ಕಾಮನ್‍ವೆಲ್ತ್ ಕ್ರೀಡಾಕೂಟ : ಮೊದಲ ದಿನ ಭಾರತಕ್ಕೆ ಸಿಹಿ, ಕಹಿ 

ಬರ್ಮಿಂಗ್‍ಹ್ಯಾಮ್: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ  ಅಗ್ರ ಬಾಕ್ಸರ್ ಶಿವ ಥಾಪ ಶುಭಾರಂಭ ಮಾಡಿದ್ದಾರೆ .

ಶುಕ್ರವಾರ ನಡೆದ ಪುರುಷರ 63.5 ಕೆ.ಜಿ.ವಿಭಾಗದ ಮೊದಲ ಸುತ್ತಿನಲ್ಲಿ  ಪಾಕಿಸ್ಥಾನದ ಸುಲೇಮಾನ್ ಬಾಲೊಚ್ ವಿರುದ್ಧ 5-0 ಅಂಕಗಳಿಂದ ಗೆದ್ದರು. ಈ ಗೆಲುವಿನೊಂದಿಗೆ ಶಿವ ಥಾಪ  ಪ್ರೀ ಕ್ವಾರ್ಟರಗೆ ಪ್ರವೇಶ ಪಡೆದರು.  ಐದು ಬಾರಿ ಏಷ್ಯಾನ್ ಚಾಂಪಿಯನ್ ಆಗಿದ್ದ ಶಿವಥಾಪ , ಮೊಣಚಾದ ಪಂಚ್‍ಗಳನ್ನು  ಕೊಟ್ಟು  ಸುಲಭವಾಗಿ ಗೆದ್ದುಕೊಂಡರು.

ಟೇಬಲ್ ಟೆನಿಸ ವಿಭಾಗದಲ್ಲಿ ಭಾರತ ದ.ಆಫ್ರಿಕಾವನ್ನು  3-0 ಅಂತರದಿಂದ ಸೋಲಿಸಿದೆ.  ಗ್ರೂಪ್ 2ರ ಮಹಿಳಾ ವಿಭಾಗದಲ್ಲಿ  ಭಾರತದ  ರೀತ್ ಟೆನ್ನಿನ್‍ಸನ್ ಹಾಗೂ ಶ್ರೀಜಾ ಅಕುಲಾ ದ.ಆಫ್ರಿಕಾದ  ಲೈಲಾ ಎಡ್ವಡ್ರ್ಸ್ ಮತ್ತು ತನಿಶಾ ಪಟೇಲ್ 3-0 ಅಂತರದಿಂದ ಗೆದ್ದರು. ಇದು ಕೂಟದ ಭಾರತದ ಮೊದಲ ಗೆಲುವು ಆಗಿದೆ. ಮತ್ತೊರ್ವ ಅಗ್ರ ಆಟಗಾರ್ತಿ ಮನಿಕಾ ಭಾತ್ರ ದ.ಆಫ್ರಿಕಾದ ಮುಶೀಕ್ ಕಲಾಂ ವಿರುದ್ಧ 11-5 ಅಂಕಗಳಿಂದ ಗೆದ್ದರು.

ಇನ್ನು ಇದೇ ಪುರುಷರ  ವಿಭಾಗದಲ್ಲಿ  ಭಾರತ ತಂಡ ಬಾರ್ಬೊಡೊಸ್ ತಂಡವನ್ನು 3-0 ಅಂಕಗಳಿಂದ ಸೋಲಿಸಿತು.

ಬ್ಯಾಡ್ಮಿಂಟನ್‍ನ ಮಿಶ್ರ ಡಬಲ್ಸ್ ವಿಭಾಗದಲ್ಲಿ  ಕಿದಂಬಿ ಶ್ರೀಕಾಂತ್ ಪಾಕಿಸ್ಥಾನದ ಮುರಾದ್ ವಿರುದ್ಧ 21-16, 22-20 ಅಂಕಗಳಿಂದ ಗೆದ್ದು ಶುಭಾರಂಭ ಮಾಡಿದ್ದಾರೆ.

ಇನ್ನು ಈಜಿನಲ್ಲಿ  ಶ್ರೀಹರಿ ನಟರಾಜ್ ಬ್ಯಾಕ್‍ಸ್ಟ್ರೋಕ್ ವಿಭಾಗದಲ್ಲಿ  ಸೆಮಿಫೈನಲ್ ತಲುಪಿದ್ದಾರೆ. ಪುರುಷರ 100ಮೀ.ಬ್ಯಾಕ್‍ಸ್ಟ್ರೋಕ್ ವಿಭಾಗದಲ್ಲಿ  ಶ್ರೀಹರಿ ನಟರಾಜ್ 54.68 ಸೆಕೆ. ಗುರಿ ತಲುಪಿ ಸೆಮಿಫೈನಲ್‍ಗೆ ಅರ್ಹತೆ ಪಡೆದರು.

ಮತ್ತೊರ್ವ ಸಾಜನ್ ಪ್ರಕಾಶ್ 50 ಮೀ. ಬಟರ್ಫ್ಲೈಲೈ ವಿಭಾಗದಲ್ಲಿ  8 ನೇ ಸ್ಥಾನ ಪಡೆದರು. ಆದರೆ ಸೆಮಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಪುರುಷರ 400ಮೀ. ವಿಭಾಗದಲ್ಲಿ ಖುಶಾಗ್ರ ಕೂಡ ವಿಫಲರಾದರು.

 

 

 

About The Author