದು ನೇಮಕಾತಿ ಪ್ರಕ್ರಿಯೆ ಮುಗಿಯದಿದ್ದರೂ ಅಧ್ಯಕ್ಷ ಜೋಗಿ ಗೌಡ ಸೇರಿದಂತೆ ಸಚಿವರ ವಿರುದ್ಧ ಡಾ.ಹೆಚ್.ಎನ್. ರವೀಂದ್ರರವರು ಪೂರ್ವಗ್ರಹ ಪೀಡಿತರಾಗಿ ದ್ವೇಷ ಹಾಗೂ ದುರುದ್ದೇಶದಿಂದ ಮತ್ತು ಅಸೂಯೆಯಿಂದ ಡಿಸಿಸಿ ಬ್ಯಾಂಕ್ ನಲ್ಲಿ ಯಾವುದೇ ಅವ್ಯವಹಾರಗಳು ನಡೆಯದಿದ್ದರೂ ಮತ್ತು ಡಿಸಿಸಿ ಬ್ಯಾಂಕಿಗೂ ಮತ್ತು ಸಚಿವರಿಗೂ ಯಾವುದೇ ಸಂಬಂಧವಿರದಿದ್ದರೂ ಡಿಸಿಸಿ ಬ್ಯಾಂಕಿಗೆ ಪ್ರತ್ಯೇಕವಾದಂತಹ ಆಡಳಿತ ಮಂಡಳಿಯಿದ್ದರು ಹಾಗೆಯೇ ರಘುವೀರಗೌಡರವರು ಹಲವಾರು ಕಾರ್ಯಕರ್ತರಂತೆ ಅವರು ಒಬ್ಬ ಕಾರ್ಯಕರ್ತರಾಗಿದ್ದು ಸಚಿವರು ಯಾರ ಮುಖಾಂತರವೂ ಯಾವುದೇ ಅವ್ಯವಹಾರವನ್ನು ಮಾಡದಿದ್ದರೂ ಸಚಿವರ ಹೆಸರಿಗೆ ಮಸಿ ಬಳಿಯುವ ಹಾಗೂ ತೇಜೋದೇ ಮಾಡುವ ದೃಷ್ಟಿಯಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ.
ಆದ್ದರಿಂದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಸಚಿವ ಚಲುವರಾಯಸ್ವಾಮಿ ರವರ ವಿರುದ್ಧ ಡಾ.ಹೆಚ್.ಎನ್.ರವೀಂದ್ರ ರವರು ಸುಳ್ಳು ಆರೋಪದ ಮೂಲಕ ಸುಳ್ಳು ಸುದ್ದಿ ಹರಡುತ್ತಿರುವುದರ ಮೂಲಕ ಅಭ್ಯರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಇನ್ನು ಮುಂದೆ ಈ ರೀತಿಯ ಕೃತ್ಯಕ್ಕೆ ಅವರು ತೊಡಗಿಕೊಳ್ಳದಂತೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ಕನ್ನಲಿ ಚನ್ನಪ್ಪ, ನವೀನ್ ಕುಮಾರ್, ಕಾಗೆ ಹಳ್ಳದ ದೊಡ್ಡಿ ರಾಮಕೃಷ್ಣ, ನಗರಸಭಾ ಸದಸ್ಯ ಜಬಿವುಲ್ಲಾ, ಉಮ್ಮಡಹಳ್ಳಿ ನಾಗೇಶ್, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಇತರರು ಹಾಜರಿದ್ದರು.




