ತಾವು ಪೈಲ್ವಾನ್ ಚಿತ್ರ ನಿರ್ದೇಶನ ಮಾಡ್ಬೇಕಾದ್ರೆ, ಯಾವ ಯಾವ ಸಮಸ್ಯೆ ಬಂತು. ಆ ಸಮಯದಲ್ಲಿ ಅವರಿಗೆ ಎಂಥ ಅನುಭವ ಆಯ್ತು. ಸಿನಿಮಾ ಮಾಡ್ಬೇಕಾದ್ರೆ ಅವರಿಗೆ ಸಪೋರ್ಟ್ ಆಗಿ ನಿಂತಿದ್ಯಾರು..? ಇತ್ಯಾದಿ ವಿಷಯಗಳ ಬಗ್ಗೆ ನಿರ್ದೇಶಕಿ ಸ್ವಪ್ನಾ ಕೃಷ್ಣ ನಮ್ಮ ಜೊತೆ ಮಾತನಾಡಿದ್ದಾರೆ. ಹಾಗಾದ್ರೆ ಅವ್ರು ಏನೇನು ಮಾತಾಡಿದ್ರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸ್ವಪ್ನ ಅವರ ಪತಿ ಕೃಷ್ಣ ಮೊದಲು ಕ್ಯಾಮೆರಾ ಮ್ಯಾನ್ ಆಗಿದ್ರು. ನಂತರ ನಿರ್ದೇಶಕರಾದ್ರು. ಕೃಷ್ಣ ಅವರ ಸಿನಿ ಜರ್ನಿಯನ್ನ ಕಮ್ಣಾರೆ ಕಂಡವರು ಸ್ವಪ್ನ ಕೃಷ್ಣ. ಕೃಷ್ಣ ಅವರಿಗಾದ ಅವಮಾನ, ಹೊಗಳಿಕೆ, ತೆಗಳಿಕೆ ಎಲ್ಲವನ್ನೂ ಕಂಡ ಸ್ವಪ್ನ ಕೃಷ್ಣಾ ಅವರಿಗೆ ತಾವೊಂದು ಸಿನಿಮಾ ಡೈರೆಕ್ಷನ್ ಮಾಡ್ತೀವಿ ಅಂದಾಗ, ತುಂಬಾ ಹೆಮ್ಮೆ ಆಗಿತ್ತು. ಆ ಕನಸಿಗೆ ಕಿಚ್ಚ ಸುದೀಪ್ ಕೂಡ ಸಾಥ್ ಕೊಟ್ಟರು. ಕೊನೆಗೂ ಕೃಷ್ಣ ಮತ್ತು ಸ್ವಪ್ನಾ ನಿರ್ದೇಶನದಲ್ಲಿ, ಕಿಚ್ಚ ಸುದೀಪ್ ನಟನಾಗಿ ನಟಿಸಿದ ಪೈಲ್ವಾನ್ ಸಿನಿಮಾ ರಿಲೀಸ್ ಆಗೇ ಬಿಡ್ತು.
ಆದ್ರೆ ಇಷ್ಟು ಕಷ್ಟಪಟ್ಟು ಮಾಡಿದ ಸಿನಿಮಾವನ್ನ ದುಷ್ಟರು ಪೈರಸಿ ಮಾಡಿಯೇ ಬಿಟ್ಟರು. ಆ ಸಮಯದಲ್ಲಿ ಸ್ವಪ್ನಾ ಕೆಂಡಾಮಂಡಲರಾಗಿದ್ದರು. ಆ ಬಗ್ಗೆ ಈಗಲೂ ಸ್ವಪ್ನಾ ಅವರಿಗೆ ಬೇಸರವಿದೆ. ಆಧ್ರೆ ಏನಾಗಬೇಕೋ ಅದು ಆಗತ್ತೆ. ಏನೂ ಮಾಡಕ್ಕಾಗಲ್ಲಾ ಅಂತಾ ಸುಮ್ಮನಾದೆ ಅಂತಾರೆ ಸ್ವಪ್ನಾ. ಅಲ್ಲದೇ ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಅಂದಂಗೆ, ನನ್ನ ಜೀವನದಲ್ಲಿ ಅದೊಂದು ಕಪ್ಪು ಚುಕ್ಕೆ ಎಂದು ಸ್ವಪ್ನಾ ಬೇಸರ ವ್ಯಕ್ತಪಡಿಸಿದ್ದಾರೆ.
ಆದ್ರೆ ಪೈಲ್ವಾನ್ ಚಿತ್ರದಿಂದ ನನಗೇನು ಲಾಸ್ ಆಗಿಲ್ಲ. ಬದಲಾಗಿ ನನಗೆ ಲಾಭವಾಗಿದೆ. ನಮ್ಮ ಮನೆ ಜನರಿಗೆ ಲಾಭವಾಗಿದೆ. ನನಗೆ ಒಳ್ಳೆಯದಾಗಿದೆ. ಅಲ್ಲದೇ, ನನಗೆ ಪೈಲ್ವಾನ್ ಸಿನಿಮಾ ಬಗ್ಗೆ ಖುಷಿ ಇದೆ ಅಂತಾ ಸ್ವಪ್ನಾ ಕೃಷ್ಣಾ ಹೇಳಿದ್ದಾರೆ. ಅಲ್ಲದೇ, ಅದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ನಮಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ, ಪೈರಸಿ ಆದ ಮೇಲೂ ಕೂಡ, ನಮ್ಮ ಸಿನಿಮಾ ಚೆನ್ನಾಗಿದೆ ಅಂತಾನೇ ಜನ ರಿವ್ಯೂಸ್ ಕೊಟ್ಟಿದ್ದಾರೆ. ಹಾಗಾಗಿ ನನ್ನ ಸಿನಿಮಾ ಬಗ್ಗೆ ನನಗೆ ತುಂಬಾ ಖುಷಿ ಇದೆ ಅಂತಾ ಸ್ವಪ್ನಾ ಸಂತಸ ವ್ಯಕ್ತಪಡಿಸಿದ್ದಾರೆ.