Monday, July 27, 2026

JDS

ನಾಮಪತ್ರ ಸಲ್ಲಿಸಿದ ಕೆ.ಆರ್.ಪುರ ಕಲಿಗಳು..

ಕೆಆರ್ ಪುರ: ಮಹದೇವಪುರ ಮೀಸಲು ವಿಧಾನಸಭಾ  ಕ್ಷೇತ್ರದ  ಬಿಜೆಪಿ ಅಭ್ಯರ್ಥಿಯಾಗಿರುವ ಮಂಜುಳಾ ಅರವಿಂದ್ ನಿಂಬಾವಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ ಬಾರಿ ಮೂರು ಸಲ ಶಾಸಕರಾಗಿದ್ದ ಅರವಿಂದ ನಿಂಬಾವಳಿಗೆ ಈ ಬಾರಿ ಟಿಕೇಟ್ ನಿರಾಕರಿಸಿದ್ದು, ಅವರ ಪತ್ನಿ ಮಂಜುಳಾರಿಗೆ ಟಿಕೇಟ್ ಸಿಕ್ಕಿದೆ. ಹಾಗಾಗಿ ಕೆಆರ್‌ಪುರದ ಬಿಇಓ ಕಚೇರಿಯಲ್ಲಿ ಮಂಜುಳಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ...

‘ಆ ಮೂರು ಜನರನ್ನು ಮುದುರಿ, ಮೂಲೆಗೆ ಹಾಕಿ ನಮ್ಮ ರವಿ ಅಣ್ಣನನ್ನ ಪಕ್ಕಾ ಗೆಲ್ಲಿಸುತ್ತಾರೆ’

ಮಂಡ್ಯ: ಇಂದು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಫೈಟರ್ ರವಿ ನಾಮಪತ್ರ ಸಲ್ಲಿಸಿದ್ದಾರೆ. ನಾಗಮಂಗಲ ವಿಧಾನ ಕ್ಷೇತ್ರದ ಪಕ್ಷೇತರ  ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದರು. ಕಳೆದ 2 ವರ್ಷಗಳಿಂದ ಸಮಾಜ ಸೇವಕನಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರವಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಕೆಲ ಕಾರಣಗಳಿಂದ ಫೈಟರ್‌ ರವಿಗೆ ಟಿಕೇಟ್ ಸಿಗದ ಕಾರಣ, ರವಿ ಪಕ್ಷ ತೊರೆದಿದ್ದಾರೆ....

‘ನಾನು ಜೆಡಿಎಸ್ ಭದ್ರಕೋಟೆಯೊಳಗೆ ಹುಟ್ಟಿ ಬೆಳೆದಿದ್ದೇನೆ. ಜನರೇ ಭದ್ರಕೋಟೆಯನ್ನು ಛಿದ್ರ ಮಾಡ್ತಾರೆ’

ಹಾಸನ: ಹೊಳೆನರಸಿಪುರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಾಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದ ಶ್ರೇಯಸ್‌ಗೆ ತಾಯಿ ಅನುಪಮಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ.ಹೆಚ್ ಲಕ್ಷ್ಮಣ್ , ಮುಖಂಡ ಪುಟ್ಟರಾಜ್, ಲಕ್ಷ್ಮಣ್ ಸಾಥ್ ನೀಡಿದ್ದಾರೆ. ಸಹಸ್ರಾರು ಕಾರ್ಯಕರ್ತರೊಂದಿಗೆ ರ್ಯಾಲಿಯಲ್ಲಿ ಬಂದ ಶ್ರೇಯಸ್, ಮಾಜಿ ಸಚಿವ ದಿ.ಪುಟ್ಟಸ್ವಾಮಿ ಗೌಡರ ಮೊಮ್ಮಗನಾಗಿದ್ದು, ದೇವೇಗೌಡರ ಎದುರಾಳಿಯಾಗಿದ್ದ. ನಾಮಪತ್ರ...

’20ನೇ ತಾರೀಕು ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಡಿಕೆ, ರೇವಣ್ಣ, ಪ್ರಜ್ವಲ್‌, ಸೂರಜ್ ಭಾಗಿಯಾಗಲಿದ್ದಾರೆ’

ಹಾಸನ: ಹಾಸನದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ, ಇಂದು ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆ ಮೂಲಕ, ತಮ್ಮ ಕಾರ್ಯಕರ್ತರೊಂದಿಗೆ ಕಚೇರಿಗೆ ಬಂದ ಸ್ವರೂಪ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಸ್ವರೂಪ್, ನಮ್ಮ ನಾಯಕರಾದಂಥ ದೇವೇಗೌಡರು, ಕುಮಾರಣ್ಣನವರು, ರೇವಣ್ಣನವರು, ಪ್ರಜ್ವಲ್, ಸೂರಜ್, ಭವಾನಿ ಮೇಡಂ ಆಶೀರ್ವಾದದೊಂದಿಗೆ ನಾನು ಇಂದು ನಾಮಪತ್ರ ಸಲ್ಲಿಸಿದ್ದೇನೆ....

ನಾಮಪತ್ರ ಸಲ್ಲಿಸಿದ ಎಸ್.ಎನ್.ನಾರಾಯಣಸ್ವಾಮಿ ಮತ್ತು ವರ್ತೂರು ಪ್ರಕಾಶ್..

ಕೋಲಾರ : ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ, ಎಸ್.ಎನ್.ನಾರಾಯಣ ಸ್ವಾಮಿ, ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್‌ ಮೆರವಣಿಗೆ ಮೂಲಕ ಬಂಗಾರಪೇಟೆ ತಾಲೂಕು ಚುನಾವಣಾಧಿಕಾರಿ ಕಚೇರಿಗೆ ಬಂದು, ನಾರಾಯಣಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಎಂ.ಎಲ್‌.ಸಿ ಅನೀಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ಸಾಥ್ ಕೊಟ್ಟಿದ್ದಾರೆ. ಇನ್ನೊಂದೆಡೆ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವರ್ತೂರು...

‘ನನ್ನನು ಹೊರತು ಪಡಿಸಿ ಇನ್ನೆಲ್ಲಾ ಅಭ್ಯರ್ಥಿಗಳು ಕೂಡ ನನಗೆ ಎದುರಾಳಿಗಳೇ’

ಹಾಸನ: ನನ್ನನು ಹೊರತು ಪಡಿಸಿ ಇನ್ನೆಲ್ಲಾ ಅಭ್ಯರ್ಥಿಗಳು ಕೂಡ ನನಗೆ ಎದುರಾಳಿಗಳೇ ಆಗಿದ್ದಾರೆ ಎಂದು ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ. ಗೌಡ ಹೇಳಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ನಗರದ ಎಂ.ಜಿ ರಸ್ತೆಯ ತಾಲೂಕು ಕಚೇರಿಯಲ್ಲಿ ಇಂದು ತಮ್ಮ ಪತ್ನಿ ಹಾಗೂ ತಂದೆ ತಾಯಿ ಹಾಗೂ ಬೆಂಬಲಿಗರ ಒಡಗೂಡಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ...

ಬೃಹತ್ ಮೆರವಣಿಗೆ ಮೂಲಕ ಬಂದು, ನಾಮಪತ್ರ ಸಲ್ಲಿಸಿದ ಹೆಚ್.ಕೆ.ಕುಮಾರಸ್ವಾಮಿ..

ಹಾಸನ: ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಎಚ್. ಕೆ ಕುಮಾರಸ್ವಾಮಿ ಸೋಮವಾರ ಚುನಾವಣಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ನಾಮಪತ್ರ ಸಲ್ಲಿಸಿದರು. ಉಮೇದುವರಿಕೆ ಸಲ್ಲಿಸುವ ಮೊದಲು ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಎಸಿ ಕಚೇರಿವರೆಗೂ ಸುಮಾರು 5000 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಜೊತೆಗೂಡಿ ಬೃಹತ್ ಮೆರವಣಿಗೆ ನೆಡೆಸಿದರು. ಈ ವೇಳೆ ತಾಲೂಕು ಜೆಡಿಎಸ್...

ಕುಟುಂಬ ಸಮೇತರಾಗಿ ಬಂದು ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ರೇವಣ್ಣ..

ಹಾಸನ: ಹಾಸನದ ಹೊಳೆನರಸೀಪುರ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಬಂದ ಮಾಜಿ ಸಚಿವ ರೇವಣ್ಣ, ನಾಮಪತ್ರ ಸಲ್ಲಿಸಿದ್ದಾರೆ. ಹೊಳೆನರಸಿಪುರ ತಾಲೂಕು ಕಚೇರಿಯಲ್ಲಿ ರೇವಣ್ಣ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಭವಾನಿ ರೇವಣ್ಣ, ಪ್ರಜ್ವಲ್ ಮತ್ತು ಸೂರಜ್ ಉಪಸ್ಥಿತರಿದ್ದರು. ರೇವಣ್ಣ 7ನೇ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಾರೆ. 5 ಬಾರಿ ಹೊಳೆನರಸಿಪುರ ಕ್ಷೇತ್ರದಲ್ಲಿ ಶಾಸಕರಾಗಿರುವ ರೇವಣ್ಣ 1999ರಲ್ಲಿ ನಡೆದ...

ಶ್ರೀರಂಗಪಟ್ಟಣಕ್ಕೆ ಚಾಲೆಂಜಿಂಗ್ ಸ್ಟಾರ್ ಎಂಟ್ರಿ, ಸಚ್ಚಿದಾನಂದ್‌ಗೆ ಸಾಥ್ ಕೊಟ್ಟ ದರ್ಶನ್ ..

ಮಂಡ್ಯ: ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದ ಶ್ರೀರಂಗಪಟ್ಟಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲಿಟ್ಟಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಹವಾ ಜೋರಾಗಿದ್ದು, ಸಾವಿರಾರು ಬೆಂಬಲಿಗರೊಂದಿಗೆ ಇಲ್ಲಿನ ಬಿಜೆಪಿ ಅಭ್ಯರ್ಥಿಯಾಗಿರುವ ಇಂಡವಾಳು ಸಚ್ಚಿದಾನಂದ, ಶ್ರೀರಂಗಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಚ್ಚಿದಾನಂದಗೆ ನಟ ದರ್ಶನ್ ಮತ್ತು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣದ ಮುಖ್ಯ...

ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಶೆಟ್ಟರ್..

ಬೆಂಗಳೂರು: ಬಿಜೆಪಿ ಮುಖಂಡ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ಸೇರ್ಪಡೆಯಾದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ...
- Advertisement -spot_img

Latest News

Political News: ಆಪರೇಷನ್ ಫುಟ್ಪಾತ್ ವಿರುದ್ಧ ಆರ್.ಅಶೋಕ್ ಬೇಸರ: ವ್ಯಾಪಾರಿಗಳ ಪರದಾಟಕ್ಕೆ ಸಲಹೆ

Political News: ಬೆಂಗಳೂರು ಸೇರಿ ಹಲವೆಡೆ ಫುಟ್‌ಪಾತ್ ತೆರವಿಗೆ ನೋಟೀಸ್ ಜಾರಿಯಾಗಿದ್ದು, ಕೆಲವೆಡೆ ನೋಟೀಸ್ ನೀಡದೇ ತೆರವು ಮಾಡಲಾಗ್ತಿದೆ ಮತ್ತು ಪುನರ್ವಸತಿ ಜಾಗ ನೀಡದೇ ಫುಟ್‌ಪಾತ್...
- Advertisement -spot_img