ಬೆಂಗಳೂರು: ವಿಧಾನ ಮಂಡಲ ಕಲಾಪದಲ್ಲಿ ಇಂದು ಸಿಎಂ ಕುಮಾರಸ್ವಾಮಿ ತಮ್ಮ ದೃಢ ನಿರ್ಧಾರ ಹೇಳಿಕೊಂಡಿದ್ದಾರೆ. ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಿಎಂ ವಿಶ್ವಾಸಮತ ಯಾಚನೆಗೆ ನಾನು ಸಿದ್ಧ ಅಂತ ಘೋಷಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಇದೀಗ ಕಂಗಾಲಾಗಿದ್ದು ತಮ್ಮ ಶಾಸಕರನ್ನು ಸೇಫ್ ಮಾಡಿಕೊಳ್ತಿದ್ದಾರೆ.
ಅತೃಪ್ತ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಮಧ್ಯೆಯೇ ದೋಸ್ತಿಗಳು ಅಧಿವೇಶನ ನಡೆಸಿದ್ದಾರೆ, ತಮ್ಮನ್ನು...
ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿ ಆದೇಶಿಸಿದ್ದು, ದೋಸ್ತಿಗಳಿಗೆ ಮಂಗಳವಾರದ ವರೆಗೂ ರಿಲೀಫ್ ಸಿಕ್ಕಂತಾಗಿದೆ.
ನಮ್ಮ ರಾಜೀನಾಮೆ ಅಂಗೀಕಾರ ಮಾಡಲು ವಿಧನಾಸಭಾ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಿಳಂಬ ನೀತಿ ಅನುಸರಿಸುತ್ತಿದ್ದು, ರಾಜೀನಾಮೆ ಇತ್ಯಾರ್ಥ ಕೂಡಲೇ ಮಾಡಬೇಕೆಂದು ಅತೃಪ್ತ ಶಾಸಕರು ಸುಪ್ರೀಂ ಕೋರ್ಟ್...
ಯುನೈಟೆಟ್ ಸ್ಟೇಟ್ಸ್ : ಹವಾಮಾನ ವೈಪರಿತ್ಯ ಮತ್ತು ದಟ್ಟ ಮೋಡಗಳಿಂದಾಗಿ ವಿಮಾನದಲ್ಲಿ ಉಂಟಾದ ತೀವ್ರ ಪ್ರಕ್ಷುಬ್ಧತೆಯಿಂದಾಗಿ ಸೀಟ್ ಬೆಲ್ಟ್ ಹಾಕದ ಪ್ರಯಾಣಿಕರ ತಲೆ ವಿಮಾನದ ಸೀಲಿಂಗ್ ಗೆ ಬಡಿದು ಗಾಯಗೊಂಡಿರುವ ಪ್ರಕರಣ ನಡೆದಿದೆ.
ಕೆನಡಾದ ವಾನ್ಕೋವೊರ್ ನಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತಲುಪಬೇಕಿದ್ದ ಏರ್ ಕೆನಡಾ ವಿಮಾನದಲ್ಲಿ ಈ ಅವಘಡ ಸಂಭವಿಸಿದೆ. ಹೊನೆಲುಲು ಬಳಿ ತೆರಳುತ್ತಿದ್ದಂತೆಯೇ...
ಬೆಂಗಳೂರು: ಮರು ರಾಜೀನಾಮೆ ನೀಡಿ ಮತ್ತೆ ಮುಂಬೈಗೆ ತೆರಳಿ ದೋಸ್ತಿಗಳಿಗೆ ತಲೆನೋವು ತಂದಿಟ್ಟಿರೋ ಶಾಸಕರ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಹೀಗಾಗಿ ಇಬ್ಬರು ಶಾಸಕರನ್ನು ಅನರ್ಹಗೊಳಿಸಿದ್ರೆ ಉಳಿದವರೆಲ್ಲರೂ ವಾಪಸ್ ಬರ್ತಾರೆ ಅಂತ ಪಟ್ಟು ಹಿಡಿದಿದೆ.
ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಮುನಿಸಿಕೊಂಡು ಬಂಡಾಯವೆದ್ದು ಪಟಾಲಂ ಕಟ್ಟಿಕೊಂಡು ಸರ್ಕಾರವನ್ನು ಪತನದಂಚಿಗೆ ದೂಡಲು ಕಾರಣವಾದ ಮಾಸ್ಟರ್ ಮೈಂಡ್ ಶಾಸಕ ರಮೇಶ್...
ಬೆಂಗಳೂರು: ದೋಸ್ತಿಗಳಿಗೆ ತಲೆನೋವಾಗಿರೋ ಅತೃಪ್ತರನ್ನು ಹೇಗಾದ್ರೂ ಮಾಡಿ ಮಟ್ಟ ಹಾಕಲು ಹಪಹಪಿಸುತ್ತಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಇದೀಗ ಎಸಿಬಿ ಅಸ್ತ್ರ ಪ್ರಯೋಗ ಮಾಡಲಿದ್ದಾರೆ.
ದೋಸ್ತಿಗಳ ಸಲಹೆ, ಮನವೊಲಿಕೆಯನ್ನು ಧಿಕ್ಕರಿಸಿ ಮುಂಬೈನಿಂದ ಬೆಂಗಳೂರಿಗೆ ಬಂದು ಮತ್ತೆ ರಾಜೀನಾಮೆ ಸಲ್ಲಿಸಿ ಪುನಃ ಮುಂಬೈ ಸೇರಿರುವ ಶಾಸಕರಲ್ಲಿ 4 ಮಂದಿ ಮೇಲೆ ಸರ್ಕಾರ ಎಸಿಬಿ ಅಸ್ತ್ರ...
ಬೆಂಗಳೂರು: ಬಹುಮತವಿಲ್ಲದ ಸರ್ಕಾರವನ್ನು ವಿಪಕ್ಷ ಎದುರಿಸುತ್ತಿರೋದು ಇದೇ ಮೊದಲು ಅಂತ ಬಿಜೆಪಿ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಶಾಸಕರ ಸರಣಿ ರಾಜೀನಾಮೆಯಿಂದ ದೃತಿಗೆಡದ ದೋಸ್ತಿ ಸರ್ಕಾರ ಇಂದು ವಿಧಾನಮಂಡಲ ಅಧಿವೇಶನ ನಡೆಸುತ್ತಿದೆ. ಇದು ಸಹಜವಾಗಿಯೇ ಬಿಜೆಪಿ ಆರೋಪಗಳಿಗೆ ಗುರಿಯಾಗಿದ್ದು, ದೋಸ್ತಿಗಳ ವಿರುದ್ಧ ಟೀಕಾಸ್ತ್ರ ಪ್ರಯೋಗ ಮುಂದುವರಿದಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಎಂಎಲ್...
ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ವಿಳಂಬ ನೀತಿ ಅನುಸರಿಸಿದ್ರು ಅನ್ನೋ ಬಿಜೆಪಿ ಆರೋಪಕ್ಕೆ ಸ್ಪೀಕರ್ ರಮೇಶ್ ಕುಮಾರ್ ತಿರುಗೇಟು ನೀಡಿದ್ದಾರೆ. ನಿಯಮಾವಳಿಗಳನ್ನೆಲ್ಲಾ ಬದಿಗಿಟ್ಟು ನಾನು ಮಿಂಚಿನ ವೇಗದಲ್ಲಿ ಕೆಲಸ ಮಾಡಬೇಕಿತ್ತಾ ಅಂತ ಪ್ರಶ್ನಿಸಿದ್ದಾರೆ.
ಅತೃಪ್ತ ಶಾಸಕರನ್ನು ಖುದ್ದು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ಕಳೆದ ಶನಿವಾರದಂದು ನಾನು 12.45ರ ವೇಳೆ ಕಚೇರಿಯಿಂದ...
ಬೆಂಗಳೂರು: 13 ಶಾಸಕರ ರಾಜೀನಾಮೆ ಪತ್ರಗಳ ಪೈಕಿ 8 ಮಂದಿಯ ರಾಜೀನಾಮೆ ಕ್ರಮಬದ್ಧವಾಗಿಲ್ಲವೆಂದು ಹೇಳಿದ ಹಿನ್ನೆಲೆ ಹಾಗೂ ಸುಪ್ರೀಂನ ಆದೇಶದಂತೆ ಇಂದು ಮುಂಬೈನಿಂದ ಬಂದ ಅತೃಪ್ತ ಶಾಸಕರು ಮತ್ತೆ ರಾಜೀನಾಮೆ ಸಲ್ಲಿಸಿದರು.
ಮುಂಬೈನಿಂದ ವಿಶೇಷ ವಿಮಾನದ ಮೂಲಕ ವಿಧಾನಸೌಧದಲ್ಲಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ರನ್ನು ಭೇಟಿ ಮಾಡಿದ ಅತೃಪ್ತ ಶಾಸಕರಾದ, ಬೈರತಿ ಬಸವರಾಜ್, ರಮೇಶ್...
ಬೆಂಗಳೂರು: ವಿಧಾನಸೌಧದ ಸ್ಪೀಕರ್ ಕಚೇರಿಗೆ ಅತೃಪ್ತ ಶಾಸಕರು ಭೇಟಿ ನೀಡುತ್ತಿರೋ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶಕ್ತಿ ಸೌಧದ ದೊಳಕ್ಕೆ ಸಾರ್ವಜನಿಕರಲ್ಲದೆ ರಾಜಕೀಯ ಮುಖಂಡರಿಗೂ ಪ್ರವೇಶ ನಿರ್ಬಂಧ ಮಾಡಲಾಗಿದೆ.
ಮುಂಬೈನಿಂದ ಆಗಮಿಸುತ್ತಿರೋ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ಕುರಿತಾಗಿ ಸ್ಪೀಕರ್ ರಮೇಶ್ ಕುಮಾರ್ ಕಚೇರಿಗೆ ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೂಚನೆ ಹಾಗೂ ಭದ್ರತಾ...
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟಿಗೆ ಕಾರಣರಾದ ಅತೃಪ್ತರಿಗೆ ಪಾಠ ಕಲಿಸಲು ದೋಸ್ತಿ ಮುಂದಾಗಿದ್ದು ಇದೀಗ ಎಲ್ಲಾ 16 ಮಂದಿ ಶಾಸಕರ ಅನರ್ಹತೆ ಕೋರಿ ಸ್ಪೀಕರ್ ರಮೇಶ್ ಕುಮಾರ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅತೃಪ್ತ ಶಾಸಕರು ಸುಪ್ರೀಂ ನೀಡಿರೋ ಸೂಚನೆಯಂತೆ ಮುಂಬೈನಿಂದ ಬೆಂಗಳೂರಿಗೆ ಸ್ಪೀಕರ್ ಭೇಟಿಯಾಗಲು ತೆರಳುತ್ತಿದ್ದಂತೆ ದೋಸ್ತಿಗಳು ಇದೀಗ ಅವರಿಗೆ ಮತ್ತೊಂದು ಶಾಕ್ ನೀಡಿದೆ....
ದೇಶದಲ್ಲಿ ಹವಾಮಾನದ ಸ್ವರೂಪ ದಿಢೀರ್ ಬದಲಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ವ್ಯವಸ್ಥೆ ಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ...