Thursday, June 25, 2026

karnatakatv news

ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ದುಪ್ಪಟ್ಟು; ಪ್ರತಿ ಕೆಜಿಗೆ 785 ರೂ.!

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ಒಂದು ಕೆಜಿ 785 ರೂಪಾಯಿಗೆ ತಲುಪಿದ್ದು, ಆ ಮೂಲಕ ರೇಷ್ಮೆ ಬೆಳಗಾರರ ಮೊಗದಲ್ಲಿ ಸಂತಸ ಮೂಡಿದೆ. ಹೌದು ಈ ಹಿಂದೆ 300 ರೂಪಾಯಿ ಆಸುಪಾಸಿನಲ್ಲಿದ್ದ ಒಂದು ಕೆಜಿ ರೇಷ್ಮೆ ಗೂಡಿನ ದರ ಕೊರೋನಾ ಮಹಾಮಾರಿ ಹೊಡೆತಕ್ಕೆ ಸಿಲುಕಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಕೊರೋನಾ ಸಂದರ್ಭದಲ್ಲಿ ಡೀಲರ್‌ಗಳು ರೇಷ್ಮೆ...

ಪೆನ್ಸಿಲ್​ ಕದ್ದಿದ್ದಕ್ಕೆ ಸ್ನೇಹಿತನ ಮೇಲೆ ದೂರು..!

ಆಂಧ್ರಪ್ರದೇಶ : ಕರ್ನೂಲು ಜಿಲ್ಲೆಯ ಪೆದ್ದಕಡಬೂರುನ ಹನುಮಂತು ಪೆನ್ಸಿಲ್​ ಕದ್ದಿದ್ದಕ್ಕೆ ಸ್ನೇಹಿತನ ಮೇಲೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸರನ್ನು ಕಂಡರೇ ಎಲ್ಲರಿಗೂ ಭಯ.. ಪೊಲೀಸ್​ ಅವರ ಸಹವಾಸನೇ ಬೇಡ ಗುರೂ ಅಂತ ಅದೆಷ್ಟೋ ಮಂದಿ ಹೇಳಿರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕೇಸ್​ ದಾಖಲಾಗಿದೆ. ಆ ಕೇಸ್​ ಕಂಡು ಪೊಲೀಸರೇ...

ವಿವಿಧ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿವಿಧ ಇಲಾಖೆಯ ಹುದ್ದೆಗಳ ನೇಮಕಾತಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ.2021 -22 ನೇ ಸಾಲಿನಲ್ಲಿ ಕೊರೋನಾ ಕಾರಣದಿಂದ ಆರ್ಥಿಕ ಮಿತವ್ಯಯ ಸಾಧಿಸಲು ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಹುದ್ದೆಗಳು...

ಕೇಂದ್ರ ಸರ್ಕಾರ ವಿವಿಧ ಬೇಡಿಕೆ ಈಡೇರಿಸುವಂತೆ ರಾಯಚೂರು ರೈತರಿಂದ ಪ್ರತಿಭಟನೆ :

ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಬೆನ್ನಲ್ಲೆ , ರಾಯಚೂರು ಸಂಯುಕ್ತ ಕಿಸಾನ್ ಹೋರಾಟ ಸಮಿತಿಯಿಂದ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಬೆಳೆಹಾನಿ ವಿವಿದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕೆಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಯನ್ನು ನಡೆಸಿದರು .ರೈತ ಮುಖಂಡ ಚಾಮರಸ ಪಾಟೀಲ್ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು...

ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ !

ಕೊರೊನಾ ಹಿನ್ನೆಲೆ ಈ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗಿತ್ತು. ಹಾಗಾಗಿ ಶಿಕ್ಷಕರು ಸಿಕ್ಕಿರುವ ಸಮಯದಲ್ಲಿಯೇ ಇಡೀ ಪಠ್ಯ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದರು. ಇದು ಮಕ್ಕಳ ಮೇಲೆಯೂ ಪರಿಣಾಮ ಬೀರಿತ್ತು. ಹೀಗಾಗಿ ಸಚಿವ ಬಿ.ಸಿ.ನಾಗೇಶ್ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದ್ದಾರೆ. ಪ್ರತಿ ವರ್ಷ 240 ಕ್ಕೂ ಹೆಚ್ಚು ಬೋಧನೆ ದಿನಗಳು ಸಿಗುತ್ತಿತ್ತು. ಆದ್ರೆ ಈ ವರ್ಷ...

ಸಂವಿಧಾನ ದಿನವನ್ನು ಕುರಿತು ಭಾಷಣ ಮಾಡಿದ ಮೋದಿ.

ನವದೆಹಲಿ,: ಭಾರತದ ಸಂವಿಧಾನ ರಚಿಸಿದ ದಿನವನ್ನು ಸ್ಮರಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ದಿನ ಆಚರಿಸುತ್ತಿದ್ದೇವೆ. ಮಹಾತ್ಮ ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರತಿಯೊಬ್ಬರನ್ನೂ ನಾವಿಂದು ಜ್ಞಾಪಿಸಿಕೊಳ್ಳಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಸಂಸತ್ ಸೆಂಟ್ರಲ್ ಹಾಲ್ ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನಮಗೆ ಸಂವಿಧಾನ ರಚನೆ ಮಾಡುವುದಾಗಿದ್ದರೆ ಹೇಗಿರುತ್ತಿತ್ತು ಎಂದು ಎಲ್ಲರೂ...

ಗ್ರಾಜುಯೇಟ್​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್  ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. HPCL​ನಲ್ಲಿ ಗ್ರಾಜುಯೇಟ್​ ಅಪ್ರೆಂಟಿಸ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಎಂಜಿನಿಯರಿಂಗ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. HPCL ನಲ್ಲಿ ನೌಕರಿ ಮಾಡ ಬಯಸುವ ಅರ್ಹ ಅಭ್ಯರ್ಥಿಗಳು ನವೆಂಬರ್ 23 ರಿಂದ ಡಿಸೆಂಬರ್ 06 ರವರೆಗೆ ಆನ್​ಲೈನ್ ನಲ್ಲಿ ಅರ್ಜಿ...

66 ಮೆಡಿಕಲ್ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್.

ಧಾರವಾಡ,: ಅವಳಿನಗರದಲ್ಲಿ ಕೊರೊನಾ ಹೆಚ್ಚಾಗುವ ಭೀತಿ ಮತ್ತೆ ಹೆಚ್ಚಾಗಿದೆ. ರಾಜ್ಯದ ಧಾರವಾಡ ಜಿಲ್ಲೆಯ ಎಸ್‌ಡಿಎಂ ಮೆಡಿಕಲ್ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ. ಇದರಿಂದಾಗಿ ಎರಡು ಹಾಸ್ಟೆಲ್‌ಗಳನ್ನು ಸೀಲ್ ಮಾಡಲಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು, ಇತ್ತೀಚೆಗೆ ಕಾಲೇಜಿನಲ್ಲಿ...

ಎಲ್ಲಾ ಜಿಲ್ಲೆಗಳಲ್ಲಿ `ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಕೇಂದ್ರ’ ಪ್ರಾರಂಭಕ್ಕೆ ಸರ್ಕಾರ್ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಸೇರಿದಂತೆ ಇತರೆ ಸೌಲಭ್ಯ ಪಡೆಯೋದಕ್ಕೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆಯೊಗೋದು ಕಡ್ಡಾಯವಾಗಿದೆ. ಈ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಸೇರಿದಂತೆ ಕೆಲ ಆಯ್ದ ಜಿಲ್ಲೆಗಳಲ್ಲಿ ಮಾತ್ರ ಬರೆಯೋದಕ್ಕೆ ಅವಕಾಶ ನೀಡಲಾಗಿತ್ತು.ಇದೀಗ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಹೆಚ್ಚುವರಿಯಾಗಿ ಪರೀಕ್ಷಾ...

ತನಿಖಾಧಿಕಾರಿ ಎದುರು ಕಣ್ಣೀರು ಹಾಕಿದ ಹಂಸಲೇಖ

ಮೈಸೂರಿನಲ್ಲಿ ಕೆಲದಿನಗಳ ಹಿಂದೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ , ಮೇಲ್ಜಾತಿ ,ಕೀಳುಜಾತಿ , ಜಾತಿ ತಾರತಮ್ಯ ವಿಚಾರವಾಗಿ ಮಾತನಾಡುತ್ತದ್ದಾಗ ಅವಹೇಳನಕಾರಿ ಹೇಳಿಕೆ ಬಳಸಿದ್ದು ಅದೇನೆಂದರೆ ಪೇಜಾವರ ಶ್ರೀಗಳ ವಿಚಾರವನ್ನು ಇಟ್ಟುಕೊಂಡು ಮಾತನಾಡಿದ್ದರು . ಈ ವಿಷಯ ಬಾರಿ ವಿವಾದ ಹುಟ್ಟುಹಾಕಿತ್ತು ಹಂಸಲೇಖ ಹೇಳಿಕೆಯನ್ನು ರಾಜ್ಯಾದ್ಯಂತ ಹಲವಾರು ಜನರು ಖಂಡಿಸಿದ್ದರು ,...
- Advertisement -spot_img

Latest News

Yallapura News: ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಶಿವರಾಮ್ ಹೆಬ್ಬಾರ್

Yallapura News: ಯಲ್ಲಾಪುರ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ...
- Advertisement -spot_img