ಹಾಸನ: ಬೇಲೂರು: ಮೃತ ಪಟ್ಟ ಮಹಿಳೆಗೆ ಕೂಡಲೇ ಪರಿಹಾರ ಒದಗಿಸುವಂತೆ ಬ್ಲಾಕ್ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಿದರು. ಬಿಕ್ಕೋಡು ರಸ್ತೆಯ ಮದ್ಯದಲ್ಲಿ ಇದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಚೌಡನಹಳ್ಳಿ ಗ್ರಾಮದ ಕಮಲ ಕುಟುಂಬಕ್ಕೆ ಕೂಡಲೇ ಪರಿಹಾರ ಕೊಡಬೇಕು.
ಅಪಘಾತ ನಡೆದು ಒಂದು ದಿನ ನಡೆದರೂ ಸ್ಥಳೀಯ ಶಾಸಕರಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಬರದೇ ಇರುವುದನ್ನು ಖಂಡಿಸಿ...
ಹಾಸನ: ಸಕಲೇಶಪುರದ ಉದೇವಾರ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಅರಣ್ಯ ಇಲಾಖೆಯ ವಾಹನ ಆನೆಯ ಮುಂಭಾಗ ಧ್ವನಿವರ್ಧಕದ ಮೂಲಕ ಜನರಿಗೆ ತಿಳುವಳಿಕೆ ನೀಡುತ್ತಾ ಸಾಗುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿದೆ.
ಒಂದೆಡೆ ಅರಣ್ಯ ಇಲಾಖೆ ಧ್ವನಿ ವರ್ಧಕದ ಮೂಲಕ ಎಷ್ಟೇ ಪ್ರಚಾರ ನೀಡಿದರೂ ಸಹ ಸಾರ್ವಜನಿಕರು ಮಾತ್ರ ಆನೆಯ ಹಿಂದೆಯೇ...
ಹಾಸನ: ಹಾಸನದಲ್ಲಿಂದು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, 13ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾಸನ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಜನ ಸಂಪರ್ಕಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಕೂಡಾ ಆಗಮಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಬೇಲೂರಿನಲ್ಲಿ, ಮಧ್ಯಾಹ್ನ 3 ಗಂಟೆಗೆ ಸಕಲೇಶಪುರದಲ್ಲಿ ಜನಸಂಪರ್ಕ ಸಮಾವೇಶ ನಡೆಯಲಿದೆ....
ಹಿಂದಿನ ಕಾಲದಲ್ಲಿ ರಾಜರೆಲ್ಲ, ದೇವರನ್ನು ಪೂಜಿಸುತ್ತಿದ್ದರು. ದೇವರೊಂದಿಗೆ ಮಾತನಾಡುತ್ತಿದ್ದರು. ಋಷಿ ಮುನಿಗಳ ಮೂಲಕ ದೇವರ ದರ್ಶನ ಮಾಡುತ್ತಿದ್ದರು ಎಂದು ನಾವು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಜನಕ ರಾಜನೂ ಕೂಡ, ಹಲವು ಪುಣ್ಯ ಕಾರ್ಯಗಳನ್ನು ಮಾಡಿದ್ದ. ದಾನ ಧರ್ಮಗಳನ್ನು ಮಾಡಿದ್ದ. ಆದ್ರೆ ಅವನು ಕೊನೆಗೆ ನರಕಕ್ಕೆ ಹೋಗಬೇಕಾಯಿತು. ಹಾಗಾದ್ರೆ ಜನಕ ರಾಜ ನರಕಕ್ಕೆ ಹೋಗಲು ಕಾರಣವೇನು...
ಹೊಸಕೋಟೆ : ಹೊಸಕೋಟೆ ಕಾಂಗ್ರೆಸ್‌ನಲ್ಲಿ ಮತ್ತೆ ಭಿನ್ನಮತ ಭುಗಿಲೆದ್ದಿದೆ. ಶಾಸಕ ಶರತ್ ಬಚ್ಚೇಗೌಡ ವಿರುದ್ದ ಮೂಲ ಕಾಂಗ್ರೆಸ್ಸಿಗರು ಸಿಡಿದೆದ್ದಿದ್ದಾರೆ. ಈ ಬಾರಿ ಶರತ್ ಗೆ ಕಾಂಗ್ರೆಸ್ ಟಿಕೆಟ್ ಕೊಡದಂತೆ ಮುಖಂಡರ ಒತ್ತಾಯಿಸಿದ್ದಾರೆ.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರು ಕಿತ್ತಾಡಿಕೊಂಡಿದ್ದು, ಶಾಸಕ ಶರತ್ ಮೂಲ ಕಾಂಗ್ರೆಸ್ ನಾಯಕರನ್ನ ಕಡೆಗಣಿಸಿ ತನ್ನ ಬೆಂಬಲಿಗರಿಗೆ ಮನ್ನಣೆ ನೀಡುತ್ತಿದ್ದಾರೆಂದು...
ಹಾಸನ : ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಹಿನ್ನೆಲೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಯಿತು. ಈ .ಎಚ್..ಲಕ್ಷ್ಮಣ್ ನೇಮಕಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಆಕ್ರೋಶ ಹೊರಹಾಕಿದ್ದಾರೆ.
ಅಲ್ಪಸಂಖ್ಯಾತರ ಪರ ಮಾತನಾಡುವ ಸಿದ್ದರಾಮಯ್ಯ ಅವರನ್ನು ಬಿಜೆಪಿಯವರು ಸಿದ್ರಾಮುಲ್ಲಾಖಾನ್ ಅಂತಾರೆ....
ಹಾಸನ : ಹಾಸನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನೀವು ಕೆಟ್ಟು ಕೆರ ಹಿಡಿದು ಹೋಗಿದ್ದೀರಿ. ಗೆದ್ದು ಆಗೋಯ್ತು ಆಗ್ಲೆ ಸರ್ಕಾರ ರಚನೆ ಮಾಡಲು ರೆಡಿ ಆಗಿದ್ದಿರಾ ಅನ್ಕಂಡಿದಿರಾ. ನೆವರ್, ಇದೇ ರೀತಿ ಆದ್ರೆ ಎಲ್ಲೂ ಗೆಲ್ಲಲ್ಲ. ಹಾಸನ ಜಿಲ್ಲೆಗೆ ಸರಿಯಾದ ಒಬ್ಬ ಯಜಮಾನನ್ನು...
ಹಾಸನ : ಹಾಸನ ಜಿಲ್ಲೆಯಲ್ಲಿ ಗಜ ಗಲಾಟೆ ಮುಂದುವರೆದಿದ್ದು, ಒಂಟಿ ಸಲಗವೊಂದು, ರೈಲ್ವೆ ಹಳಿ ದಾಟಿ ಬಂದಿದೆ. ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆನೆ ರಸ್ತೆಯಲ್ಲಿ ನಡೆದು ಬಂದು ರೈಲ್ವೆ ಹಳಿ ದಾಟಿ ಕಾಫಿ ತೋಟದೊಳಗೆ ಹೋಗಿದೆ.
ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟನೆ..
ಇನ್ನೊಂದೆಡೆ ಇನ್ನೊಂದು ಒಂಟಿ ಸಲಗ...
ಹಾಸನ: ಶಾಸಕ ಎಚ್.ಕೆ.ಕುಮಾರಸ್ವಾಮಿ ವಿರುದ್ದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಏಕವಚನದಲ್ಲಿ ನಿಂದನೆ ವಿಚಾರಕ್ಕೆ ಸಂಬಂಧ ಪಟ್ಟಂತೆ ವಿಶ್ವನಾಥ್ ವಿರುದ್ಧ ಸಂಸದ ಪ್ರಜ್ವಲ್ ವಾಗ್ದಾಳಿ ನಡೆಸಿದ್ದಾರೆ. ಹಾಸನದ ಸಕಲೇಶಪುರದಲ್ಲಿ ಮಾತನಾಡಿದ ಪ್ರಜ್ವಲ್, ಒಬ್ಬ ಜನಪ್ರತಿನಿಧಿಗೆ ಗೌರವ ಕೊಡಲಿಲ್ಲ ಅಂದರೆ ಯಾವುದೇ ಸಭೆಗೆ ಬರಲು ಅವರು ಲಾಯಕ್ ಇಲ್ಲ. ನಾನು ಒಳ್ಳೆಯತನದಲ್ಲಿ ಅವರಿಗೆ ಒಂದು ಮಾತು...
ಕೋಲಾರ: ಬೆಳಗಾವಿ ವಿವಾದವನ್ನು ಕೆಣಕಿ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ, ಕನ್ನಡಿಗರ ಸಂಸ್ಥೆಗಳ ಮೇಲೆ, ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ಗೂಂಡಾಗಳ ರೀತಿ ದಾಳಿ ನಡೆಸುತ್ತಿರುವ ಮೇಲೆ ಕ್ರಮ ಕೈಗೊಳ್ಳಬೇಕು , ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಕೋಲಾರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ .
ಕೋಲಾರ ನಗರದ ಸಾರಿಗೆ ಬಸ್...