ಉತ್ತರಪ್ರದೇಶ: ಉತ್ತರಪ್ರದೇಶದ ಫಿರೋಜಾಬಾದ್ ನಲ್ಲಿ ನಿಗೂಢ ರೋಗಕ್ಕೆ 30ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಒಟ್ಟು 40 ಮಂದಿ ಬಲಿಯಾಗಿದ್ದಾರೆ. ಇನ್ನು ಫಿರೋಜಾಬಾದ್ ಮೆಡಿಕಲ್ ಕಾಲೇಜಿನಲ್ಲಿ 137 ಮಂದಿ ಮಕ್ಕಳು ಈ ನಿಗೂಢ ರೋಗಕ್ಕೆ ತುತ್ತಾಗಿದ್ದು ಅವರ ಪೈಕಿ 72 ಮಕ್ಕಳ ತೀವ್ರ ಅಸ್ವಸ್ಥಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾರೆ.
ಇನ್ನು ಮೇಲ್ನೋಟಕ್ಕೆ ಎಲ್ಲಾ ರೋಗಿಗಳಲ್ಲೂ...
ನವದೆಹಲಿ-ತಮಿಳುನಾಡಿಗೆ 30.6 ಟಿಎಂಸಿ ನೀರು ಬಿಡುವಂತೆ ರಾಜ್ಯಕ್ಕೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಇಂದು ನಡೆದ ಕಾವೇರಿ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮಿಳುನಾಡಿಗೆ 30.6 ಟಿಎಂಸಿ ನೀರು ಹರಿಸಬೇಕು ಅಂತ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ ಹಲ್ದರ್ ಸೂಚನೆ ನೀಡಿದ್ದಾರೆ.
ತಮಿಳುನಾಡಿಗೆ ಜೂನ್, ಜುಲೈ, ಅಗಸ್ಟ್ ತಿಂಗಳುಗಳಲ್ಲಿ ಬಿಡಬೇಕಿದ್ದ...
ಬೆಳಗಾವಿ: ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾಗ ಜನರ ಸಮಸ್ಯೆ ಕೇಳಲು ಬಾರದೆ ಇದೀಗ ಚುನಾವಣೆ ಪ್ರಚಾರಕ್ಕೆ ಜನರ ಬಳಿ ಓಡೋಡಿ ಹೋಗುತ್ತಿದ್ದಾರೆ ಅಂತ ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ಜಿಲ್ಲೆಯಿಂದ 4 ಮಂದಿ ಸಚಿವರಿದ್ದಾರೆ. ಆದ್ರೆ ಇವರೆಲ್ಲರೂ ಕೋವಿಡ್...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದ ನಂತರ ಇದೀಗ ರಾಜ್ಯ ಹೈಕೋರ್ಟ್ ತನ್ನ ಆವರಣದೊಳಗೆ ಕಕ್ಷಿದಾರರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಹೈಕೋರ್ಟ್ ಕಲಾಪ, ಪ್ರವೇಶ ಮತ್ತು ಅರ್ಜಿಗಳ ವಿಚಾರಣೆ ಸೇರಿದಂತೆ ರಾಜ್ಯ ಹೈಕೋರ್ಟ್ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ನೂತನ ಮಾರ್ಗಸೂಚಿ ಆಧಾರದ ಮೇಲೆ ಸೆ.01ರಿಂದ...
ಕಡೆಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತಂತೆ ಅದ್ಯಾಕೋ ಸರ್ಕಾರ ಸದ್ಯಕ್ಕೆ ಯಾವ ನಿರ್ಧಾರಕ್ಕೆ ಬರೋದಕ್ಕೂ ಹಿಂದೇಟು ಹಾಕ್ತಿದೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ರೂ ಕೂಡ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ.
ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಗಣೇಶೋತ್ಸವ ಆಚರಣೆಗೆ ಅನುಮತಿ ವಿಚಾರ ಸದ್ಯದ ಮಟ್ಟಿಗೆ ಇನ್ನೂ ಪ್ರಶ್ನೆಯಾಗಿಯೇ...
ರಾಜ್ಯಾದ್ಯಂತ 6 ರಿಂದ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಶೇಕಡಾ 2ರಷ್ಟು ಪಾಸಿಟಿವಿಟಿ ರೇಟ್ ಇರೋ ತಾಲೂಕುಗಳ ಶಾಲೆಗಳಿಗೆ ತರಗತಿ ನಡೆಸಲು ಅನುಮತಿ ನೀಡಲಾಗಿದೆ.
ರಾಜ್ಯದಲ್ಲಿ ಒಂದರಿಂದ 8ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭಿಸುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ತಜ್ಞರು ಮತ್ತು ಅಧಿಕಾರಿಗಳೊಂದಿಗೆ...
ಒಂದು ದಿನ ನಿದ್ರೆ ಮಾಡಿಲ್ಲ ಅಂದ್ರೆ, ಮಾರನೇ ದಿನ ಕಿರಿಕಿರಿ, ಆಲಸ್ಯದಿಂದ ಯಾವ ಕೆಲಸ ಮಾಡೋದಕ್ಕೂ ಮನಸಾಗೋದಿಲ್ಲ. ಏನನ್ನೋ ಕಳೆದುಕೊಂಡ ಅನುಭವವಾಗ್ತಿರುತ್ತೆ. ಇದು ನಮ್ಮೆಲ್ರಿಗೂ ಸಾಕಷ್ಟು ಬಾರಿ ಆಗಿರುತ್ತೆ. ಇನ್ನು ಅದೆಷ್ಟೋ ಜನ ತಿಂಗಳುಗಳ ಗಟ್ಟಲೆ ಸರಿಯಾದ ನಿದ್ರೆಯಿಲ್ಲದೆ ನಾನಾ ಆರೋಗ್ಯ ಸಮಸ್ಯೆ ಎದುರಿಸ್ತಿರ್ತಾರೆ. ಅಂತಹವಿಗಾಗಿ ಅಂತಾನೇ ಒಂದು ವಂಡರ್ಫುಲ್ ಟಿಪ್ಸ್ ಇಲ್ಲಿದೆ. ಬರೀ...
www.karnatakatv.net :ಬೆಂಗಳೂರು : ಸುಳ್ಳು ಹೇಳಿ ರಾಜ್ಯದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದ ಪ್ರತಾಪನನ್ನು ಒಳ್ಳೇ ಹುಡುಗ ಪ್ರಥಮ್ ಭೇಟಿಯಾಗಿದ್ದಾರೆ. ಡ್ರೋಣ್ ಕುರಿತು ಹೊಸದೊಂದು ಆವಿಷ್ಕಾರ ಮಾಡಿದ್ದೇನೆ, ಇದರಿಂದ ದೇಶಕ್ಕೆ ಹೆಮ್ಮೆ ತಂದಿದ್ದೇನೆಂದು ಸುಳ್ಳು ಹೇಳಿಕೊಂಡು ಸಿಕ್ಕಾಪಟ್ಟೆ ಫೇಮ್ ಗಿಟ್ಟಿಸಿಕೊಂಡಿದ್ದ ಪ್ರತಾಪನ ಕಥೆ ಸಿನಿಮಾ ಆಗ್ತಿದೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್ , ಡ್ರೋಣ್ ಪ್ರತಾಪನ...
www.karnatakatv.net :ಗುಂಡ್ಲುಪೇಟೆ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಶಾಸಕ ನಿರಂಜನ್ ಕುಮಾರ್ ಆರೋಗ್ಯ ಕಿಟ್ ವಿತರಿಸಿದರು.
ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮಂಡಳಿ ವತಿಯಿಂದ ಇಂದು ಕಟ್ಟಡ ಕಾರ್ಮಿಕರಿಗೆ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಆರೋಗ್ಯ ಕಿಟ್ ವಿತರಿಸಿದರು.
ಪಟ್ಟಣದ ಕೃಷಿ ಉತ್ಪನ್ನ...
www.karnatakatv.net : ಬೆಂಗಳೂರು: ಸಾರ್ವನಿಕವಾಗಿ ಗಣೇಶೋತ್ಸವ ಆಚರಿಸಿಯೇ ತೀರುತ್ತೇವೆ. ತಾಕತ್ತಿದ್ರೆ ನಮ್ಮನ್ನ ಅರೆಸ್ಟ್ ಮಾಡಿ ಅಂತ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಬಾರ್, ಮಾಲ್ ಗಳು ತೆರೆಯೋದಕ್ಕೆ ಮಾತ್ರ ಅವಕಾಶ ನೀಡಿರೋ ಸರ್ಕಾರ, ಗಣೇಶೋತ್ಸವ ಆಚರಣೆಗೆ ನಿಷೇಧ ಹೇರುತ್ತಿರೋದು ಯಾಕೆ ಅಂತ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಮೆರವಣಿಗೆ, ಭಜನೆ, ಸಂಗೀತ...
ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ...