ಜೈಪುರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯುಇಂದಿನಿಂದ ಆರಂಭವಾಗಲಿದೆ.. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಮೊದಲ ಸರಣಿ ಆಡಲು ಸಜ್ಜಾಗಿದೆ. ಟಿ20 ವಿಶ್ವಕಪ್ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ವಿರುದ್ದ ಮೊದಲ ಟಿ20 ಪಂದ್ಯದೊಂದಿಗೆ ರೋಹಿತ್ ಶರ್ಮಾ ಟೀಮ್ ಇಂಡಿಯಾ ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ. ಹೀಗಾಗಿಯೇ ಮೊದಲ ಪಂದ್ಯವೇ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ಭಾರತ ತಂಡವು ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ದ ಹೀನಾಯವಾಗಿ ಸೋಲನ್ನು ಅನುಭವಿಸಿತು. ಇದೀಗ ಅದೇ ತಂಡವನ್ನು ಮತ್ತೆ ಟೀಮ್ ಇಂಡಿಯಾ ಎದುರಿಸುತ್ತಿದೆ..
ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ. 6 ಬ್ಯಾಟ್ಸಮನ್ ಗಳು ಹಾಗೂ 5 ಬೌಲರುಗಳು ತಂಡದಲ್ಲಿರಲಿದ್ದಾರೆ. ಅದರಂತೆ ಆರಂಭಿಕರಾಗಿ ರೋಹಿತ್ ಮತ್ತು ರಾಹುಲ್ ಆಡುವುದು ಬಹುತೇಕ ಖಚಿತ. ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡಲಿದ್ದಾರೆ.
ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಲಿದ್ದಾರೆ. ಇನ್ನು ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಸ್ಥಾನದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಕಣಕ್ಕಿಳಿಸಬಹುದು. ಏಕೆಂದರೆ ಮಧ್ಯಮ ವೇಗದ ಆಲ್ರೌಂಡರ್ ಆಗಿ ಟೀಮ್ ಇಂಡಿಯಾದಲ್ಲಿ ವೆಂಕಟೇಶ್ ಅಯ್ಯರ್ ಮಾತ್ರ ಇದ್ದಾರೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಬಹುದು. ಇನ್ನು ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳಾಗಿ ಅಶ್ವಿನ್ ಮತ್ತು ಚಹಲ್ ಅವಕಾಶ ಪಡೆಯುವುದು ಖಚಿತ. ಅದೇ ರೀತಿ ವೇಗದ ಬೌಲರ್ಗಳಾಗಿ ಭುವನೇಶ್ವರ್ ಕುಮಾರ್ ಜೊತೆ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವ ಸಾಧ್ಯತೆಯಿದೆ. ಒಂದು ವೇಳೆ ಪಂತ್ರನ್ನು ಕಣಕ್ಕಿಳಿಸಿದರೆ ಶ್ರೇಯಸ್ ಅಯ್ಯರ್ ಅವರನ್ನು ಹೊರಗಿಡಬೇಕಾಗುತ್ತದೆ. ಹೀಗಾಗಿ 5ನೇ ಕ್ರಮಾಂಕದ ಸ್ಥಾನಕ್ಕಾಗಿ ಪಂತ್-ಅಯ್ಯರ್ ನಡುವೆ ಪೈಪೋಟಿ ಇರಲಿದೆ.