ನವವಿವಾಹಿತೆಯ ಅನುಮಾನಾಸ್ಪದ ಸಾವು: ಪತಿಯ ಮೇಲೆ ಕೊಲೆ ಆರೋಪ

Hassan News: ಹಾಸನ: ನವವಿವಾಹಿತೆ ಅನುಮಾನಾಸ್ಪದವಾಗಿ ಸಾವಾಗಿದ್ದು, ಪತಿಯೇ ಕೊಲೆ ಮಾಡಿದ್ದಾನೆಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಸುರಭಿ (24) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆಯಾಗಿದ್ದು,ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೂರು ವರ್ಷದ ಹಿಂದೆ ಸುರಭಿ ನಾಗಯ್ಯನಕೊಪ್ಪಲು ಗ್ರಾಮದ ದರ್ಶನ್ ಜೊತೆ ವಿವಾಹವಾಗಿದ್ದಳು. ಆದರೆ ನಿನ್ನೆ ಸುರಭಿ ಸಾವನ್ನಪ್ಪಿದ್ದಾಳೆ. ಸುರಭಿ ಲೋ ಬಿಪಿಯಾಗಿ ಸಾವನ್ನಪ್ಪಿದ್ದಾಳೆಂದು ಪತಿ ಪೋಷಕರಿಗೆ ಕರೆ ಮಾಡಿ ಹೇಳಿದ್ದಾನೆ.

ಆದರೆ ಸುರಭಿ ಲೋ ಬಿಪಿಯಿಂದ ಸಾವನ್ನಪ್ಪಲಿಲ್ಲ. ಬದಲಾಗಿ ದರ್ಶನ್ ಸುರಭಿಯನ್ನು ಕೊಲೆ ಮಾಡಿದ್ದಾನೆಂದು ಸುರಭಿ ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ದರ್ಶನ್‌ಗೆ ಬೇರೊಬ್ಬರ ಜೊತೆ ಅಕ್ರಮ ಸಂಬಂಧವಿತ್ತು. ಇದನ್ನು ಪ್ರಶ್ನಿಸುತ್ತಿದ್ದ ಸುರಭಿಯನ್ನು ದರ್ಶನ್ ನೇಣುಬಿಗಿದು ಕೊಲೆ ಮಾಡಿದ್ದಾನೆಂದು, ಪೋಷಕರು ಆರೋಪಿಸಿದ್ದಾರೆ.

ಶ್ರವಣಬೆಳಗೊಳ ಆಸ್ಪತ್ರೆಯ ಶವಾಗಾರದಲ್ಲಿ ಸುರಭಿ ಮೃತದೇಹವಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಿವುಡ್ ನಟಿಯ ಹೆಸರಲ್ಲಿ ಮಹಾ ಮೋಸ: ಸೈಬರ್ ಕ್ರೈಮ್‌ಗೆ ದೂರು

ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ, ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ: ಸಚಿವ ಗುಂಡೂರಾವ್

ನೊಬೆಲ್ ಶಾಂತಿ ಪ್ರಶಸ್ತಿಗೆ ಎಲಾನ್ ಮಸ್ಕ್ ಹೆಸರು ನಾಮಿನೇಟ್

About The Author