ಶಾಲಾ- ಕಾಲೇಜುಗಳಿಗೆ ಫೋನ್ ತೆಗೆದುಕೊಂಡು ಬರಬಾರದು ಅನ್ನೋ ನಿಯಮವಿದೆ. ಆ ನಿಯಮವನ್ನ ಮೀರಿ, ಶಾಲೆಗೆ ಫೋನ್ ತೆಗೆದುಕೊಂಡು ಬಂದಿದ್ದಕ್ಕೆ, ಅವರ ಫೋನನ್ನೆಲ್ಲ ತೆಗೆದುಕೊಂಡು, ಬೆಂಕಿಗೆ ಹಾಕಿದ ಘಟನೆ ನಡೆದಿದೆ. ಇಂಡೋನೇಷಿಯಾದ ಶಾಲೆಯೊಂದರಲ್ಲಿ ಈ ಘಟನೆ ನೆಡದಿದ್ದು, ಈ ಬಗ್ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆ ಇಂಡೋನೆಷಿಯಾದ ಯಾವ ಶಾಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿಲ್ಲ. ಆದ್ರೆ ಬೋರ್ಡಿಂಗ್ ಸ್ಕೂಲ್‌ನಲ್ಲಿ ಹೀಗೆ ಮಾಡಲಾಗುತ್ತದೆ ಎನ್ನಲಾಗಿದೆ. ಅಲ್ಲಿ ಮೊದಲೂ ಫೋನ್‌ಗಳನ್ನ ಹೀಗೆ ಸುಡಲಾಗುತ್ತಿತ್ತು. ಈಗಲೂ ಹಾಗೆ ಮಾಡಿದ್ದಾರೆಂದು ತಿಳಿದು ಬಂದಿದೆ. ಇಲ್ಲಿ ಐ ಫೋನ್ ನಂಥ ಬೆಲೆ ಬಾಳುವ ಫೋನ್‌ಗಳನ್ನ ಶಿಕ್ಷಕಿಯರು ಬೆಂಕಿಗೆ ಎಸೆದಿದ್ದು, ವೀಡಿಯೋದಲ್ಲಿ ಕೆಲವರು ನಗುವ ಸದ್ದು ಕೇಳಿಸುತ್ತಿತ್ತು. ವಿದ್ಯಾರ್ಥಿಗಳು ಫೋನನ್ನು ಬೆಂಕಿಗೆಸೆಯಬೇಡಿ ಎಂದು ಬೇಡಿಕೊಳ್ಳುತ್ತಿದ್ದರು.
ಕೊರೊನಾ ಬಂದ ಬಳಿಕ ಹಲವಾರು ಶಾಲೆಗಳಲ್ಲಿ ಆನ್‌ಲೈನ್ ಪಾಠ ಮಾಡಲಾಗುತ್ತಿತ್ತು. ಆವಾಗ ಮೊಬೈಲನ್ನೇ ಬಳಸಬೇಕಿತ್ತು. ಆವಾಗ ವಿದ್ಯಾರ್ಥಿಗಳ ತಂದೆ ತಾಯಿ ಕಷ್ಟಪಟ್ಟು ದುಡಿದು ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ತೆಗೆದುಕೊಟ್ಟಿರುತ್ತಾರೆ. ಆದ್ರ ನೀವು ಅವರ ಕಷ್ಟವನ್ನೂ ಅರಿಯದೇ, ಹೀಗೆ ಬೆಲೆ ಬಾಳುವ ಫೋನನ್ನು ಬೆಂಕಿಗೆ ಎಸೆದಿದ್ದೀರಾ. ನಿಜವಾಗಲೂ ಇದು ತಪ್ಪು ನಿರ್ಧಾರ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಹೀಗೆ ಮಾಡಿದರೇನೇ ಮಕ್ಕಳಿಗೆ ಬುದ್ಧಿ ಬರೋದು. ಇನ್ನೊಮ್ಮೆ ಮಕ್ಕಳು ಶಾಲೆಗೆ ಫೋನ್ ತರುವ ಸಾಹಸಕ್ಕೆ ಕೈ ಹಾಕುವುದಿಲ್ಲವೆಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
https://www.instagram.com/reel/CaM9pgfM3VN/?utm_source=ig_web_copy_link